ನವದೆಹಲಿ : ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮದುವೆಯ ಸೀಸನ್ (Wedding Season) ನಡೆಯುತ್ತಿದೆ. ಪ್ರತಿ ಮದುವೆಯಲ್ಲಿಯೂ ಅದ್ದೂರಿ ಏರ್ಪಾಡುಗಳನ್ನು ಮಾಡಲಾಗಿರುತ್ತದೆ. ಗುಜರಾತ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭೀಕರ ಬೆಂಕಿ ಅನಾಹುತ (Fire broke out in Wedding) ಸಂಭವಿಸಿದೆ. ಈ ಅನಾಹುತದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social media video) ಕಾಣಿಸಿಕೊಂಡಿದೆ. ಗುಜರಾತ್‌ನಲ್ಲಿ ವಿಜೃಂಭಣೆಯಿಂದ ಸಾಗುತ್ತಿದ್ದ ಮದುವೆ ದಿಬ್ಬಣದಲ್ಲಿ ವರ ಏರಿದ್ದ ಕುದುರೆ ಗಾಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಅದೃಷ್ಟವಷಾತ್ ವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೈರಲ್ ಆಗುತ್ತಿರುವ ಭಯಾನಕ ವಿಡಿಯೋ :
ಗುಜರಾತ್‌ನ ಪಂಚಮಹಲ್ ನಗರದ ಜೋಗೇಶ್ವರಿ ಮಹಾದೇವ ದೇವಸ್ಥಾನದ ನಿವಾಸಿ ಶೈಲೇಶ್ ಭಾಯಿ ಶಾ ಅವರ ಪುತ್ರ ತೇಜಸ್ ಅವರ ವಿವಾಹದ (wedding video) ವೇಳೆ ಘಟನೆ ನಡೆದಿದೆ. ಮದುವೆಯ ದಿಬ್ಬಣ ಸಂಭ್ರಮದಿಂದಲೇ ಸಾಗಿತ್ತು. ಆದರೆ, ವರ ತೇಜಸ್ ಇದ್ದ ಕುದುರೆ ಗಾಡಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ (fire accident) ಸ್ಥಳದಲ್ಲಿ ಅರಚಾಟ ಕಿರುಚಾಟ ಕೇಳಿ ಬಂದಿತ್ತು. ಸಕಾಲದಲ್ಲಿ ವರನನ್ನು ಕುದುರೆ ಗಾಡಿಯಿಂದ ಇಳಿಸಿರುವ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಇದನ್ನೂ ಓದಿ : Shocking video : ಮದುವೆಯ ವೇದಿಕೆಗೆ ಉಯ್ಯಾಲೆ ಮೇಲೆ ಎಂಟ್ರಿ ಕೊಟ್ಟ ವಧು-ವರ, ಹಗ್ಗ ತುಂಡಾಗಿ 12 ಎತ್ತರದಿಂದ ಕೆಳಗೆ ಬಿದ್ದ ಜೋಡಿ
ಇಡೀ ಗಾಡಿ ಸುಟ್ಟು ಕರಕಲಾಗಿರುವುದನ್ನು ವಿಡಿಯೋದಲ್ಲಿ (Video) ಕಾಣಬಹುದು. ಗಾಡಿಗೆ ಬೆಂಕಿ ಹೊತ್ತಿಕೊಂಡ ನಂತರ ಅದನ್ನು ನಿಯಂತ್ರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ.
गुजरात- पंचमहल जिले के शहरा तालुका की घटना
बारात के वक्त दूल्हे की बग्गी में पड़े पटाखों में लगी आग, बग्गी जल कर ख़ाक दूल्हे को बाल बाल बचाया गया
तस्वीरें विचलित कर सकती हैं @indiatvnews #Shocking #ViralVideo pic.twitter.com/rgLogt2IYU
— Nirnay Kapoor (@nirnaykapoor) December 14, 2021
ಅವಘಡದ ಸಮಯದಲ್ಲಿ ಗಾಡಿಯಲ್ಲೇ ಇದ್ದ ವರ :
ಈ ಅವಘಡದ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ಅಲ್ಲದೆ ಕುದುರೆಗಾಡಿಯಲ್ಲಿ ಬಳಸಲಾಗಿದ್ದ ಕುದುರೆಗಳ ಪ್ರಾಣವನ್ನು ಕೂಡಾ ಉಳಿಸಲಾಗಿದೆ. ವರದಿಗಳ ಪ್ರಕಾರ, ಕುದುರೆ ಗಾಡಿಯಲ್ಲಿಯೇ ಪಟಾಕಿಗಳನ್ನು ಇರಿಸಲಾಗಿತ್ತು. ದಿಬ್ಬಣ ಬರುತ್ತಿದ್ದಾಗ ಹಚ್ಚಿದ ಪಟಾಕಿಯ ಕಿಡಿ, ಕುದುರೆ ಗಾಡಿಯಲ್ಲಿರುವ ಪಟಾಕಿಗೆ ತಗುಲಿ ಈ ಅನಾಹುತ ಸಂಭವಿಸಿದೆ. ಈ ಘಟನೆ ನಡೆದಾಗ ಕುದುರೆ ಗಾಡಿಯಲ್ಲಿ ವರ ಮತ್ತು ಸಣ್ಣ ಮಕ್ಕಳು ಕೂಡಾ ಗಾಡಿಯಲ್ಲಿದ್ದರು. ಆದರೆ ತಕ್ಷಣ ಕಾರ್ಯಪ್ರವೃತರಾದ ಕಾರಣ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಇದನ್ನೂ ಓದಿ : Viral Video: ಹಸೆಮಣೆ ಮೇಲೆ ವರಮಾಲೆ ಎಸೆದು ಹೋದ ವಧು, ಮುಂದೇನಾಯ್ತು, ನೀವೇ ನೋಡಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ