ನವದೆಹಲಿ: ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರದ 33 ವರ್ಷದ ಮಹಿಳೆಗೆ ಈಗ ತಮಿಳುನಾಡಿನ (Tamil Nadu) ಮೂಲದ 18 ರ ಹರೆಯದ ಯುವಕ ಹೃದಯವನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಈಗ ಈ ಯುವಕನಿಗೆ ಬ್ರೆಡ್ ಡೆಡ್ ಆಗಿರುವುದರಿಂದಾಗಿ ಇತನ ಹೃದಯವನ್ನು ಈಗ 33 ವರ್ಷದ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮೂಲಕ ಹಾಕಲಾಗಿದೆ.


ಇದನ್ನೂ ಓದಿ: ಭಾರತೀಯ ಕ್ರಿಕೆಟ್ ತಂಡದ ಮೂವರು ಭಾವಿ ನಾಯಕರನ್ನು ಹೆಸರಿಸಿದ ರೋಹಿತ್ ಶರ್ಮಾ...!


ಈಗ ದಾನಿಯ ಹೃದಯವನ್ನು ದಕ್ಷಿಣ ತಮಿಳುನಾಡಿನ ತಿರುಚ್ಚಿಯಿಂದ ಸುಮಾರು 350 ಕಿಮೀ ದೂರದ ರಾಜ್ಯ ರಾಜಧಾನಿ ಚೆನ್ನೈನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಗಿದೆ, ಅಲ್ಲಿ ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಮಹಿಳೆಯನ್ನು ದಾಖಲಿಸಲಾಗಿದೆ.


ರೋಗಿಯು ಶ್ರೀನಗರದ ನಿವಾಸಿ ಶಹಜಾದಿ ಫಾತಿಮಾ ಎಂದು ಗುರುತಿಸಲಾಗಿದ್ದು, ಕಾಲಾನಂತರದಲ್ಲಿ ಹೃದಯದ ಕೋಣೆಗಳು ಗಟ್ಟಿಯಾಗಿ ಅವರು ಮಾರಣಾಂತಿಕ ಅನಾರೋಗ್ಯಕ್ಕೆ ತುತ್ತಾಗಿದ್ದರು.ಅವರು ಬದುಕಬೇಕೆಂದರೆ ಹೃದಯ ಕಸಿ ಮಾಡುವುದು ಅನಿವಾರ್ಯವಾಗಿತ್ತು.ಈಗ ಎಂಜಿಎಂ ನಲ್ಲಿರುವ ವೈದ್ಯರುಗಳು ಆಕೆಯ ಆರೋಗ್ಯದ  ಮೇಲೆ ನಿಗಾವಹಿಸಿದ್ದಾರೆ.


ಇದನ್ನೂ ಓದಿ: 'ಎಲ್ಲಾ ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿರುವುದು ಗೌರವದ ಸಂಗತಿ'


ಜನವರಿ 26 ರಂದು, ತಿರುಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಬ್ರೇನ್ ಡೆಡ್ ಆಗಿರುವ ವ್ಯಕ್ತಿಯನ್ನು ಗುರುತಿಸಲಾಗಿತ್ತು, ನಂತರ ಅವರ ಹೃದಯವನ್ನು ಹಸಿರು ಕಾರಿಡಾರ್ ಮೂಲಕ ಚೆನ್ನೈಗೆ ರವಾನಿಸಿದ್ದಲ್ಲದೆ ಅವರಿಗೆ ಹೃದಯ ಕಸಿಯನ್ನು ಮಾಡಲಾಯಿತು.ಈಗ ಅವರ ಅನಾರೋಗ್ಯದಿಂದ ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.


ಈಗ ಈ ಮಹಿಳೆಗೆ ಆಸ್ಪತ್ರೆ ವೆಚ್ಚವನ್ನೆಲಾ ಐಶ್ವರ್ಯ ಟ್ರಸ್ಟ್ ನೀಡಿದೆ, ಆಕೆಯು ಸಹೋದರನೊಂದಿಗೆ ವಾಸಿಸುತ್ತಿದ್ದಾಳೆ.ಜನವರಿ 26 ರಂದು ಐಶ್ವರ್ಯ ಟ್ರಸ್ಟ್ ಮಹಿಳೆಯ ಹೃದಯ ಕಸಿಗೆ ಧನಸಹಾಯ ನೀಡುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಲು ಇದು ಅರ್ಥಪೂರ್ಣ ಮಾರ್ಗವಾಗಿದೆ ಎಂದು ಟ್ರಸ್ಟ್‌ನ ಸಂಸ್ಥಾಪಕಿ ಚಿತ್ರಾ ವಿಶ್ವನಾಥನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಎಂಜಿಎಂ ಹೆಲ್ತ್‌ಕೇರ್ ಸಬ್ಸಿಡಿ ವೆಚ್ಚದಲ್ಲಿ ಕಸಿ ಮಾಡಿತು. ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ.ಕೆ.ಆರ್.ಬಾಲಕೃಷ್ಣನ್, "ದೊಡ್ಡ ವೈಯಕ್ತಿಕ ದುರಂತದ ಹಿನ್ನೆಲೆಯಲ್ಲಿ" ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ ದಾನಿಯ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದರು.


'ಇಂತಹ ಜೀವರಕ್ಷಕ ಕಸಿಗಳಿಗೆ ಹಲವಾರು ಜನರ ಸಮನ್ವಯ ಮತ್ತು ಬೆಂಬಲದ ಅಗತ್ಯವಿದೆ ಮತ್ತು ಇದು ನಿಜವಾದ ತಂಡದ ಪ್ರಯತ್ನವಾಗಿದೆ" ಎಂದು ಹೃದಯ ಮತ್ತು ಶ್ವಾಸಕೋಶದ ಕಸಿ ಮತ್ತು ಮೆಕ್ಯಾನಿಕಲ್ ಸರ್ಕ್ಯುಲೇಟರಿ ಸಪೋರ್ಟ್ ಸಂಸ್ಥೆಯ ಸಹ-ನಿರ್ದೇಶಕ ಡಾ ಸುರೇಶ್ ರಾವ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.