ಚೆನ್ನೈ : ಪಶ್ಚಿಮಬಂಗಾಳ ಅಷ್ಟೇ ಅಲ್ಲ, ತಮಿಳುನಾಡನ್ನೂ(Tamilnadu) ಶತಾಯಗತಾಯ ಗೆಲ್ಲಲೇ ಬೇಕೆಂಬ ಜಿದ್ದಿಗೆ ಬಿದ್ದಿದೆ ಬಿಜೆಪಿ.  ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಬಿಜೆಪಿ, ಈಗ ತಮಿಳುನಾಡನ್ನೂ ಗೆಲ್ಲುವ ತಂತ್ರ ರೂಪಿಸುತ್ತಿದೆ.  ಈ ನಿಟ್ಟಿನಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ತಮಿಳುನಾಡು ವಿಧಾನಸಭೆಗೆ (Assembly Election)  ಇದೇ ವರ್ಷ ಚುನಾವಣೆ ನಡೆಯಲಿದೆ. 


COMMERCIAL BREAK
SCROLL TO CONTINUE READING

ಈ ಸಲವೂ ಬಿಜೆಪಿ ಎಐಎಡಿಎಂಕೆ ಜುಗಲ್ ಬಂದಿ:
ಮಧುರೈಯಲ್ಲಿ (Madurai) ನಡೆದ ಚುನಾವಣಾ  ಸಭೆಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (JP Nadda), ತಮಿಳುನಾಡಿನಲ್ಲಿ ಈ ಸಲದ ಚುನಾವಣೆಯನ್ನು ಬಿಜೆಪಿಯು ಎಐಎಡಿಎಂಕೆ (AIADMK) ಮತ್ತು ಇತರ ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.  ಎಐಎಡಿಎಂಕೆ ಜೊತೆ ಸೇರಿ ಬಿಜೆಪಿ (BJP) ಚುನಾವಣೆ ಸ್ಪರ್ಧಿಸಲಿದೆ ಎಂಬ ನಡ್ಡಾ ಘೋಷಣೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಮಹತ್ವ ಪಡೆದಿದೆ.  ನರೇಂದ್ರ ಮೋದಿ ಸರ್ಕಾರ  (Narendra Modi) ತಮಿಳುನಾಡಿನ ಅಭಿವೃದ್ಧಿಗೆ ಎಲ್ಲಾ ಕೆಲಸ ಮಾಡಿದೆ. ಕರೋನಾ (Corana) ಮಹಾಮಾರಿ, ಕರೋನಾ ವ್ಯಾಕ್ಸಿನ್, ಸಮುದ್ರದ ಗಡಿಯಲ್ಲಿನ ಭದ್ರತೆ ವಿಚಾರದಲ್ಲಿ ಮೋದಿ ಸರ್ಕಾರ ಬದ್ಧತೆಯಲ್ಲಿ ಕೆಲಸಮಾಡಿದೆ ಎಂದು ನಡ್ಡಾ ಹೇಳಿದ್ದಾರೆ.  


ಇದನ್ನೂ ಓದಿ : Mamata Banerjee: ದೀದಿಗೆ ಬಿಗ್ ಶಾಕ್: ಬಿಜೆಪಿ ಸೇರಲು ಐವರು TMC ನಾಯಕರು ದೆಹಲಿಗೆ!


ಬಿಜೆಪಿ-ಎಐಎಡಿಎಂಕೆ ಜುಗಲ್ ಬಂದಿ ಇದೇ ಮೊದಲೇನಲ್ಲ:
ಬಿಜೆಪಿ ಮತ್ತು ಎಐಎಡಿಎಂಕೆ ಈ ಮೊದಲು ಕೂಡಾ ಒಟ್ಟಿಗೆ ಸೇರಿ ಚುನಾವಣೆ ಸ್ಪರ್ಧಿಸಿವೆ.  ಕಳೆದ ಚುನಾವಣೆಯಲ್ಲಿ ಎಐಎಡಿಎಂಕೆಗೆ ಭರ್ಜರಿ ಗೆಲುವು ಪ್ರಾಪ್ತವಾಗಿತ್ತು. ಈ ಹೊತ್ತಿನಲ್ಲಿ ಎಐಎಡಿಎಂಕೆ ಜೊತೆ ಬಿಜೆಪಿ ಕೂಡಾ ಸೇರಿತ್ತು. ಆದರೆ, ಜಯಲಲಿತಾ (Jayalalithaa) ನಿಧನದ ನಂತರ ಚಿತ್ರಣ ಬದಲಾಗಿತ್ತು. ಎರಡೂ ಪಕ್ಷಗಳ ನಡುವೆ ಕಂದಕ ಸೃಷ್ಟಿಯಾಗಿತ್ತು.   ಪಳನಿ ಸ್ವಾಮಿ (Palanisamy) ಪಕ್ಷದ ನೇತೃತ್ವ ವಹಿಸಿದ್ದು, ಬಿಜೆಪಿ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. 


2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಬಲದ ವಿಧಾನಸಭೆಯಲ್ಲಿ ಎಐಎಡಿಎಂಕೆ (AIADMK )136 ಸ್ಥಾನಗಳನ್ನು ಗೆದ್ದು ಬಿಟ್ಟಿತ್ತು. ಡಿಎಂಕೆ (DMK) 89 ಮತ್ತು ಕಾಂಗ್ರೆಸ್ (Congress) ಕೇವಲ 8 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಳೆದ ಸಲ ಬಿಜೆಪಿ ಎಲ್ಲಾ 234 ಸ್ಥಾನಗಳಲ್ಲಿ ಸ್ಪರ್ಧಿಸಿತ್ತಾದರೂ, ಒಂದೇ ಒಂದು ಸ್ಥಾನದಲ್ಲಿ ಗೆದ್ದಿರಲಿಲ್ಲ. ಈ ಸಲ ಮಾತ್ರ ಗೆಲುವಿನ ಹೊಸ ಹುಮ್ಮಸ್ಸಿನಲ್ಲಿದೆ ಕಮಲದಳ.


ಇದನ್ನೂ ಓದಿ : Village Cooking Channel: ಅಣಬೆ ಬಿರಿಯಾನಿ ಸವಿದ ರಾಹುಲ್ ಗಾಂಧಿ...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ..
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.