ಕಾನ್ಪುರ (ಉತ್ತರ ಪ್ರದೇಶ): ಜಿಲ್ಲೆಯಲ್ಲಿ 13 ವರ್ಷದ ಬಾಲಕನೊಬ್ಬ ಮೂರು ವರ್ಷದ ಬಾಲಕಿಗೆ ಅಶ್ಲೀಲ ವಿಡಿಯೋ (obscene video) ತೋರಿಸಿ ಅತ್ಯಾಚಾರ (Teen boy rapes girl) ಎಸಗಿದ ಘಟನೆ ಭಾನುವಾರ ನಡೆದಿದೆ. ಬಾಲಕಿಯ ಪೋಷಕರು ಸೋಮವಾರ ಎಫ್‌ಐಆರ್ ದಾಖಲಿಸಿದ್ದು,  ಬಾಲಾಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

ಅಂದು ನಡೆದಿದ್ದೀನು?:


ಬಾಲಕಿಯ ಪೋಷಕರು ನೀಡಿದ ದೂರಿನ ಪ್ರಕಾರ, ಆಕೆಯ ತಂದೆ ಭಾನುವಾರ ಕೆಲಸಕ್ಕೆ ಹೋಗಿದ್ದು, ಆಕೆ ಮತ್ತು ಆಕೆಯ ತಾಯಿ ಮನೆಯಲ್ಲಿದ್ದರು. ಸಂಜೆ, ಪಕ್ಕದ ಮನೆಯ 13 ವರ್ಷದ ಬಾಲಕ 3 ವರ್ಷದ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. 


ಹುಡುಗ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋವನ್ನು ಪ್ಲೇ ಮಾಡಿದ್ದಾನೆ. ನಮ್ಮ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆಯ ಸ್ಥಿತಿ ಗಂಭೀರವಾದಾಗ ಅವನು ಅವಳನ್ನು ಮನೆಯ ಹೊರಗೆ ದೂದಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಬಾಲಕಿಯ ತಾಯಿ ಆಕೆಯನ್ನು ನೋಡಿದಾಗ ನಡೆದ ಘಟನೆಯ ಬಗ್ಗೆ ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತಾಯಿಯು ಮಗಳ ಸ್ಥಿತಿಯ ಬಗ್ಗೆ ತನ್ನ ಅತ್ತೆ-ಮಾವನಿಗೆ ತಿಳಿಸಿದ್ದು, ಅವರು ಬಾಲಕನನ್ನು ಹಿಡಿದು ಥಳಿಸಿದ್ದಾರೆ.


ಇದನ್ನೂ ಓದಿ: ದುಬಾರಿ ಸೂರ್ಯ! ಇನ್‌ಸ್ಟಾಗ್ರಾಮ್‌ನಲ್ಲಿ ಹವಾ ಎಬ್ಬಿಸಿದ ಈ ಫೋಟೋ ಬೆಲೆ ಎಷ್ಟುಗೊತ್ತೆ?


ಇದೇ ವೇಳೆ ಬಾಲಕಿಯನ್ನು ಚಿಕಿತ್ಸೆಗಾಗಿ ಕ್ಲಿನಿಕ್‌ಗೆ ಕರೆದೊಯ್ದು ಸಂಜೆ ಮನೆಗೆ ಕರೆತಂದಿದ್ದಾರೆ. ಆ ರಾತ್ರಿಯ ನಂತರ ಆಕೆಯ ಸ್ಥಿತಿ ಹದಗೆಟ್ಟಿತು. ಸೋಮವಾರ, ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅವರು ಅವಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಸದ್ಯ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ.


ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಬಾಲಾಪರಾಧಿಯನ್ನು (boy rapes girl) ವಶಕ್ಕೆ ಪಡೆಯಲಾಗಿದೆ. ಎಲ್ಲಾ ಕಾನೂನು ಕ್ರಮಗಳ ನಂತರ ಆತನನ್ನು ಬಾಲಮಂದಿರಕ್ಕೆ ಕಳುಹಿಸಲಾಗುವುದು ಎಂದು ಬಿದ್ನೂ ಪೊಲೀಸ್ ಠಾಣೆ ಪ್ರಭಾರಿ ಅತುಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.