UGC Guidelines released : ಇದೆ ತಿಂಗಳಲ್ಲಿ ನಡೆಯಬೇಕಿದ್ದ ಉನ್ನತ ಶಿಕ್ಷಣ ಇಲಾಖೆಯ ಎಲ್ಲಾ ಪರೀಕ್ಷೆಗಳಿಗೆ 'UGC' ಬ್ರೇಕ್!

ಯುಜಿಸಿ ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಗಮನಿಸಿ ಆನ್ ಲೈನ್ ಪರೀಕ್ಷೆಗಳನ್ನು ನಡೆಸಲು ಅನುಮತಿ

Last Updated : May 7, 2021, 03:44 PM IST
  • ಮೇ ತಿಂಗಳಲ್ಲಿ ಆಫ್ ಲೈನ್ ಪರೀಕ್ಷೆಗಳನ್ನು ನಡೆಸದಂತೆ UGC
  • ಎಲ್ಲಾ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿದೆ UGC
  • ಯುಜಿಸಿ ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಗಮನಿಸಿ ಆನ್ ಲೈನ್ ಪರೀಕ್ಷೆಗಳನ್ನು ನಡೆಸಲು ಅನುಮತಿ
UGC Guidelines released  : ಇದೆ ತಿಂಗಳಲ್ಲಿ ನಡೆಯಬೇಕಿದ್ದ ಉನ್ನತ ಶಿಕ್ಷಣ ಇಲಾಖೆಯ ಎಲ್ಲಾ ಪರೀಕ್ಷೆಗಳಿಗೆ 'UGC' ಬ್ರೇಕ್! title=

ನವದೆಹಲಿ : ಕೋವಿಡ್-19 ನಡುವೆ ಮೇ ತಿಂಗಳಲ್ಲಿ ಆಫ್ ಲೈನ್ ಪರೀಕ್ಷೆಗಳನ್ನು ನಡೆಸದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ(UGC)ವು ಎಲ್ಲಾ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿದೆ. ಆಯೋಗವು ವಿಶ್ವವಿದ್ಯಾಲಯಗಳಿಗೆ ಆನ್ ಲೈನ್ ಪರೀಕ್ಷೆಗಳನ್ನು ಆಯೋಜಿಸಲು ಅನುಮತಿ ನೀಡಿದೆ.

ಪ್ರಸ್ತುತ ಕೋವಿಡ್-19 ಸಮಯದಲ್ಲಿ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮುಖ್ಯ ಎಂದು ಯುಜಿಸಿ(University Grants Commission) ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಇದನ್ನೂ ಓದಿ : CoronaVirus New Guidelines: ಕರೋನಾ ರೋಗಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ

ವಿಶ್ವವಿದ್ಯಾಲಯ(University)ಗಳು ಮತ್ತು ಕಾಲೇಜುಗಳಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಶಿಕ್ಷಣ ಸಚಿವಾಲಯ ಮತ್ತು ಯುಜಿಸಿ ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಗಮನಿಸಿ ಆನ್ ಲೈನ್ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿದೆ.

ಇದನ್ನೂ ಓದಿ : ಕೊರತೆಯ ನಡುವೆಯೇ ಕಾಲುವೆಯಲ್ಲಿ ಪತ್ತೆಯಾಯಿತು ಸಾವಿರಾರು Remdesivir ಇಂಜೆಕ್ಷನ್..!

'ಕೋವಿಡ್-19 ರ ಪ್ರಸ್ತುತ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ಉನ್ನತ ಶಿಕ್ಷಣ ಸಂಸ್ಥೆ(Higher Education Institutions)ಗಳು ಕ್ಯಾಂಪಸ್ ಗಳಲ್ಲಿ ದೈಹಿಕ ಸಂಗ್ರಹಣೆಯನ್ನು ತಪ್ಪಿಸಲು ಮೇ ತಿಂಗಳಲ್ಲಿ ಆಫ್ ಲೈನ್ ಪರೀಕ್ಷೆಗಳನ್ನು ತಡೆಹಿಡಿದು ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿಗೆ ಹೆಚ್ಚು ಅಗತ್ಯವಾದ ಪರಿಹಾರವನ್ನು ಒದಗಿಸಬಹುದು' ಎಂದು ಯುಜಿಸಿ ಹೇಳಿದೆ.

ಇದನ್ನೂ ಓದಿ : PM Kisan : Rft ಸಹಿ ಮಾಡಿದ ರಾಜ್ಯ ಸರ್ಕಾರಗಳು; ಶೀಘ್ರದಲ್ಲೇ ರೈತರ ಖಾತೆಗೆ ಹಣ

'ಆನ್ ಲೈನ್ ಪರೀಕ್ಷೆ(Online Exams)ಗಳ ನಡೆಸಲು, ಸ್ಥಳೀಯ ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರ HEI ಗಳು ಸೂಕ್ತವಾಗಿ ನಿರ್ಧರಿಸಬಹುದು' ಎಂದು ಹೇಳಿದೆ.

ಇದನ್ನೂ ಓದಿ : India Railways : ಶತಾಬ್ದಿ, ರಾಜಧಾನಿ ಸೇರಿದಂತೆ ಒಟ್ಟು 28 ರೈಲುಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ - ಇಲ್ಲಿದೆ ಫುಲ್ ಲಿಸ್ಟ್!

ಈ ಹಿಂದೆ, ಶಿಕ್ಷಣ ಸಚಿವಾಲಯವು ಎಲ್ಲಾ ಕೇಂದ್ರ-ಅನುದಾನಿತ ಸಂಸ್ಥೆಗಳಿಗೆ (IIT, NIT, ಕೇಂದ್ರೀಯ ವಿಶ್ವವಿದ್ಯಾಲಯಗಳು, ಇತ್ಯಾದಿ) ಮೇ ತಿಂಗಳಲ್ಲಿ ಆಫ್ ಲೈನ್ ಪರೀಕ್ಷೆ(Off Line Exams)ಗಳನ್ನು ನಡೆಸದಂತೆ ನಿರ್ದೇಶನ ನೀಡಿತ್ತು. ಪರೀಕ್ಷೆಗಳ ನಿರ್ಧಾರವನ್ನು ಜೂನ್ 2021 ರ ಮೊದಲ ವಾರದಲ್ಲಿ ಮತ್ತೆ ಪರಿಶೀಲಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News