ಬೆಂಗಳೂರು: ಬೆಲೆ ಏರಿಕೆ ದೊಡ್ಡ ಪೆಡಂಬೂತದಂತೆ ಜನಸಾಮಾನ್ಯರನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಇದರ ನಡುವೆ ಹೊಸ ಆರ್ಥಿಕ ವರ್ಷ ಆರಂಭವಾಗಿದ್ದು, ಇಂದಿನಿಂದ 350 ವಸ್ತುಗಳ ಮೇಲಿನ ತೆರಿಗೆಯಲ್ಲಿ ಭಾರೀ ಏರುಪೇರಾಗಿದೆ. ಹೀಗಾಗಿ ಬೆಲೆ ಏರಿಕೆ ಇನ್ನಷ್ಟು ನಿಮ್ಮ ಜೇಬನ್ನು ಸುಡಲಿದೆ.


COMMERCIAL BREAK
SCROLL TO CONTINUE READING

2021-22ರ ಆರ್ಥಿಕ ವರ್ಷ ಕೊನೆಗೊಂಡು 2022-23ರ ಆರ್ಥಿಕ ವರ್ಷಾರಂಭವಾಗಿದೆ. ಈ ಹಿನ್ನಲೆ ಹೊಸ ಆರ್ಥಿಕ ವರ್ಷದಲ್ಲಿ ಅನೇಕ ಸರಕು ಸೇವೆಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಳಿತವಾಗಿದೆ.ಮುಖ್ಯವಾಗಿ ಔಷಧಿ, ಕಾರು, ಗ್ಯಾಸ್, ಸೇರಿ ಅನೇಕ ಅಗತ್ಯ ಸೇವೆ ಹಾಗೂ ಸರಕುಗಳ ಏರಿಕೆ ಕಾಣ್ತಿದೆ.ಇದರ ನಡುವೆ ಔಷಧಿಗಳ ಬೆಲೆ ಕೂಡ ಏಪ್ರಿಲ್ ಒಂದರಿಂದ ಗಗನಕ್ಕೇರಲಿದೆ. ನೋವು ನಿವಾರಕ, ಆ್ಯಂಟಿ ವೈರಸ್, ಬ್ಯಾಕ್ಟೀರಿಯಾ ಸೋಂಕು ನಿವಾರಕ, ವಿಟಮಿನ್ಸ್ ಮತ್ತು ಮಿನರಲ್ಸ್, ಹೀಗೆ ಒಟ್ಟು 800 ಬಗೆಯ ಅತಿಮುಖ್ಯ ಔಷಧಿಗಳ ದರ ಏರಿಕೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.ಈ ಹಿನ್ನಲೆ ಇಂದಿನಿಂದಲೇ ಈ ಔಷಧಿಗಳ ದರದಲ್ಲಿ ಶೇಕಡಾ 10 ರಷ್ಟು ದರ ಏರಿಕೆಯಾಗಿದೆ.


ಕಮರ್ಷಿಯಲ್ ಗ್ಯಾಸ್ ದರ ಭಾರಿ ಪ್ರಮಾಣದಲ್ಲಿ ಏರಿಕೆ 


ಹೊಟೆಲ್ ಗಳಲ್ಲಿ ಬಳಕೆ ಆಹುವ ಸಿಲಿಂಡರ್ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ. ಒಂದು ಕಮರ್ಷಿಯಲ್ ಸಿಲಿಡರ್ ಬೆಲೆ ಬರೊಬ್ಬರಿ 261ರೂಪಾಯಿ 50 ಪೈಸೆಯಷ್ಟು ಏರಿಕೆಯಾಗಿದೆ.ಸದ್ಯ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ದರ 2.328ರೂಪಾಯಿ 50 ಪೈಸೆಗೆ ಬಂದು ತಲುಪಿದೆ. ಇನ್ನು ಗ್ಯಾಸ್ ದರ ಏರಿಕೆ ಹಾಗೂ ಇತರೆ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಹೋಟೆಲ್ ಮಾಲೀಕರು ಊಟ ಉಪಹಾರದ ಬೆಲೆ ಏರಿಕೆಗೆ ನಿರ್ಧರಿಸಿದ್ದಾರೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಈಬಗ್ಗೆ ಏಪ್ರಿಲ್ 4 ರಂದು ಸಭೆ ಕರೆದಿದ್ದು ಸಭೆಯಲ್ಲಿ ಬೆಲೆ ಏರಿಕೆ ಬಗ್ಗೆ ತೀರ್ಮಾನ ಮಾಡೋದಾಗಿ ಘೋಷಿಸಿದ್ದಾರೆ. ಹೀಗಾಗಿ ಹೋಟೆಲ್ ದರದಲ್ಲೂ ಕನಿಷ್ಠ 10 ಶೇಕಡಾದಷ್ಟು ಏರಿಕೆಯಾಗೋ ಎಲ್ಲಾ ಸಾಧ್ಯತೆಗಳಿವೆ.


ಬೆಲೆ ಏರಿಕೆಯಾಗೋ ಇತರೆ ಸರಕು ಸೇವೆಗಳು


ಕೃತಕ ಆಭರಣಗಳು
ಛತ್ರಿ
ಹೆಡ್ಫೋನ್
ಸೋಲಾರ್ ಸೆಲ್
ಎಲೆಕ್ಟ್ರಿಕ್ ಆಟಿಕೆಗಳು
ಐಷಾರಾಮಿ ಕಾರುಗಳ ಬಿಡಿಭಾಗಗಳು
ಉಕ್ಕು
ಮನೆ ಖರೀದಿಸಲು ಇದ್ದ ತೆರಿಗೆ ವಿನಾಯ್ತಿ ರದ್ದು


ಹೀಗೆ 350ಕ್ಕೂ ಹೆಚ್ಚು ಸರಕು ಸೇವೆಗಳ ದರದಲ್ಲಿ ಏರಿಕೆಯಾಗ್ತಿದೆ. ಅದೇರೀತಿ ಕೆಲ ವಸ್ತುಗಳ ದರ ಕೊಂಚ ಪ್ರಮಾಣದಲ್ಲಿ ಇಳಿಕೆಯೂ ಕಾಣ್ತಿದೆ ಮುಖ್ಯವಾಗಿ ಕ್ಯಾಮರಾಲೆನ್ಸ್, ಪಾಲಿಶ್ ಮಾಡಿದ ವಜ್ರ, ಬಟ್ಟೆ, ಚಪ್ಪಲಿ, ಕೃಷಿ ಉತ್ಪನ್ನ ಸೇರಿ ಜನಸಾಮಾನ್ಯರು ಬಳಸೋ ಹಲವು ವಸ್ತುಗಳ ದರದಲ್ಲಿ ಕೊಂಚ ಇಳಿಮುಖವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.