ಹೈದರಾಬಾದ್: ತೆಲುಗಿನ ಖ್ಯಾತ ಹಾಸ್ಯ ನಟ ಅಲಿ ಸೋಮವಾರ ಯುವಜನ ಶ್ರಮಿಕ ರೈತು (ವೈಎಸ್ಆರ್) ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್. ಜಗನ್ ಮೋಹನ್ ರೆಡ್ಡಿಯ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆಗೊಂಡರು.


COMMERCIAL BREAK
SCROLL TO CONTINUE READING

ಆಂಧ್ರಪ್ರದೇಶದ ರಾಜಮಂಡ್ರಿಯವರಾದ ಅಲಿ, ವೈಎಸ್ಆರ್ ಕಾಂಗ್ರೆಸ್ಗೆ ಸೇರುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರಲ್ಲದೆ, ಈ ಬಗ್ಗೆ ಮೊದಲೇ ಇಬ್ಬರು ಮಾತುಕತೆ ನಡೆಸಿದ್ದಾರೆ.



2019 ರ ಲೋಕಸಭಾ ಚುನಾವಣೆಗಿಂತ ಮೊದಲು ಉನ್ನತ ರಾಜಕಾರಣಿಗಳು ಮತ್ತು ತೆಲುಗಿನ ಖ್ಯಾತ ಕಲಾವಿದರು ವೈಎಸ್ಆರ್ ಕಾಂಗ್ರೆಸ್​ಗೆ ಸೇರಿದ್ದಾರೆ.


ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮಾಜಿ ಶಾಸಕ ಮತ್ತು ಖ್ಯಾತ ನಟ ಜಯಸುಧ ತಮ್ಮ ಮಗ ನಿಹಾರ್ ಕಪೂರ್ ರೊಂದಿಗೆ ಕಳೆದ ವಾರ ವೈಎಸ್ಆರ್ ಕಾಂಗ್ರೆಸ್ ಸೇರಿದರು.


ಮಾಜಿ ಶಾಸಕರು ಚಳ್ಳಾ ರಾಮಕೃಷ್ಣ ರೆಡ್ಡಿ, ಮೊಡುಗುಲಾ ವೇಣುಗೋಪಾಲ ರೆಡ್ಡಿ, ಹಿರಿಯ ನಾಯಕ ದಾದಿ ವೀರಭದ್ರ ರಾವ್ ಮತ್ತು ಅವರ ಪುತ್ರ ದಾದಿ ರತ್ನಾಕರ್ ಟಿಡಿಪಿಯನ್ನು ತೊರೆದು ಜಗದೋಹನ್ ರೆಡ್ಡಿಯವರ ರಾಜಕೀಯ ಪಕ್ಷ ಸೇರಿದರು.


ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ, ಪಕ್ಷದ ಅಧ್ಯಕ್ಷರ ಮಾರ್ಗಸೂಚಿಗಳ ಪ್ರಕಾರ ನಾನು ಕೆಲಸ ಮಾಡುತ್ತೇನೆ. ನಾನು ವೈಎಸ್ಆರ್ಸಿಪಿಗೆ ಸೇರಿ ನಾನು ನನ್ನ ಮನೆಗೆ ಹಿಂದಿರುಗಿದಂತೆಯೇ ಬಾಸವಾಗುತ್ತಿದೆ, ನಿಜವಾಗಿಯೂ ಸಂತೋಷವಾಗುತ್ತಿದೆ" ಎಂದು ಚಲ್ಲಾ ರಾಮಕೃಷ್ಣ ರೆಡ್ಡಿ ಹೇಳಿದರು.


ಏತನ್ಮಧ್ಯೆ, ಮಾಜಿ ವೈಎಸ್ಆರ್ ಕಾಂಗ್ರೆಸ್ ಶಾಸಕ ಗೌರು ಚರಿತಾ ರೆಡ್ಡಿ ಮತ್ತು ಪತಿ ಗೌರು ವೆಂಕಟ ರೆಡ್ಡಿ ತೆಲುಗು ದೇಶಂ ಪಾರ್ಟಿಯಲ್ಲಿ ಶನಿವಾರ ಸೇರಿಕೊಂಡರು. ಚರಿತಾ ರೆಡ್ಡಿ ಕರ್ನೂಲ್ ಜಿಲ್ಲೆಯ ಪನ್ಯಾಮ್ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಪ್ರತಿನಿಧಿಯಾಗಿದ್ದರು.


ಲೋಕಸಭಾ ಚುನಾವಣೆ 2019 ಏಳು ಹಂತಗಳಲ್ಲಿ ಏಪ್ರಿಲ್ 11 ರಿಂದ ಮೇ 19 ರವರೆಗೆ ನಡೆಯಲಿದೆ ಮತ್ತು ಮೇ 23 ರಂದು ಮತಎಣಿಕೆ ನಡೆಯಲಿದೆ.


ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಏಪ್ರಿಲ್ 11 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.