ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಯೋಧ ತೇಜ್ ಬಹದೂರ್ ಯಾದವ್ ನಾಮಪತ್ರ ರದ್ದು
ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜ್ ಬಹದ್ದೂರ್ ಯಾದವ್ ಅವರ ಅರ್ಜಿಯನ್ನು ಚುನಾವಣಾ ಆಯೋಗ ರದ್ದು ಪಡಿಸಿದೆ.ತೇಜ್ ಬಹದ್ದೂರ್ ಯಾದವ್ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಚುನಾವಣಾ ಆಯೋಗವು ಕೆಲವು ದಾಖಲೆಗಳನ್ನು ನೀಡಲು ಅಂತಿಮ ಗಡುವು ನೀಡಿತ್ತು.ಈಗ ಈ ಗಡುವು ಮೀರಿದ ಹಿನ್ನಲೆಯಲ್ಲಿ ಅವರ ಅರ್ಜಿಯನ್ನು ಆಯೋಗವು ರದ್ದು ಪಡಿಸಿದೆ.
ನವದೆಹಲಿ: ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜ್ ಬಹದ್ದೂರ್ ಯಾದವ್ ಅವರ ಅರ್ಜಿಯನ್ನು ಚುನಾವಣಾ ಆಯೋಗ ರದ್ದು ಪಡಿಸಿದೆ.ತೇಜ್ ಬಹದ್ದೂರ್ ಯಾದವ್ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಚುನಾವಣಾ ಆಯೋಗವು ಕೆಲವು ದಾಖಲೆಗಳನ್ನು ನೀಡಲು ಅಂತಿಮ ಗಡುವು ನೀಡಿತ್ತು.ಈಗ ಈ ಗಡುವು ಮೀರಿದ ಹಿನ್ನಲೆಯಲ್ಲಿ ಅವರ ಅರ್ಜಿಯನ್ನು ಆಯೋಗವು ರದ್ದು ಪಡಿಸಿದೆ.
ಈಗ ಚುನಾವಣಾ ಆಯೋಗದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ತೇಜ್ ಬಹದೂರ್ ಯಾದವ್ ತಮ್ಮ ಅರ್ಜಿಯನ್ನು ತಪ್ಪಾಗಿ ತಿರಸ್ಕರಿಸಲಾಗಿದೆ.ಆದ್ದರಿಂದ ತಾವು ಸುಪ್ರೀಂಕೋರ್ಟ್ ಗೆ ಹೋಗುವುದಾಗಿ ತಿಳಿಸಿದ್ದಾರೆ."ನಿನ್ನೆ 6:15 ಕ್ಕೆ ಎಲ್ಲ ಪುರಾವೆಗಳನ್ನು ಒದಗಿಸಬೇಕೆಂದು ನನಗೆ ಹೇಳಲಾಗಿತ್ತು, ಅದರ ಅನುಗುಣವಾಗಿ, ನಾವು ಎಲ್ಲ ಪುರಾವೆಗಳನ್ನು ಸಲ್ಲಿಸಿದ್ದೇವೆ. ಆದಾಗ್ಯೂ ನನ್ನ ನಾಮನಿರ್ದೇಶನವನ್ನು ತಿರಸ್ಕರಿಸಲಾಗಿದೆ" ಎಂದು ತೇಜ್ ಬಹದ್ದೂರ್ ಯಾದವ್ ಸುದ್ದಿಗಾರರಿಗೆ ತಿಳಿಸಿದರು.
ನಿನ್ನೆ ಚುನಾವಣಾ ಆಯೋಗವು ತಾವು ಕೆಲಸದಿಂದ ವಜಾವಾಗಿರುವ ಬಗ್ಗೆ ಸ್ಪಷ್ಟನೆ ಕೇಳಲಾಗಿತ್ತು, ಆಯೋಗವು ತನ್ನ ಪತ್ರದಲ್ಲಿ ರಾಜ್ಯ ಅಥವಾ ಕೇಂದ್ರ ಸರಕಾರದ ನೌಕರರು ಭ್ರಷ್ಟಾಚಾರ ಅಥವಾ ರಾಜ್ಯಕ್ಕೆ ಅವಿಧೇಯರಾಗಿದ್ದಲ್ಲಿ ಅಂತವರನ್ನು ಐದು ವರ್ಷಗಳ ಕಾಲ ಪ್ರಚಾರ ಮಾಡುವುದರಿಂದ ಅನರ್ಹಗೊಳಿಸಲಾಗುತ್ತದೆ ಎಂದು ತಿಳಿಸಿತ್ತು. ಬಿಎಸ್ಎಫ್ ನಲ್ಲಿ ಸೈನಿಕರಾಗಿರುವ ತೇಜ್ ಬಹದೂರ್ ಯಾದವ್ ಅವರು ಈ ಹಿಂದೆ ಬಹಿರಂಗವಾಗಿ ಸೈನ್ಯದಲ್ಲಿ ಗುಣಮಟ್ಟದ ಆಹಾರವನ್ನು ನೀಡುತ್ತಿಲ್ಲವೆಂದು ಆರೋಪಿಸಿದ್ದರ ಹಿನ್ನಲೆಯಲ್ಲಿ ಅವರನ್ನು ಹುದ್ದೆಯಿಂದ ವಜಾಮಾಡಲಾಗಿತ್ತು.