4G ಅಪ್ಗ್ರೇಡ್ಗಾಗಿ ಯಾವುದೇ ಚೀನೀ ಉತ್ಪನ್ನ ಬಳಸುವಂತಿಲ್ಲ - ಬಿಎಸ್ಎನ್ಎಲ್ಗೆ ಕೇಂದ್ರದ ಆದೇಶ
ಭಾರತದ ಟೆಲಿಕಾಂ ಸಚಿವಾಲಯ ಬುಧವಾರ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಘಟಕಗಳಿಗೆ ತಮ್ಮ ಖರೀದಿಯನ್ನು `ಮೇಡ್ ಇನ್ ಇಂಡಿಯಾ` ಉತ್ಪನ್ನಗಳಿಗೆ ಸೀಮಿತಗೊಳಿಸುವಂತೆ ನಿರ್ದೇಶಿಸಿದೆ.
ನವದೆಹಲಿ: ಭಾರತದ ಟೆಲಿಕಾಂ ಸಚಿವಾಲಯ ಬುಧವಾರ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಘಟಕಗಳಿಗೆ ತಮ್ಮ ಖರೀದಿಯನ್ನು 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಸೀಮಿತಗೊಳಿಸುವಂತೆ ನಿರ್ದೇಶಿಸಿದೆ.
ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಹಿಂಸಾತ್ಮಕ ಮುಖಾಮುಖಿಯಾಗಿದ್ದರಿಂದಾಗಿ 20 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಸರ್ಕಾರವು ಈ ಕ್ರಮವು ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ: Coronavirus: Lockdown ಹಿನ್ನೆಲೆ ಮೊಬೈಲ್ ಡೇಟಾಗೆ ಬೇಡಿಕೆ ಹೆಚ್ಚಳ, ಟೆಲಿಕಾಂ ಕಂಪನಿಗಳಿಂದ ವಿಶೇಷ ಪ್ಲಾನ್ ಬಿಡುಗಡೆ
ಸುದ್ದಿ ಮೂಲಗಳ ಪ್ರಕಾರ ಟೆಲಿಕಾಂ ಸಚಿವಾಲಯವು ಬಿಎಸ್ಎನ್ಎಲ್, ಎಂಟಿಎನ್ಎಲ್ ಮತ್ತು ಇತರ ಅಂಗಸಂಸ್ಥೆಗಳಿಗೆ ಅಪ್ ಗ್ರೇಡ್ ಗಳಿಗಾಗಿ ಚೀನಾದ ಉಪಕರಣಗಳನ್ನು ಬಳಸಕೂಡದು. ಇದಲ್ಲದೆ, "ಆತ್ಮನಿರ್ಭಾರ ಭಾರತ್" ಗಾಗಿ ಕೇಂದ್ರದ ಒತ್ತಡದ ಭಾಗವಾಗಿ ಭಾರತದಲ್ಲಿ ತಯಾರಾದ ಸರಕುಗಳ ಖರೀದಿಯನ್ನು ತಮ್ಮ ಆದ್ಯತೆಯನ್ನಾಗಿ ಮಾಡುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಸಚಿವಾಲಯ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿ ಸುದ್ದಿ; ಸಿಗಲಿದೆ ಅಮೆಜಾನ್ ಪ್ರೈಮ್ ಉಚಿತ ಸದಸ್ಯತ್ವ!
ಟೆಲಿಕಾಂ ಸಚಿವಾಲಯದ ಈ ನಿರ್ಧಾರವು ಅದರ ಅಂಗಸಂಸ್ಥೆಗಳ 4 ಜಿ ನವೀಕರಣ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರದ ಮೂಲಗಳ ಪ್ರಕಾರ, ಟೆಲಿಕಾಂ ಇಲಾಖೆ ತನ್ನ ಅಂಗ ಸಂಸ್ಥೆಗಳಿಗೆ 4 ಜಿ ಸೌಲಭ್ಯಗಳ ನವೀಕರಣಕ್ಕಾಗಿ ಟೆಂಡರ್‌ಗಳನ್ನು ಪುನಃ ಕಾರ್ಯ ಪ್ರವೃತ್ತಗೊಳಿಸಲು ಆದೇಶಿಸಿದೆ.
ಮೇ 31 ರಂದು ಭಾರತ್ ಸಂಚಾರ್ ನಿಗಮ್ (ಬಿಎಸ್ಎನ್ಎಲ್) ಈ ವರ್ಷದ ಮಾರ್ಚ್ ನಲ್ಲಿನ 8,697 ಕೋಟಿ 4 ಜಿ ಟೆಂಡರ್ ಅನ್ನು ರದ್ದುಗೊಳಿಸಿತು. ಸಾರ್ವಜನಿಕ ವಲಯದ ಖರೀದಿ ಮಾನದಂಡಗಳನ್ನು ಅನುಸರಿಸಲು ಸಾರ್ವಜನಿಕ ವಲಯ (ಪಿಎಸ್‌ಯು) ವಿಫಲವಾಗಿದೆ ಎಂಬ ಆರೋಪ ಕೂಡ ಇದರ ರದ್ದತಿಗೆ ಕಾರಣ ಎನ್ನಲಾಗಿದೆ.