Corona ರೋಗಿಗಳಲ್ಲಿ ಹೆಚ್ಚಾದ TB Infection ಕುರಿತು ಅಡ್ವೈಸರಿ ಜಾರಿಗೊಳಿಸಿದ ಕೇಂದ್ರ ಸರ್ಕಾರ
TB Infection in Coronavirus Patients: ಕೋವಿಡ್ -19 ಗೆ ಸಂಬಂಧಿಸಿದ ನಿರ್ಬಂಧಗಳಿಂದಾಗಿ 2020 ರಲ್ಲಿ ಟಿಬಿ ಪ್ರಕರಣಗಳು ಸುಮಾರು 25% ರಷ್ಟು ಹೆಚ್ಚಾಗಿರುವ ಸಂದರ್ಭದಲ್ಲಿ ಸಚಿವಾಲಯ ಈ ಅಡ್ವೈಸರಿ ಜಾರಿಗೊಳಿಸಿದೆ.
ನವದೆಹಲಿ: TB Infection in Coronavirus Patients - ದೇಶದಲ್ಲಿ ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಕ್ಷಯ ರೋಗ (TB) ಪ್ರಕರಣಗಳು ಹೆಚ್ಚಿವೆ ಎಂಬ ವರದಿಗಳ ಹಿನ್ನೆಲೆ, ಎಲ್ಲಾ Covid -19 ಸಕಾರಾತ್ಮಕ ರೋಗಿಗಳಿಗೆ ಟಿಬಿ ತಪಾಸಣೆ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ (MoHFW) ಶನಿವಾರ ತನ್ನ ಶಿಫಾರಸುಗಳನ್ನು ಪುನರುಚ್ಚರಿಸಿದೆ. ಕೋವಿಡ್ -19 ಸೋಂಕಿತ ರೋಗಿಗಳಲ್ಲಿ ಕ್ಷಯರೋಗ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳ ಹಿನ್ನೆಲೆ ಸಚಿವಾಲಯ ಈ ಅಡ್ವೈಸರಿ ಜಾರಿಗೊಳಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, 'ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ಕೋವಿಡ್ -19 ಸಕಾರಾತ್ಮಕ ರೋಗಿಗಳಿಗೆ ಟಿಬಿ ಪರೀಕ್ಷೆ ಮತ್ತು ಎಲ್ಲಾ ಟಿಬಿ ಗುಣಪಡಿಸಿದ ರೋಗಿಗಳಿಗೆ ಕರೋನಾ (Coronavirus) ಪರೀಕ್ಷೆಯನ್ನು ಶಿಫಾರಸು ಮಾಡಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆಗಸ್ಟ್ 2020 ರಿಂದ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿಗಾ ಹೆಚ್ಚಿಸಲು ಮತ್ತು ಟಿಬಿ ಮತ್ತು Covid -19 ಗಾಗಿ ಕೇಸ್-ಫೈಂಡಿಂಗ್ ಪ್ರಯತ್ನಗಳನ್ನು ವೇಗಗೊಳಿಸಲು ಸೂಚಿಸಲಾಗಿದೆ.
ಇದಲ್ಲದೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಟಿಬಿ-ಕರೋನಾ ಮತ್ತು TB-ILI / SARI ದ್ವಿಮುಖ ಸ್ಕ್ರೀನಿಂಗ್ (Bi-Directional Screening) ಅಗತ್ಯವನ್ನು ಪುನರುಚ್ಚರಿಸಲು ಸರ್ಕಾರ ಹಲವಾರು ಸಲಹೆಗಳು ಮತ್ತು ಮಾರ್ಗದರ್ಶನಗಳನ್ನು ನೀಡಿದೆ. ಕೋವಿಡ್ -19 ಗೆ ಸಂಬಂಧಿಸಿದ ನಿರ್ಬಂಧಗಳಿಂದಾಗಿ 2020 ರಲ್ಲಿ ಟಿಬಿ ಪ್ರಕರಣಗಳು ಸುಮಾರು 25% ರಷ್ಟು ಹೆಚ್ಚಾದ ಸಂದರ್ಭದಲ್ಲಿ ಸಚಿವಾಲಯ ಈ ಅಡ್ವೈಸರಿ ಜಾರಿಗೊಳಿಸಿದೆ. ಒಪಿಡಿ ಸೆಟ್ಟಿಂಗ್‌ಗಳಲ್ಲಿ ತೀವ್ರವಾದ ಪ್ರಕರಣಗಳ ಸ್ಕ್ರೀನಿಂಗ್ ಜೊತೆಗೆ ಎಲ್ಲಾ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಟೆಸ್ಟ್ ಅಭಿಯಾನ ನಡೆಸುವ ಮೂಲಕ ಈ ಪರಿಣಾಮವನ್ನು ಕಡಿಮೆ ಮಾಡಲು ವಿಶೇಷ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ಹೇಳಿದೆ.
ಇದನ್ನೂ ಓದಿ-Monkey Pox: 20 ವರ್ಷಗಳಲ್ಲಿ ಮೊದಲ ಬಾರಿಗೆ ಯುಎಸ್ ನಲ್ಲಿ ಮಂಕಿ ಪಾಕ್ಸ್ ಪ್ರಕರಣ ವರದಿ
ಆದರೆ, ಕೊವಿಡ್-19 ಕಾರಣ ಟಿಬಿ ಪ್ರಕರಣಗಳು ಏರಿಕೆಯಾಗಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂಬುದನ್ನೂ ಕೂಡ ಸರ್ಕಾರ ಸ್ಪಷ್ಟಪಡಿಸಿದೆ. ಕ್ಷಯರೋಗ ಹಾಗೂ ಕೊವಿಡ್-19 ಡ್ಯುವೆಲ್ ಕಾಯಿಲೆಯ ಮೇಲೆ ಬೆಳಕು ಚೆಲ್ಲಿರುವ ಆರೋಗ್ಯ ಸಚಿವಾಲಯ, ಈ ಎರಡೂ ಕಾಯಿಲೆಗಳನ್ನು ಸಾಂಕ್ರಾಮಿಕ ಕಾಯಿಲೆಗಳು ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ಈ ಎರಡು ಕಾಯಿಲೆಗಳು ಪ್ರಮುಖವಾಗಿ ಪುಪ್ಪುಸದ ಮೇಲೆ ಪ್ರಭಾವ ಬೀರುತ್ತವೆ. ಇವೆರಡರಲ್ಲಿಯೂ ಕೂಡ ಕೆಮ್ಮು, ಜ್ವರ ಹಾಗೂ ಉಸಿರಾಡಲು ತೊಂದರೆ ಎದುರಾಗುವುದು ಸಾಮಾನ್ಯ ಲಕ್ಷಣಗಳಾಗಿವೆ. ಆದರೆ, ಟಿಬಿ ಲಕ್ಷಣಗಳು ಕಾಣಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ ಮತ್ತು ಕಾಯಿಲೆಯ ಆರಂಭ ತುಂಬಾ ನಿಧಾನ ಗತಿಯಲ್ಲಿರುತ್ತದೆ.
ಬ್ಲಾಕ್ ಫಂಗಸ್ (Black Fungus) ನಂತಹ ಪೋಸ್ಟ್ ಕೊವಿಡ್ ಕಾಯಿಲೆಯ ವಿರುದ್ಧವೂ ಕೂಡ ಒಂದು ಎಚ್ಚರಿಕೆಯನ್ನು ನೀಡಿರುವ ಕೇಂದ್ರ ಸಚಿವಾಲಯ ಸಾರ್ಸ್-ಕೋವ್-2 (SARS-Cov-2)ಸೋಂಕಿತ ಓರ್ವ ವ್ಯಕ್ತಿಯಲ್ಲಿ ಟಿಬಿ ರೋಗ ಅಭಿವೃದ್ಧಿ ಆತನನ್ನು ಇನ್ನಷ್ಟು ಸೂಕ್ಷ್ಮಗೊಳಿಸುತ್ತಿದೆ. ಏಕೆಂದರೆ ಬ್ಲಾಕ್ ಫಂಗಸ್ ರೀತಿಯಲ್ಲಿಯೇ ಟಿಬಿ ಸೋಂಕು ಕೂಡ ದುರ್ಬಲ ಶರೀರದ ಮೇಲೆ ಹಲ್ಲೆ ನಡೆಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.