Aero India 2019: ಸೂರ್ಯ ಕಿರಣ್ ತಂಡದಿಂದ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿಗೆ ಗೌರವ
ಸೂರ್ಯ ಕಿರಣ್ ತಂಡವು ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅವರಿಗೆ ಗೌರವ ಸಲ್ಲಿಸಲಿದೆ.
ಬೆಂಗಳೂರು: ಸೂರ್ಯ ಕಿರಣ್ ತಂಡ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2019 ಸಮಾರಂಭದಲ್ಲಿ, ತಾಲೀಮು ನಡೆಸುತ್ತಿದ್ದ ವೇಳೆ ಎರಡು ವಿಮಾನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅವರಿಗೆ ಸೂರ್ಯ ಕಿರಣ್ ತಂಡ ಗೌರವ ಸಲ್ಲಿಸಲಿದೆ. 2019ರ ಫೆಬ್ರವರಿ 19ರಂದು ಎರಡು ಸೂರ್ಯ ಕಿರಣ್ ವಿಮಾನಗಳು ಅಪಘಾತಕ್ಕೀಡಾಗಿ, ಓರ್ವ ಪೈಲಟ್ ಸಾಹಿಲ್ ಗಾಂಧಿ ಮೃತಪಟ್ಟರೆ, ಉಳಿದ ಮೂವರಿಗೆ ತೀವ್ರಗಾಯಗಳಾಯಿತು.
ಅದಾಗ್ಯೂ, ಪ್ರದರ್ಶನಗೊಳ್ಳಬೇಕಿದ್ದ ಒಂಬತ್ತು ವಿಮಾನಗಳಲ್ಲಿ ಕೇವಲ ಏಳು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ ಎಂದು ವರದಿಗಳು ಹೇಳಿವೆ.
ನಗರದ ಯಲಹಂಕಾ ಏರ್ ಫೋರ್ಸ್ ನಲ್ಲಿ ಸೂರ್ಯ ಕಿರಣ್ ತಂಡವು ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅವರಿಗೆ ಗೌರವ ಸಲ್ಲಿಸಲಿದೆ. ಅಧಿಕಾರಿಗಳ ಪ್ರಕಾರ, ಮೃತ ವಿಂಗ್ ಕಮಾಂಡರ್ ಗಾಂಧಿಯವರ ವಿಶೇಷ ಕುಶಲತೆ ಈ ವೇಳೆ ಪ್ರದರ್ಶನಗೊಳ್ಳಲಿದೆ.
ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ವಿಮಾನ ಅಪಘಾತದ ಬಳಿಕ ಏರೋ ಇಂಡಿಯಾ 2019 ರಲ್ಲಿ ಸೂರ್ಯ ಕಿರಣ ವಿಮಾನ ಪಾಲ್ಗೊಳ್ಳುತ್ತಿಲ್ಲ ಎಂದು ಘೋಷಿಸಿದ ಬಳಿಕ ಈ ಹೇಳಿಕೆ ನೀಡಲಾಗಿದೆ.
ಸಾಹಿಲ್ ಗಾಂಧಿ 1982 ರ ನವೆಂಬರ್ 18 ರಂದು ಹಿಸಾರ್ನಲ್ಲಿ ಜನಿಸಿದರು. ಅವರು ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಶಾಲೆಯಲ್ಲಿ 12 ನೇ ತರಗತಿಯವರೆಗೂ ಅಧ್ಯಯನ ಮಾಡಿದರು. ಇದರ ನಂತರ, ನ್ಯಾಷನಲ್ ಅಕಾಡೆಮಿಯಿಂದ ಫೈಲಟ್ ಆಗಿ ಕನಸು ಹೊತ್ತು ಬಂದ ಸಾಹಿಲ್ 2004 ರ ಜೂನ್ 19 ರಂದು ಸುಖೋಯ್ 30 ರ ಪೈಲಟ್ ಆಗಿ ವಾಯುಸೇನೆಗೆ ಕಾಲಿಟ್ಟಿದ್ದರು. ಏರ್ ಫೋರ್ಸ್ ನಲ್ಲಿ ವಿಂಗ್ ಕಮಾಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅವರು ಸದ್ಯ ಕರ್ನಾಟಕದ ಬೀದರ್ ನಲ್ಲಿ ವಾಸವಾಗಿದ್ದರು. 2009 ರಲ್ಲಿ, ಸಾಹಿಲ್ ಹಿಮಾನಿಯವರನ್ನು ವಿವಾಹವಾದರು, ಅಮೆರಿಕದ ಕಂಪನಿಯಲ್ಲಿ ಹಮೀನಾ ಕೆಲಸ ಮಾಡುತ್ತಾರೆ. ಸಾಹಿಲ್ ಗೆ 5 ವರ್ಷದ ರಿಯಾನ್ ಎಂಬ ಮಗನಿದ್ದಾನೆ.
ವಿಭಿನ್ನವಾದ ಮತ್ತು ರಿಸ್ಕ್ ತೆಗೆದುಕೊಳ್ಳುವಂತ ಕೆಲಸದಲ್ಲಿ ತೊಡಗುತ್ತಿದ್ದ ಸಾಹಿಲ್:
ಸಾಹಿಲ್ ಗಾಂಧಿ ಅನುಭವಿ ಪೈಲಟ್ ಆಗಿದ್ದು, ಸೂರ್ಯ ಕಿರಣ್ ತಂಡದೊಡನೆ ಮೊದಲಿನಿಂದಲೂ ಕೆಲಸ ಮಾಡುತ್ತಿದ್ದರು. ಯಾವಾಗಲೂ ವಿಭಿನ್ನವಾದ ಮತ್ತು ರಿಸ್ಕ್ ತೆಗೆದುಕೊಳ್ಳುವಂತ ಕೆಲಸದಲ್ಲಿ ಸಾಹಿಲ್ ತೊಡಗುತ್ತಿದ್ದರು.
ಸೂರ್ಯ ಕಿರಣ ಮತ್ತೆ ಪ್ರದರ್ಶನಗೊಳ್ಳುವಂತೆ ಮಾಡಿದ್ದ ಸಾಹಿಲ್:
ಸೂರ್ಯಕಿರಣ್ ವಿಮಾನ 2011ರಲ್ಲಿ ಕೊನೆಯದಾಗಿ ಪ್ರದರ್ಶನ ನೀಡಿತ್ತು. ಅದಾಗಿ ಆರು ವರ್ಷಗಳ ನಂತರ 2017ರಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಸಾಹಿಲ್ ಗಾಂಧಿ ನೇಮಕವಾಗಿದ್ದರು. 2017ರಲ್ಲಿ ವೈಮಾನಿಕ ಪ್ರದರ್ಶನ ರದ್ದು ಮಾಡಲು ಹೊರಟಿದ್ದ ಸೂರ್ಯಕಿರಣ್ ವಿಮಾನವನ್ನ ಮತ್ತೆ ಪ್ರದರ್ಶನ ಮಾಡುವಂತೆ ಮಾಡಿದ ಲೀಡರ್ ಸಾಹಿಲ್ ಗಾಂಧಿ.