ತಮಿಳುನಾಡು: IT ಕ್ಷೇತ್ರದಲ್ಲಿ ಉದ್ಯೋಗ ಕುಸಿತದ ಬಗ್ಗೆ ಸ್ಟಾಲಿನ್ ಕಳವಳ
ಕೊಯಮತ್ತೂರು ನಗರ ಮುನ್ಸಿಪಲ್ ಕಾರ್ಪೊರೇಷನ್ (ಸಿಸಿಎಂಸಿ) ಜಾಹೀರಾತು ನೀಡಿರುವ ನೈರ್ಮಲ್ಯ ಕಾರ್ಮಿಕರ 549 ಹುದ್ದೆಗಳಿಗೆ ಎಂಜಿನಿಯರ್‌ಗಳು ಸೇರಿದಂತೆ 7,000 ಪದವೀಧರರು ಅರ್ಜಿ ಸಲ್ಲಿಸಿದ್ದಾರೆ.
ಚೆನ್ನೈ (ತಮಿಳುನಾಡು): ಐಟಿ ಕ್ಷೇತ್ರದಲ್ಲಿ ಉದ್ಯೋಗ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ಎಂಜಿನಿಯರ್‌ಗಳ ಪ್ರಸ್ತುತ ಸ್ಥಿತಿಯನ್ನು ಉಲ್ಲೇಖಿಸಿದ ಸ್ಟಾಲಿನ್, ಎಷ್ಟೋ ಮಂದಿ ಎಂಜಿನಿಯರ್‌ಗಳು ಇಂದು ನೈರ್ಮಲ್ಯ ಕಾರ್ಮಿಕರ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಂತಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಐಟಿ ಕ್ಷೇತ್ರದಲ್ಲಿ ನಿರುದ್ಯೋಗ ಮತ್ತು ಉದ್ಯೋಗದಿಂದ ವಜಾಗೊಳಿಸುತ್ತಿರುವುದನ್ನು ಪರಿಶೀಲಿಸುವಂತೆ ಒತ್ತಾಯಿಸಿದರು.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿಎಂಕೆ(DMK) ಮುಖ್ಯಸ್ಥ ಎಂ.ಕೆ. ಸ್ಟಾಲಿನ್(MK Stalin), "ಇಡೀ ದೇಶದಲ್ಲೇ ಇಂದು ನಿರುದ್ಯೋಗ(Unemployment)ದ ಮಟ್ಟ ಉತ್ತುಂಗದಲ್ಲಿದೆ ಎಂದು ತಿಳಿಸಿದ ಸ್ಟಾಲಿನ್, ಕೈಗಾರಿಕೆಗಳು ಮತ್ತು ಉದ್ಯೋಗಗಳ ಸೃಷ್ಟಿಯಿಲ್ಲದ ತಮಿಳುನಾಡಿಗೆ ಇದು ಶಾಪವಾಗಿದೆ. ಐಟಿ ಕ್ಷೇತ್ರದಲ್ಲಿ ನಿರುದ್ಯೋಗ ಮತ್ತು ವಜಾಗೊಳಿಸುವಿಕೆಯನ್ನು ಪರಿಶೀಲಿಸುವಂತೆ ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದು ಹೇಳಿದರು.
ಈಗಾಗಲೇ ತಮಿಳುನಾಡಿನ ಐಟಿ ಕಂಪನಿಗಳು ಅನೇಕ ಕೃತಕ ಕಾರಣಗಳನ್ನು ಉಲ್ಲೇಖಿಸಿ ನೌಕರರನ್ನು ವಜಾಗೊಳಿಸುತ್ತಿವೆ. ಭಾರತದಾದ್ಯಂತ 40,000 ಐಟಿ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ವರದಿಗಳು ತಿಳಿಸಿವೆ ಮತ್ತು ಇದು ಆತಂಕಕಾರಿ "ಎಂದು ಅವರುತಿಳಿಸಿದರು.
ಕೊಯಮತ್ತೂರು ನಗರ ಮುನ್ಸಿಪಲ್ ಕಾರ್ಪೊರೇಷನ್ (ಸಿಸಿಎಂಸಿ) ಜಾಹೀರಾತು ನೀಡಿರುವ ನೈರ್ಮಲ್ಯ ಕಾರ್ಮಿಕರ 549 ಹುದ್ದೆಗಳಿಗೆ ಎಂಜಿನಿಯರ್‌ಗಳು ಸೇರಿದಂತೆ 7,000 ಪದವೀಧರರು ಅರ್ಜಿ ಸಲ್ಲಿಸಿದ್ದಾರೆ ಎಂದವರು ಮಾಹಿತಿ ನೀಡಿದರು.
ಸ್ಥಳೀಯ ಸಂಸ್ಥೆಯ ಚುನಾವಣೆಯ ಕುರಿತು ಮಾತನಾಡಿದ ಸ್ಟಾಲಿನ್, ಎಐಎಡಿಎಂಕೆ ಮತದಾನವನ್ನು ಮುಂದೂಡುತ್ತಿದೆ ಎಂದು ಹೇಳಿದರು. "ಮೂರು ವರ್ಷಗಳಿಂದಲೂ ಎಐಎಡಿಎಂಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಮಾಧ್ಯಮಗಳು ಡಿಎಂಕೆಯನ್ನು ದೂಷಿಸುತ್ತಿವೆ. ಸ್ಪಷ್ಟೀಕರಣಕ್ಕಾಗಿ ನಾವು ನ್ಯಾಯಾಲಯವನ್ನು ಸಂಪರ್ಕಿಸಿದ್ದೇವೆ. ನಾವು ಕೂಡ ಚುನಾವಣೆಯನ್ನು ಬಯಸುತ್ತೇವೆ. ಆದರೆ ಎಲ್ಲಾ ಚುನಾವಣಾ ಮಾನದಂಡಗಳಿಗೆ ಅನುಸಾರವಾಗಿ ಚುನಾವಣೆಗೆ ಹೋಗಬೇಕೆಂಬುದು ನಮ್ಮ ಬಯಕೆ" ಎಂದು ಸ್ಟಾಲಿನ್ ತಿಳಿಸಿದರು.
(With ANI Inputs)