ನವದೆಹಲಿ: ದೇಶದಲ್ಲಿ ಕರೋನಾವೈರಸ್ ಭೀತಿ ನಡುವೆಯೂ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಕು ಮತ್ತು ಸೇವಾ ತೆರಿಗೆ ಜಾಲ (GSTN) ಇಂತಹ ವಂಚನೆಯನ್ನು ತಪ್ಪಿಸಲು ತೆರಿಗೆ ಪಾವತಿದಾರರನ್ನು ಎಚ್ಚರಿಸಿದೆ. ಈ ಸಮಯದಲ್ಲಿ, ದೇಶದಲ್ಲಿ ಜಿಎಸ್ಟಿ ಮರುಪಾವತಿ (GST Refund) ಯ ಹೆಸರಿನಲ್ಲಿ ವಂಚನೆ ನಡೆಯುವ ಬಗ್ಗೆ ಎಚ್ಚರವಹಿಸಿ. ಇಲ್ಲದಿದ್ದರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ತಿಳಿದಿದೆ.


COMMERCIAL BREAK
SCROLL TO CONTINUE READING

ಜಿಎಸ್‌ಟಿಎನ್ ಟ್ವೀಟ್ :
ಜಿಎಸ್ಟಿಎನ್ ಇಲಾಖೆಯ ಪರವಾಗಿ ಟ್ವೀಟ್ ಮಾಡುವ ಮೂಲಕ ಇಂತಹ ಸೈಬರ್ ವಂಚನೆ ಬಗ್ಗೆ  ಮಾಹಿತಿ ನೀಡಲಾಗಿದ್ದು ತೆರಿಗೆ ಪಾವತಿದಾರರಿಗೆ ಮೋಸ ಮಾಡಲಾಗುತ್ತಿರುವ ಬಗ್ಗೆ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಜಿಎಸ್‌ಟಿಎನ್ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಪ್ರತಿಯೊಬ್ಬರೂ ಈ ರೀತಿಯ ವೆಬ್‌ಸೈಟ್ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದೆ.



ಈ ರೀತಿಯ ವೆಬ್‌ಸೈಟ್‌ ಬಗ್ಗೆ ಜಾಗರೂಕರಾಗಿರಿ:
ಈ ವೆಬ್‌ಸೈಟ್ https://onlinefilingindia.in ಕುರಿತು ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದೆ. ಜನರು ತಮ್ಮ ಯಾವುದೇ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ಅಂತಹ ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಬಾರದು ಎಂದು ಸರ್ಕಾರ ಹೇಳಿದೆ. ಜಿಎಸ್‌ಟಿಎನ್ ಕೂಡ ಇದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಟ್ವೀಟ್ ಅನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಐಸಿ) ಕೂಡ ರಿಟ್ವೀಟ್ ಮಾಡಿದೆ.


ತೆರಿಗೆದಾರರೇ ಎಚ್ಚರ:


  • ಕೋವಿಡ್ -19 ರ ಕಾರಣದಿಂದಾಗಿ ವಂಚಕರು ನಕಲಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ, ಅದು ಫಿಶಿಂಗ್ ಲಿಂಕ್ ಹೊಂದಿದೆ ಎಂದು ಜಿಎಸ್ಟಿಎನ್ ಹೇಳಿದೆ.

  • ವಾಟ್ಸಾಪ್, ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಜಿಎಸ್‌ಟಿ ಮರುಪಾವತಿ ಬಗ್ಗೆ ಸಂದೇಶಗಳನ್ನು ಕಳುಹಿಸುತ್ತಿದೆ. ಇಂತಹ ಸಂದೇಶಗಳನ್ನು ನಿರ್ಲಕ್ಷಿಸಿ ಎಂದು ಹೇಳಲಾಗಿದೆ.

  • ತೆರಿಗೆದಾರರು ಜಿಎಸ್ಟಿ ಪೋರ್ಟಲ್ನಲ್ಲಿ ನಿಮ್ಮ ಮರುಪಾವತಿಗೆ ಮಾತ್ರ ಅರ್ಜಿ ಸಲ್ಲಿಸಿ.

  • ವಂಚಕರು ತಮ್ಮನ್ನು ತೆರಿಗೆ ಅಧಿಕಾರಿಗಳು ಅಥವಾ ಜಿಎಸ್‌ಟಿಎನ್ ಸಿಬ್ಬಂದಿಗಳು ಎಂದು ಸುಳ್ಳು ಹೇಳುವ  ಮೂಲಕ ನಕಲಿ ಇಮೇಲ್‌ಗಳನ್ನು ಕಳುಹಿಸಬಹುದು, ಅದರ ಮೂಲಕ ಅವರು ಜಿಎಸ್‌ಟಿ ಖಾತೆಯನ್ನು ತ್ವರಿತವಾಗಿ ಪರಿಶೀಲಿಸಲು ಅಥವಾ ನವೀಕರಿಸಲು ನಿಮ್ಮನ್ನು ಕೇಳಬಹುದು.

  • ಜಿಎಸ್ಟಿ ಪೋರ್ಟಲ್ ಯಾವುದೇ ರೀತಿಯ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.


ಆದಾಯ ತೆರಿಗೆ ಇಲಾಖೆಯಿಂದಲೂ ಎಚ್ಚರಿಕೆ:
ಈ ಹಿಂದೆ ಆದಾಯ ತೆರಿಗೆ ಇಲಾಖೆಯು ಗ್ರಾಹಕರಿಗೆ ಮರುಪಾವತಿ ಮಾಡುವ ಬಗ್ಗೆ ಎಚ್ಚರಿಕೆ ನೀಡಿತ್ತು. ಮರುಪಾವತಿಗಾಗಿ ನೀವು ಯಾವುದೇ ರೀತಿಯ ವಿಶೇಷ ಸಂದೇಶಗಳು ಮತ್ತು ಲಿಂಕ್‌ಗಳನ್ನು ಪಡೆದರೆ ಯಾವುದೇ ಕಾರಣಕ್ಕೂ ಅಂತಹ ಲಿಂಕ್ ಗಳನ್ನೂ ಕ್ಲಿಕ್ ಮಾಡಬೇಡಿ. ಆದಾಯ ತೆರಿಗೆ ಇಲಾಖೆ ವತಿಯಿಂದ ಆ ರೀತಿಯ ಯಾವುದೇ ಲಿಂಕ್ ಕಳುಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.