ಪಾಟ್ನಾ (ಬಿಹಾರ): ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುವ ಲಾಲೂ ಪ್ರಸಾದ್​​ ಯಾದವ್ (RJD leader Lalu Prasad Yadav) ಪುತ್ರ ಹಾಗೂ ಆರ್‌ಜೆಡಿ ಶಾಸಕ ತೇಜ್‌ ಪ್ರತಾಪ್ ಯಾದವ್ (Tej Pratap Yadav) ಇದೀಗ ಹೊಸದೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ. ಭಗವಾನ್ ಕೃಷ್ಣ ಮತ್ತು ಶಿವನ ಉಡುಪನ್ನು ಧರಿಸುವುದರಿಂದ ಹಿಡಿದು ಪಕ್ಷದ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಕೊಳಲು ನುಡಿಸುವವರೆಗೆ, ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಹಲವಾರು ಬಾರಿ ಜನರನ್ನು ಮೆಚ್ಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಾರಿ, ತೇಜ್ ಪ್ರತಾಪ್ ಅವರು 50,000 ರೂಪಾಯಿ ಮೌಲ್ಯದ ಐಫೋನ್ (iPhone) ಖರೀದಿಸಿ ಪಾಟ್ನಾದ ಬೀದಿಗಳಲ್ಲಿ ಪೆನ್ನುಗಳನ್ನು ಮಾರುತ್ತಿದ್ದ ಬಾಲಕಿಗೆ ಉಡುಗೊರೆಯಾಗಿ ನೀಡಿದ್ದಾರೆ.  ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾದುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.


 


Omicron ಭೀತಿ ನಡುವೆ, ಮುಂಬೈನಲ್ಲಿ ವಿದೇಶದಿಂದ ಹಿಂತಿರುಗಿದ 109 ಜನ ನಾಪತ್ತೆ


ಇದರಿಂದ ಭಾವುಕರಾದ ಲಾಲೂ ಪ್ರಸಾದ್ ಪುತ್ರ ಬಾಲಕಿಯನ್ನು ಸಮೀಪದ ಮೊಬೈಲ್ ಅಂಗಡಿಗೆ ಕರೆದೊಯ್ದಿದ್ದಾರೆ. ಆಕೆಗೆ 50,000 ರೂಪಾಯಿ ಮೌಲ್ಯದ ಆಪಲ್ ಐಫೋನ್ ಖರೀದಿಸಿ, ಉಡುಗೊರೆ ನೀಡಿದ್ದಾರೆ. 


ದುಬಾರಿ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದ ನಂತರ, ಅದನ್ನು ತನ್ನ ಶಿಕ್ಷಣಕ್ಕಾಗಿ ಬಳಸುವುದಾಗಿ ಮತ್ತು ಬೀದಿಯಲ್ಲಿ ಪೆನ್ನುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಬಾಲಕಿ ಹೇಳಿದ್ದಾಳೆ.