ಗುರುಗ್ರಾಮ: ಇಲ್ಲಿನ ಶಾಲೆಯೊಂದರಲ್ಲಿ ಮಕ್ಕಳನ್ನು ಸುಮ್ಮನಿರಿಸಲು LKGಯ ಇಬ್ಬರು ವಿದ್ಯಾರ್ಥಿಗಳ ಬಾಯಿಗೆ ಸೆಲ್ಲೋ ಟೇಪ್ ಅಂಟಿಸಿದ್ದ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ ಎಂದು ಶಾಲಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಘಟನೆ ಅಕ್ಟೋಬರ್ ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ವೀಡಿಯೋದಲ್ಲಿ ಶಿಕ್ಷಕಿಯು ನಾಲ್ಕು ವರ್ಷದ ಇಬ್ಬರು ವಿದ್ಯಾರ್ಥಿಗಳ ಬಾಯಿಗೆ ಸೆಲ್ಲೋ ಟೇಪ್ ಅಂಟಿಸಿರುವುದು ಸ್ಪಷ್ಟವಾಗಿತ್ತು. 


ವಿದ್ಯಾರ್ಥಿಗಳ ಪೋಷಕರು ಘಟನೆ ಸಂಬಂಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ ಬೆನ್ನಲ್ಲೇ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ ಎಂದು ಶಾಲೆ ಪ್ರಾಂಶುಪಾಲ ಗುರುರಾಜ್ ಹೇಳಿದ್ದಾರೆ.


ಮಕ್ಕಳು ತರಗತಿಯಲ್ಲಿ ತುಂಬಾ ಗಲಾಟೆ ಮಾಡುತ್ತಿದ್ದುದಲ್ಲದೆ, ಪಾಠ ಮಾಡಲು ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲದೆ, ಕೆಟ್ಟ ಮಾತುಗಳನ್ನು ಆಡುತ್ತಿದ್ದರು ಎಂದು ಆರೋಪಿ ಶಿಕ್ಷಕಿ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.