ಅಮರಾವತಿಯನ್ನು ನಕ್ಷೆಯಲ್ಲಿ ಸೇರಿಸಿದ್ದಕ್ಕೆ ಅಮಿತ್ ಶಾಗೆ ಥ್ಯಾಂಕ್ಸ್ ಹೇಳಿದ ಚಂದ್ರಬಾಬು ನಾಯ್ಡು
ಅಮರಾವತಿಯನ್ನು ನಕ್ಷೆಯಲ್ಲಿ ಸೇರಿಸಿದ್ದಕ್ಕಾಗಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಶನಿವಾರ ಧನ್ಯವಾದ ಅರ್ಪಿಸಿದ್ದಾರೆ.
ನವದೆಹಲಿ: ಅಮರಾವತಿಯನ್ನು ನಕ್ಷೆಯಲ್ಲಿ ಸೇರಿಸಿದ್ದಕ್ಕಾಗಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಶನಿವಾರ ಧನ್ಯವಾದ ಅರ್ಪಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅಮರಾವತಿಯನ್ನು ನಕ್ಷೆಯಲ್ಲಿ ಸೇರಿಸಿ ಸರಿಪಡಿಸಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇನ್ನೊಂದೆಡೆಗೆ ಇದೇ ಪತ್ರವನ್ನು ಅವರುಗೃಹ ಸಚಿವಾಲಯದ ರಾಜ್ಯ ಸಚಿವ (ಎಂಒಎಸ್) ರಿಗೆ ಕಳುಹಿಸಿದ್ದಾರೆ.
ಶುಕ್ರವಾರ ನಕ್ಷೆಯನ್ನು ಸರಿಪಡಿಸಿದ ನಂತರ, ಟಿಡಿಪಿ ಪ್ರಧಾನ ಕಾರ್ಯದರ್ಶಿ ನರಾ ಲೋಕೇಶ್ ಅವರು ಟ್ವೀಟ್ ಮೂಲಕ ಪಕ್ಷದ ಸಂಸದ ಜಯದೇವ್ ಗಲ್ಲಾ ಅವರ ಹೋರಾಟದ ಫಲವಾಗಿ ಈಗ ನಕ್ಷೆ ಸರಿಯಾಗಿದೆ ಎಂದು ಹೇಳಿದ್ದಾರೆ.
"ಚಂದ್ರಬಾಬು ಅವರು ಅಮರಾವತಿಯನ್ನು ವಿಶ್ವ ಭೂಪಟದಲ್ಲಿ ಸೇರಿಸಿದ್ದಾರೆ. ಅಮರಾವತಿಯನ್ನು ನಕ್ಷೆಯಲ್ಲಿ ಸೇರಿಸಿಕೊಳ್ಳಲು ಟಿಡಿಪಿ ಸಂಸದ ಜಯದೇವ್ ಲೋಕಸಭೆಯಲ್ಲಿ ಹೋರಾಡಿದ ನಂತರ ಸರ್ವೆ ಆಫ್ ಇಂಡಿಯಾ ಬಿಡುಗಡೆ ಮಾಡಿದೆ ಇದರ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಲೋಕೇಶ್ ತೆಲುಗಿನಲ್ಲಿ ಟ್ವೀಟ್ ಮಾಡಿದ್ದಾರೆ.
ಗುರುವಾರ, ಟಿಡಿಪಿ ಸಂಸದ ಜಯದೇವ್ ಗಲ್ಲಾ ಅವರು ಗೃಹ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ನಕ್ಷೆಯಲ್ಲಿ ಅಮರಾವತಿ ಇಲ್ಲ ಎಂದು ಹೇಳುವ ಮೂಲಕ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ನಂತರ, ಜಿ ಕಿಶನ್ ರೆಡ್ಡಿ ಅವರು ಗೃಹ ಸಚಿವಾಲಯ ಬಿಡುಗಡೆ ಮಾಡಿದ ರಾಜಕೀಯ ನಕ್ಷೆಯಿಂದ ಅಮರಾವತಿಗೆ ಕಾಣೆಯಾದ ದೋಷವನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.