ಚೆನ್ನೈ : ರಾಜ್ಯದಲ್ಲಿ ಕೊರೋನಾ ಪ್ರಕರಣ ಹರಡುವಿಕೆಯನ್ನು ತಡೆಯಲು ರಾಜ್ಯದಲ್ಲಿ 14 ದಿನಗಳ ಸಂಪೂರ್ಣ ಲಾಕ್ ಡೌನ್ ವಿಧಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಮೇ 10 ರಿಂದ 24 ರವರೆಗೆ ಲಾಕ್ ಡೌನ್ ಘೋಷಿಸಲಾಗಿದೆ.


COMMERCIAL BREAK
SCROLL TO CONTINUE READING

ತಮಿಳುನಾಡಿನಲ್ಲಿ  ಸಂಪೂರ್ಣ ಲಾಕ್ ಡೌನ್(Tamil Nadu lockdown) ಘೋಷಿಸಿದ ಸರ್ಕಾರ, ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ರಾಜ್ಯದಲ್ಲಿ 'ಅನಿವಾರ್ಯ ಪರಿಸ್ಥಿತಿಗಳಿಂದಾಗಿ' ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.


ಇದನ್ನೂ ಓದಿ : SBI ಕಾಂಟಾಕ್ಟ್ ಲೆಸ್ ಸೇವೆ ಆರಂಭ, ಕೇವಲ ಒಂದು ಕರೆಯಿಂದ ಸಾಧ್ಯವಾಗುತ್ತೆ ಈ ಕೆಲಸ


ಮೇ 10ರಿಂದ ತರಕಾರಿ(Vegetables), ಮಾಂಸ ಮತ್ತು ಮೀನು ಅಂಗಡಿಗಳು ಮತ್ತು ತಾತ್ಕಾಲಿಕ ಮಳಿಗೆಗಳು ಮಧ್ಯಾಹ್ನ 12 ರವರೆಗೆ ಮಾತ್ರ ತೆರೆದಿರುತ್ತವೆ. ಇತರ ಎಲ್ಲಾ ಅಂಗಡಿಗಳು ಮುಚ್ಚಿರುತ್ತವೆ.


ಇದನ್ನೂ ಓದಿ : Blood Clot- ಕರೋನಾ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ? ತಜ್ಞರು ಹೇಳಿದ್ದೇನು


ತಮಿಳುನಾಡಿನಲ್ಲಿ 14 ದಿನಗಳ ಸಂಪೂರ್ಣ ಲಾಕ್ ಡೌನ್(Lockdown) ಸಮಯದಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳನ್ನು ಮುಚ್ಚಲಾಗುವುದು. ಟೇಕ್ ಅವೇ ಸೇವೆಗಳಿಗೆ ಮಾತ್ರ ರೆಸ್ಟೋರೆಂಟ್ ಗಳನ್ನು ತೆರೆಯಲು ಅನುಮತಿನೀಡಲಾಗುವುದು.


ಇದನ್ನೂ ಓದಿ : ಭಾರತದ ಸ್ಫೋಟಕ COVID-19 ಅಲೆ ಜಗತ್ತಿಗೆ ಅಪಾಯ- ರಾಹುಲ್ ಗಾಂಧಿ


ತಮಿಳುನಾಡಿ(Tamil Nadu)ನಲ್ಲಿ 14 ದಿನಗಳ ಸಂಪೂರ್ಣ ಲಾಕ್ ಡೌನ್ ಮಯದಲ್ಲಿ, ಅಗತ್ಯ ಸೇವೆಗಳನ್ನು ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಲಾಕ್ ಡೌನ್ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಗಳು ತೆರೆದಿರುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.