Omicron ಭೀತಿ ನಡುವೆ, ಮುಂಬೈನಲ್ಲಿ ವಿದೇಶದಿಂದ ಹಿಂತಿರುಗಿದ 109 ಜನ ನಾಪತ್ತೆ

ಓಮಿಕ್ರಾನ್ (Omicron) ಭಯದ ಮಧ್ಯೆ, ಮಹಾರಾಷ್ಟ್ರದ ಥಾಣೆ ಜಿಲ್ಲೆಗೆ ಇತ್ತೀಚೆಗೆ ಹಿಂದಿರುಗಿದ 295 ವಿದೇಶಿಯರಲ್ಲಿ 109 ಜನರು ಪ್ರಸ್ತುತ ಪತ್ತೆಯಾಗಿಲ್ಲ.

Edited by - Zee Kannada News Desk | Last Updated : Dec 7, 2021, 09:22 AM IST
  • ಥಾಣೆ ಜಿಲ್ಲೆಗೆ ಇತ್ತೀಚೆಗೆ ಹಿಂದಿರುಗಿದ 295 ವಿದೇಶಿಯರು
  • ಇವರಲ್ಲಿ 109 ಜನ ಪ್ರಸ್ತುತ ಪತ್ತೆಯಾಗಿಲ್ಲ
  • KDMC ಮುಖ್ಯಸ್ಥ ವಿಜಯ್ ಸೂರ್ಯವಂಶಿ ಮಾಹಿತಿ
Omicron ಭೀತಿ ನಡುವೆ,  ಮುಂಬೈನಲ್ಲಿ ವಿದೇಶದಿಂದ ಹಿಂತಿರುಗಿದ 109 ಜನ ನಾಪತ್ತೆ  title=
ವಿದೇಶದಿಂದ ಹಿಂತಿರುಗಿದ 109 ಜನ ನಾಪತ್ತೆ

ಥಾಣೆ (ಮಹಾರಾಷ್ಟ್ರ): ಓಮಿಕ್ರಾನ್ (Omicron) ಭಯದ ಮಧ್ಯೆ, ಥಾಣೆ ಜಿಲ್ಲೆಗೆ ಇತ್ತೀಚೆಗೆ ಹಿಂದಿರುಗಿದ 295 ವಿದೇಶಿಯರಲ್ಲಿ 109 ಜನರು ಪ್ರಸ್ತುತ ಪತ್ತೆಯಾಗಿಲ್ಲ ಎಂದು ಕಲ್ಯಾಣ್ ಡೊಂಬಿವಲಿ ಮುನ್ಸಿಪಲ್ ಕಾರ್ಪೊರೇಷನ್ ( Kalyan Dombivali Municipal Corporation) ಮುಖ್ಯಸ್ಥ ವಿಜಯ್ ಸೂರ್ಯವಂಶಿ ಹೇಳಿದ್ದಾರೆ. 

ಈ ಜನರಲ್ಲಿ ಕೆಲವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿದ್ದು, ಕೊನೆಯದಾಗಿ ನೀಡಿದ ಹಲವು ವಿಳಾಸಗಳು ಲಾಕ್ ಆಗಿರುವುದು ಕಂಡುಬಂದಿದೆ ಎಂದು ಹೇಳಿದರು.

ಇದನ್ನೂ ಓದಿ: ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗವು ಕೊರೊನಾಗಿಂತಲೂ ಭೀಕರ, ವಿಜ್ಞಾನಿಗಳ ಎಚ್ಚರಿಕೆ ಘಂಟೆ

ಎಲ್ಲಾ ಅಪಾಯದಲ್ಲಿರುವ ರಾಷ್ಟ್ರಗಳಿಂದ ಕೆಡಿಎಂಸಿ (KDMC) ಮಿತಿಗಳಿಗೆ ಹಿಂದಿರುಗುವವರು 7 ದಿನಗಳ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ ಮತ್ತು ಎಂಟನೇ ದಿನ COVID-19 ಪರೀಕ್ಷೆಯನ್ನು ನಡೆಸಲಾಗುವುದು ಎಂದು ಹೇಳಿದರು.

COVID ರಿಪೋರ್ಟ್  ನಕಾರಾತ್ಮಕವಾಗಿದ್ದರೂ ಸಹ, ಅವರು ಇನ್ನೂ 7 ದಿನಗಳ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ನಿಯಮವನ್ನು ಉಲ್ಲಂಘಿಸದಂತೆ ನೋಡಿಕೊಳ್ಳುವುದು ಹೌಸಿಂಗ್ ಸೊಸೈಟಿ ಸದಸ್ಯರ ಕರ್ತವ್ಯವಾಗಿದೆ. ಉಲ್ಲಂಘನೆಗಳನ್ನು ತಡೆಯಲು ಮದುವೆಗಳು, ಕೂಟಗಳು ಇತ್ಯಾದಿಗಳ ಮೇಲೆ ನಿಗವಹಿಸಲಾಗಿದೆ ಎಂದು  ತಿಳಿಸಿದರು. 

ಇದನ್ನೂ ಓದಿ:Omicron ಭೀತಿ ಮಧ್ಯೆಯೇ ತೆಲಂಗಾಣದ 43 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ಧೃಢ..!

ಕೆಡಿಎಂಸಿಯಲ್ಲಿ (KDMC) ಶೇಕಡಾ 72 ರಷ್ಟು ಜನರು ಲಸಿಕೆಯ ಮೊದಲ ಡೋಸ್ ಅನ್ನು ತೆಗೆದುಕೊಂಡಿದ್ದಾರೆ ಮತ್ತು ಶೇಕಡಾ 52 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಹೇಳಿದರು.

ಇತ್ತೀಚೆಗೆ ಡೊಂಬಿವಲಿ ನಿವಾಸಿಯೊಬ್ಬರಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ.

Trending News