ನವದೆಹಲಿ:  370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಘಟನೆಗಳು 54% ಕ್ಕೆ ಇಳಿದಿವೆ ಎಂದು ಗೃಹ ಸಚಿವಾಲಯ (ಎಂಎಚ್‌ಎ) ಬುಧವಾರ (ಸೆಪ್ಟೆಂಬರ್ 16,2020) ಹೇಳಿದೆ.


COMMERCIAL BREAK
SCROLL TO CONTINUE READING

2018 ರ ಆಗಸ್ಟ್ 5 ಮತ್ತು 2020 ರ ಸೆಪ್ಟೆಂಬರ್ 9 ರ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ 211 ಭಯೋತ್ಪಾದಕ ಸಂಬಂಧಿತ ಘಟನೆಗಳು ನಡೆದಿವೆ ಎಂದು ರಾಜ್ಯಸಭೆಯಲ್ಲಿನ ಗೃಹ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ. ಇದೆ ಅವಧಿಯ 2018 -2019 ರಲ್ಲಿ 455 ಪ್ರಕರಣಗಳು ವರದಿಯಾಗಿದ್ದವು.


ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಮಾಡ್ಯೂಲ್ ಬಂಧನ


'ಆಗಸ್ಟ್ 5, 2019 ರಿಂದ ಸೆಪ್ಟೆಂಬರ್ 9, 2020 ರ ಅವಧಿಯಲ್ಲಿ ದೇಶದ ಒಳನಾಡಿನಲ್ಲಿ ಯಾವುದೇ ದೊಡ್ಡ ಭಯೋತ್ಪಾದಕ ದಾಳಿ ನಡೆದಿಲ್ಲ" ಎಂದು ಸಚಿವರು ಹೇಳಿದರು.ವಿಶೇಷವೆಂದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಸ್ಟ್ 5, 2019 ರಂದು ಸಂಸತ್ತಿನಲ್ಲಿ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ್ದರು, ಇದರ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.


ರೆಡ್ಡಿ ಅವರ ಪ್ರಕಾರ, ಸರ್ಕಾರವು ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ ಮತ್ತು ಭದ್ರತಾ ಉಪಕರಣಗಳನ್ನು ಬಲಪಡಿಸುವುದು, ರಾಷ್ಟ್ರ ವಿರೋಧಿ ಅಂಶಗಳ ವಿರುದ್ಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ಎದುರಾದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಶೋಧ ಕಾರ್ಯಾಚರಣೆಗಳು ಮುಂತಾದ ವಿವಿಧ ಕ್ರಮಗಳನ್ನು ಕೈಗೊಂಡಿದೆ. 


"ಭಯೋತ್ಪಾದಕರಿಗೆ ಬೆಂಬಲ ನೀಡಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸುವ ವ್ಯಕ್ತಿಗಳ ಮೇಲೆ ಭದ್ರತಾ ಪಡೆಗಳು ನಿಗಾ ಇಡುತ್ತವೆ" ಎಂದು ರೆಡ್ಡಿ ಹೇಳಿದ್ದಾರೆ.