`ಅಟಲ್ ಯುಗ`ದಿಂದ` ಮೋದಿ ರಾಜ್ `ವರೆಗೆ` ಸುಷ್ಮಾ ಸ್ವರಾಜ್ ರಾಜಕೀಯ ಹೆಜ್ಜೆ ಗುರುತು
ಉತ್ತಮ ಸಂಸದೀಯ ಪಟುವಾಗಿದ್ದ ಸುಷ್ಮಾ ಸ್ವರಾಜ್, ಪಕ್ಷದಲ್ಲಿ ಮೆಚ್ಚುಗೆ ಮತ್ತು ಮಹತ್ವದ ಸ್ಥಾನ ಪಡೆದಿದ್ದರು.
ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಮತ್ತು ಬಿಜೆಪಿಯ ಹಿರಿಯ ಮುಖಂಡ ಸುಷ್ಮಾ ಸ್ವರಾಜ್ ಮಂಗಳವಾರ ರಾತ್ರಿ ಏಮ್ಸ್ ನಲ್ಲಿ ನಿಧನರಾದರು. ಹೃದಯಾಘಾತಕ್ಕೆ ಒಳಗಾಗಿದ್ದ ಸುಷ್ಮಾ ಅವರನ್ನು ನಿನ್ನೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶಯಾರದು.
ಸುಷ್ಮಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪ್ರಕಾಶ್ ಜಾವಡೇಕರ್ ಮತ್ತು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಏಮ್ಸ್ ತಲುಪಿದರು.
ಉತ್ತಮ ಸಂಸದೀಯ ಪಟುವಾಗಿದ್ದ ಸುಷ್ಮಾ ಸ್ವರಾಜ್, ಪಕ್ಷದಲ್ಲಿ ಮೆಚ್ಚುಗೆ ಮತ್ತು ಮಹತ್ವದ ಸ್ಥಾನ ಪಡೆದಿದ್ದರು. 'ಅಟಲ್ ಯುಗ'ದಿಂದ' ಮೋದಿ ರಾಜ್ 'ವರೆಗೆ' ಸುಷ್ಮಾ ಸ್ವರಾಜ್ ರಾಜಕೀಯ ಹೆಜ್ಜೆ ಗುರುತನ್ನು ತಿಳಿಯೋಣ...
'ಸುಷ್ಮಾ' ರಾಜಕೀಯ:
- 25 ವರ್ಷಕ್ಕೆ ಸಂಪುದ ದರ್ಜೆ ಸಚಿವೆಯಾಗಿ ಆಯ್ಕೆಯಾಗಿದ್ದರು.
- 7 ಬಾರಿ ಸಂಸದರಾಗಿ ಆಯ್ಕೆ.
- ಮೊದಲ ಮಹಿಳಾ ವಿದೇಶಾಂಗ ಸಚಿವ
- ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ
'ಅಟಲ್ ಯುಗ'ದಿಂದ' ಮೋದಿ ರಾಜ್ 'ವರೆಗೆ' ಸುಷ್ಮಾ ಸ್ವರಾಜ್
* ವಾಜಪೇಯಿ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್
- 1996-97: ಮಾಹಿತಿ ಮತ್ತು ಪ್ರಸಾರ ಸಚಿವೆ
- 2000-2003: ಮಾಹಿತಿ ಮತ್ತು ಪ್ರಸಾರ ಮಂತ್ರಿ
- 2003-2004: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಮತ್ತು ಸಂಸದೀಯ ವ್ಯವಹಾರಗಳ ಸಚಿವೆ
2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದಲ್ಲಿ ಸುಷ್ಮಾ ಸ್ವರಾಜ್ ಜನಪ್ರಿಯ ವಿದೇಶಾಂಗ ಸಚಿವೆಯಾಗಿ ಐದು ವರ್ಷಗಳ ಕಾಲ ಉತ್ತಮ ಕೆಲಸ ಮಾಡಿದರು.
ರಾಜಕೀಯದಲ್ಲಿ ಸುಷ್ಮಾ ಮೊದಲ ಹೆಜ್ಜೆ:
1977: ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆ
1990: ಮೊದಲ ಬಾರಿಗೆ ಸಂಸದರಾಗಿ ಆಯ್ಕೆ
1996: ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ನಿಯಮ
1998: ಮೊದಲ ಬಾರಿಗೆ ಮುಖ್ಯಮಂತ್ರಿ
ರಾಜ್ಯ ರಾಜಕೀಯದಲ್ಲಿ ಸುಷ್ಮಾ:
1977 ರಲ್ಲಿ ಹರಿಯಾಣದಿಂದ ಶಾಸಕಿ
1996 ರಲ್ಲಿ ದೆಹಲಿ ಸಂಸದೆ
1999 ರಲ್ಲಿ ಕರ್ನಾಟಕದ ಬಳ್ಳಾರಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ
2000 ರಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯ
2009-2014 ರಲ್ಲಿ ಮಧ್ಯಪ್ರದೇಶದಿಂದ ಸಂಸದೆಯಾಗಿ ಆಯ್ಕೆ.