ಶಿವನ ವೇಷ ಧರಿಸಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಲಾಲು ಪುತ್ರ !
ಪಾಟ್ನಾ: ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ರ ಮಗ ತೇಜ್ ಪ್ರತಾಪ್ ಯಾದವ್ ಮಂಗಳವಾರದಂದು ಭಗವಾನ್ ಶಿವನಂತೆ ವೇಷ ಧರಿಸಿ, ದಿಯೋಘರ್ನಲ್ಲಿರುವ ಬಾಬಾ ಬೈದ್ಯನಾಥ ಧಾಮಕ್ಕೆ ತೆರಳುವ ಮೊದಲು ಪಾಟ್ನಾದಲ್ಲಿನ ಶಿವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಕುರಿತಾಗಿ ಎಎನ್ಐ ಪ್ರತಿಕ್ರಿಯಿಸಿದ ತೇಜ್ ಪ್ರತಾಪ್ "ಬಿಹಾರದ ಜನರು ಮತ್ತು ಇಡೀ ರಾಷ್ಟ್ರದ ನೆಮ್ಮದಿಗಾಗಿ ಪ್ರಾರ್ಥನೆ ಮಾಡಲಾಗುತ್ತಿದೆ. ಆ ಮೂಲಕ ಎಲ್ಲರೂ, ಯಾವುದೇ ಭೇದ ಅಥವಾ ಅಡೆ ತಡೆ ಇಲ್ಲದೆ ಶಾಂತಿಯಿಂದ ಬದುಕುವುದಕ್ಕಾಗಿ ಪ್ರಾರ್ಥಿಸಲಾಗುತ್ತಿದೆ. ಅಲ್ಲದೆ ನನ್ನ ತಂದೆಯ ಆರೋಗ್ಯಕ್ಕಾಗಿ ಕೂಡ ನಾನು ಪ್ರಾರ್ಥನೆ ಮಾಡುತ್ತೇನೆ, ಮತ್ತು ಅವರ ದೀರ್ಘಾಯುಷ್ಯಕ್ಕೆ ಪ್ರಾರ್ಥಸುತ್ತೇನೆ" ಎಂದು ಅವರು ತಿಳಿಸಿದರು.
ಇತ್ತೀಚಿಗೆ ಲಾಲು ಪ್ರಸಾದ್ ಯಾದವ್ ಹೃದಯ ಸಮಸ್ಯೆಯ ಕಾರಣದಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು .