ಶಾಲಾ ಪುನರಾರಂಭ ನಿರ್ಧಾರದಿಂದ ಹಿಂದೆ ಸರಿದ ತಮಿಳುನಾಡು
Reopening of schools: 11,415 ಸಾವುಗಳು ಸೇರಿದಂತೆ 7.5 ಲಕ್ಷ ಕರೋನವೈರಸ್ ಪ್ರಕರಣಗಳನ್ನು ಹೊಂದಿರುವ ತಮಿಳುನಾಡು ಭಾರತದಲ್ಲಿ ನಾಲ್ಕನೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ
ಚೆನ್ನೈ: ಕರೋನವೈರಸ್ ಸುರಕ್ಷತಾ ಮಾನದಂಡಗಳೊಂದಿಗೆ 9 ರಿಂದ 12ನೇ ತರಗತಿವರೆಗೆ ಶಾಲೆಗಳನ್ನು (Schools) ಪುನರಾರಂಭಿಸುವುದಾಗಿ ಘೋಷಿಸಿದ ಸುಮಾರು ಎರಡು ವಾರಗಳ ನಂತರ ನವೆಂಬರ್ 16 ರಿಂದ ಶಾಲೆಗಳನ್ನು ಮತ್ತೆ ತೆರೆಯುವ ನಿರ್ಧಾರವನ್ನು ತಮಿಳುನಾಡು (Tamilnadu) ಸರ್ಕಾರ ತಡೆಹಿಡಿದಿದೆ.
ಅಲ್ಲದೆ ಡಿಸೆಂಬರ್ 2ರಿಂದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸಂಶೋಧನಾ ವಿದ್ವಾಂಸರು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾರಂಭವಾಗಲಿವೆ ಎಂದು ಸರ್ಕಾರ ತಿಳಿಸಿದೆ.
ಈ ರಾಜ್ಯದಲ್ಲಿ ಶಾಲೆ ತೆರೆದ ನಾಲ್ಕೇ ದಿನದಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರಿಗೆ Corona Positive
ಶಾಲೆಗಳ ಪುನರಾರಂಭದ ಬಗ್ಗೆ ಸೋಮವಾರ ಪೋಷಕರು ಮತ್ತು ಶಿಕ್ಷಕರೊಂದಿಗೆ ರಾಜ್ಯವ್ಯಾಪಿ ಸಮಾಲೋಚಿಸಿದ ನಂತರ ಈ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಸರ್ಕಾರ ಹೇಳಿದೆ. ಕೆಲವು ಪೋಷಕರು ಶಾಲೆಗಳು ಪುನಃ ತೆರೆಯಬೇಕೆಂದು ಬಯಸಿದ್ದರು, ಆದರೆ ಬಹುತೇಕ ಜನರು ಕೋವಿಡ್-19 ಬಿಕ್ಕಟ್ಟಿನಿಂದಾಗಿ ಇಂತಹ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು ಎಂದು ಸರ್ಕಾರ ಹೇಳಿದೆ.
11,415 ಸಾವುಗಳು ಸೇರಿದಂತೆ 7.5 ಲಕ್ಷಕ್ಕೂ ಹೆಚ್ಚು ಕೊರೊನಾವೈರಸ್ ಪ್ರಕರಣಗಳನ್ನು ಹೊಂದಿರುವ ತಮಿಳುನಾಡು ಭಾರತದಲ್ಲಿ ನಾಲ್ಕನೇ ಅತಿ ಹೆಚ್ಚು ಕರೋನಾ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ. ಬುಧವಾರ ಕೂಡ ತಮಿಳುನಾಡಿನಲ್ಲಿ 2,184 ಹೊಸ COVID-19 ಪ್ರಕರಣಗಳು ಮತ್ತು 28 ಸಾವುಗಳನ್ನು ವರದಿಯಾಗಿದೆ.
ಸಂಕಷ್ಟದ ಸಮಯದಲ್ಲಿ ನೇಪಾಳದ ಸಹಾಯಕ್ಕೆ ಬಾರದ ಚೀನಾ, ಮತ್ತೆ ಸಹಾಯ ಹಸ್ತ ಚಾಚಿದ ಭಾರತ
ಈ ಮಧ್ಯೆ ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರ 2021ರ ಜನವರಿಯಲ್ಲಿ ಮಾತ್ರ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಮಿಳುನಾಡು ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್ (MK Stalin) ಅವರು ತಮ್ಮ "ಅವಸರದ" ಪ್ರಕಟಣೆಗೆ ಮುಖ್ಯಮಂತ್ರಿ ಇ ಪಳನಿಸ್ವಾಮಿ ಅವರ ವಿರುದ್ಧ ಹೇಳಿಕೆ ನೀಡಿದ್ದರು.