ನವದೆಹಲಿ: ದುರದೃಷ್ಟಕರ ಘಟನೆಯೊಂದರಲ್ಲಿ ಹದಿಹರೆಯದ ಯುವಕನೋರ್ವ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಮೃತನನ್ನು ನೋಯ್ಡಾ (Noida)ದ ಸಲಾರ್ಪುರ್ ಗ್ರಾಮದ ನಿವಾಸಿ ನೂರ್ ಇಕ್ಬಾಲ್ (18) ಎಂದು ಗುರುತಿಸಲಾಗಿದೆ.  ಮೃತ ಟಿಕ್‌ಟಾಕ್‌ನಲ್ಲಿ ತಮ್ಮ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಅವರು ಅಪ್ಲಿಕೇಶನ್‌ನಲ್ಲಿ ಸಾಕಷ್ಟು ಲೈಕ್ಸ್ ಬರುತ್ತಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದನು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.


ಏಪ್ರಿಲ್ 16ರಂದು ಸಂಜೆ ಅವರು ತಮ್ಮ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ನಿಂದಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೋಲಿಸರು ಬಾಗಿಲನ್ನು ಒಡೆದು ಮೃತ ದೇಹವನ್ನು ಇಳಿಸಿದ್ದಾರೆ.


ಮೃತ ಓರ್ವ ಒಳ್ಳೆಯ ಯುವಕ. ತನ್ನ ಟಿಕ್‌ಟಾಕ್‌ (Tik Tok) ವಿಡಿಯೋವನ್ನು ಇಷ್ಟಪಡುವಂತೆ (ಲೈಕ್ ಮಾಡುವಂತೆ) ಪ್ರತಿಯೊಬ್ಬರಿಗೂ ಕರೆ ಮಾಡಿ ವೈಯಕ್ತಿಕವಾಗಿ ವಿನಂತಿಸುತ್ತಿದ್ದರು ಎಂದು ಆತನ ಕುಟುಂಬ ಮತ್ತು ನೆರೆಹೊರೆಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಮೃತರ ಕುಟುಂಬ ಮೂಲತಃ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಗೆ ಸೇರಿದವರು. ಅವರ ತಂದೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಸದಾ ಎಷ್ಟೇ ಕಷ್ಟವಾದರೂ ಮಗನ ಆಸೆಗಳನ್ನು ಈಡೇರಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ (Lockdown) ಇರುವ ಕಾರಣ ತಂದೆ-ಮಗ ಇಬ್ಬರೂ ಮನೆಯೊಳಗೇ ಇದ್ದರು ಎಂದು ತಿಳಿದುಬಂದಿದೆ.