ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನವು ಕೆಲ ಘಂಟೆಗಳ ಕಾಲ ನಿಜಕ್ಕೂ ಭಯವನ್ನು ಸೃಷ್ಟಿಸಿತ್ತು. ಭಾರತದಿಂದ ದಕ್ಷಿಣ ಆಫ್ರಿಕಾಗೆ ಪ್ರಯಾಣಿಸುತ್ತಿದ್ದ ವಿಮಾನ ಶನಿವಾರ ಸಂಜೆ ಮಾರಿಷಸ್ ಬಳಿ 12 ರಿಂದ 14 ನಿಮಿಷಗಳ ಕಾಲ ಸಂಜೆ ಸಂಪರ್ಕಕ್ಕೆ ಸಿಗದೇ ಆತಂಕವನ್ನು ಸೃಷ್ಟಿಸಿತ್ತು ಎಂದು ತಿಳಿದುಬಂದಿದೆ


COMMERCIAL BREAK
SCROLL TO CONTINUE READING

ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಬೇಕಾಗಿದ್ದ  ಸುಷ್ಮಾ ಸ್ವರಾಜ್ ಅವರು  ಕೇರಳದ ರಾಜಧಾನಿ ತಿರುವನಂತಪುರದಿಂದ ಮಾರಿಷಸ್‌ ಮಾರ್ಗವಾಗಿ ಹೋಗುತ್ತಿದ್ದರು. ಆ ಸಂದರ್ಭದಲ್ಲಿ, ಮಾರಿಷಸ್ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಸುಷ್ಮಾ ರವರು ಪ್ರಯಾಣಿಸುತ್ತಿದ್ದ ವಿಮಾನ ಕೆಲವು ನಿಮಿಷಗಳ ಕಾಲ  ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ತಿಳಿದುಬಂದಿದೆ.ಮಾರಿಷಸ್ ದ್ವೀಪ ರಾಷ್ಟ್ರದ ವಾಯು ಪ್ರದೇಶವನ್ನು ತಲುಪಿದ ಬಳಿಕ ಸಂಪರ್ಕದ ಕೊರತೆ ಉಂಟಾಗಿತ್ತು ಎಂದು ಹೇಳಲಾಗಿದೆ.ಆದರೆ, ಈ ಸಂಗತಿಯನ್ನು ಸಚಿವೆ ಸುಷ್ಮಾ ಸ್ವರಾಜ್ ಮತ್ತು  ವಿದೇಶಾಂಗ ಸಚಿವಾಲಯದ ಗಮನಕ್ಕೆ ತಂದಿರಲಿಲ್ಲ ಎನ್ನಲಾಗುತ್ತದೆ. 


ಇದಾದ ನಂತರ  ಚೆನ್ನೈ ಏರ್ ಟ್ರಾಫಿಕ್ ಕಂಟ್ರೋಲ್ ಜೊತೆಗೆ ಮಾರಿಷಸ್ ಅಧಿಕಾರಿಗಳು ಸಂಪರ್ಕ ಸಾಧಿಸಿ  ಭಾರತದ ವಾಯು ಪ್ರದೇಶದಿಂದ ವಿಮಾನ ಹೊರಟಿರುವ ಕುರಿತಾಗಿ ದೃಡಪಡಿಸಿಕೊಂಡಿದ್ದಾರೆ, 4.44ಕ್ಕೆ ಸಂಪರ್ಕ ಸಿಗದೇ ಅಧಿಕಾರಿಗಳು ಅಲಾರಾಂ ಘಂಟೆ ಬಾರಿಸಿದ್ದರು ಆದರೆ ಅದು ಕೊನೆಗೆ 4.58ಕ್ಕೆ ಸಂಪರ್ಕ ಸಿಕ್ಕಿದೆ ಎಂದು ವಿಮಾನದ ಅಧಿಕಾರಿಗಳು ತಿಳಿಸಿದ್ದಾರೆ.