ನವದೆಹಲಿ:  ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತವಾರ್ ಚಂದ್ ಗೆಹ್ಲೋಟ್ ರನ್ನು ರಾಜ್ಯಸಭೆಯಲ್ಲಿನ ನಾಯಕರನ್ನಾಗಿ ನೇಮಕ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಜೂನ್ 4 ರಂದು ಗೆಹಲೋಟ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಎನ್ಡಿಎ ಮೊದಲ ಅವಧಿಗೆ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿಯೂ ಕೂಡ ಕ್ಯಾಬಿನೆಟ್ ಮಂತ್ರಿ ಖಾತೆಯನ್ನು ಹೊಂದಿದ್ದರು.ತವಾರ್ ಚಂದ್ ಗೆಹ್ಲೋಟ್ ಮಧ್ಯಪ್ರದೇಶದ ಶಜಾಪುರ ಮೀಸಲು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.


ಜೂನ್ 20 ರಿಂದ ಬಜೆಟ್ ಅಧಿವೇಶನಕ್ಕೆ ರಾಜ್ಯಸಭೆ ಸಭೆ ನಡೆಸಲಾಗಿದ್ದು, ಪ್ರಧಾನಿ ರಾಮನಾಥ್ ಕೋವಿಂದ್ ಅವರು ಸಂಸತ್ತಿನ ಜಂಟಿ ಸಭೆಯಲ್ಲಿ ಮಾತನಾಡಲಿದ್ದಾರೆ.ಅಧಿವೇಶನವು ಜುಲೈ 26 ರವರೆಗೆ ಮುಂದುವರಿಯುತ್ತದೆ. 27 ದಿನಗಳ ಕಾಲ ಅಧಿವೇಶನ ನಡೆಯಲಿದೆ.


ಜೂನ್ 17 ರಿಂದ ಲೋಕಸಭೆ ಅಧಿವೇಶನ ಪ್ರಾರಂಭವಾಗಲಿದೆ. ಹೊಸದಾಗಿ ಚುನಾಯಿತ ಸದಸ್ಯರು ಜೂನ್ 17 ಮತ್ತು 18 ರಂದು ಪ್ರಮಾಣ ವಚನ ಸ್ವೀಕರಿಸುತ್ತಾರೆ.ಸ್ಪೀಕರ್ ಚುನಾವಣೆ ಜೂನ್ 19 ರಂದು ನಡೆಯಲಿದೆ. ಜುಲೈ 5 ರಂದು ಕೇಂದ್ರ ಬಜೆಟ್ ಮಂಡಿಸಲಾಗುವುದು ಎಂದು ತಿಳಿದುಬಂದಿದೆ.