ನವದೆಹಲಿ: ಇತ್ತೀಚಿಗಷ್ಟೇ ಎಲ್ಲಾ ಮಾದರಿಯ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿರುವ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಎಲ್ಲಾ ಸ್ವರೂಪಗಳಲ್ಲಿ ನಾಯಕತ್ವ ವಹಿಸಿರುವ ವಿಚಾರವಾಗಿ ಇದೆ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ಮೂಲಕ ಯಶಸ್ವಿ ಈಗಾಗಲೇ ಯಶಸ್ವಿ ನಾಯಕರೆನಿಸಿಕೊಂಡಿರುವ ರೋಹಿತ್ ಶರ್ಮಾ, ಮೂರು ಸ್ವರೂಪಗಳಲ್ಲಿ ಭಾರತ ತಂಡವನ್ನು ಮುನ್ನಡೆಸುವುದು ಅದ್ಬುತ ಭಾವನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಹೇಳುವುದೆಲ್ಲವೂ ಸುಳ್ಳು, ಸುಳ್ಳು, ಸುಳ್ಳು: ಬಿಜೆಪಿ ಟೀಕೆ
ಗುರುವಾರದಂದು ಲಕ್ನೋದಲ್ಲಿ ಶ್ರೀಲಂಕಾ ವಿರುದ್ಧದ ಮೂರು ಟಿ20 ಪಂದ್ಯಗಳ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಆರಂಭಿಕ ಆಟಗಾರ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ “ಇದೊಂದು ದೊಡ್ಡ ಗೌರವದ ಸಂಗತಿ, ಪಂದ್ಯದ ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡದ ನಾಯಕತ್ವವು ಉತ್ತಮ ಭಾವನೆಯಾಗಿದೆ.ಈಗ ನಾನು ಎದುರು ನೋಡಲು ಸಾಕಷ್ಟು ಹೊಸ ಸವಾಲುಗಳನ್ನು ಹೊಂದಿದ್ದೇನೆ. ನಾನು ಖಂಡಿತವಾಗಿಯೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಎದುರು ನೋಡುತ್ತಿದ್ದೇನೆ' ಎಂದು ಬುಧವಾರದಂದು ಲಕ್ನೋದಲ್ಲಿ ನಡೆದ ವರ್ಚುವಲ್ ಸಮ್ಮೇಳನದಲ್ಲಿ ರೋಹಿತ್ ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ: ಎಚ್ಡಿಕೆ ಆಕ್ರೋಶ
ರೋಹಿತ್‌ಗೆ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರ ಮತ್ತು ಹಿರಿಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸಹಾಯ ಮಾಡುತ್ತಾರೆ, ಅವರು ಶ್ರೀಲಂಕಾ ಸರಣಿಗೆ ಅವರ ಉಪನಾಯಕರಾಗಲಿದ್ದಾರೆ.ಬ್ಯಾಟ್ಸ್ಮನ್ ಅಥವಾ ಬೌಲರ್ ಯಾರೇ ತಂಡದ ಉಪನಾಯಕರಾಗಿದ್ದರೂ ಪರವಾಗಿಲ್ಲ. ಬುಮ್ರಾ ಉತ್ತಮ ಕ್ರಿಕೆಟ್ ಮನಸ್ಸನ್ನು ಹೊಂದಿದ್ದಾರೆ ಮತ್ತು ಅವರು ನಾಯಕತ್ವದ ಪಾತ್ರದಲ್ಲಿ ನೋಡುವುದು ಒಳ್ಳೆಯದು.ಇದರಿಂದ ಅವರಲ್ಲಿ ಆತ್ಮವಿಶ್ವಾಸವೂ ಹೆಚ್ಚುತ್ತದೆ. ನಾನು ಸಾಮಾನ್ಯವಾಗಿ ಬುಮ್ರಾ ಅವರೊಂದಿಗೆ ಕ್ರಿಕೆಟ್ ಬಗ್ಗೆ ಸಾಕಷ್ಟು ಮಾತನಾಡುತ್ತೇನೆ, ”ಎಂದು ಅವರು ಹೇಳಿದರು.
"ಸಹಜವಾಗಿ, ಇದು ತಂಡಕ್ಕೆ ದೊಡ್ಡ ಹೊಡೆತವಾಗಿದೆ, ಏಕೆಂದರೆ ಸೂರ್ಯ ಅಂತಹ ಉತ್ತಮ ಫಾರ್ಮ್‌ನಲ್ಲಿದ್ದರು.ಆದರೆ ಅವರ ಸ್ಥಾನವನ್ನು ಪಡೆಯಲು ತಂಡದಲ್ಲಿ ಸಾಕಷ್ಟು ಇತರ ವ್ಯಕ್ತಿಗಳು ಕಾಯುತ್ತಿದ್ದಾರೆ.ವೆಸ್ಟ್ ಇಂಡೀಸ್ ವಿರುದ್ಧ ಸೂರ್ಯ ನಮಗೆ ಸರಣಿಯ ಆಟಗಾರರಾಗಿದ್ದರು.ಆದರೆ ಈಗ ಅವರು ಗಾಯಗೊಂಡಿರುವ ಹಿನ್ನಲೆಯಲ್ಲಿ ಏನೂ ಮಾಡಲಿಕ್ಕೆ ಬರುವುದಿಲ್ಲ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.