ನವದೆಹಲಿ: ಆಧಾರ್ ಸಂಖ್ಯೆಯನ್ನು ಖಾತೆಯೊಂದಿಗೆ ಸಂಪರ್ಕಿಸುವುದು ಅಗತ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಿಳಿಸಿದೆ. ಆಧಾರ್ ಅನ್ನು ಸಂಪರ್ಕಿಸುವ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಸಮಯದಲ್ಲೇ ಆರ್ ಬಿಐ ಈ ಆದೇಶ ಬಂದಿದೆ. ತೀರ್ಪು ಬಂದ ನಂತರ ಮಾತ್ರ ಸುಪ್ರೀಂ ಕೋರ್ಟ್ನ ತೀರ್ಪು ಜಾರಿಗೆ ಬರಲಿದೆ ಎಂದು ಬ್ಯಾಂಕಿಂಗ್ ರೆಗ್ಯುಲ್ಯಾರಿಟಿ ಸ್ಪಷ್ಟಪಡಿಸಿದೆ. ಆದರೆ ಸುಪ್ರೀಂ ಕೋರ್ಟ್ ನಿರ್ಧಾರವು ಬರುವವರೆಗೂ, ಈ ಮಾರ್ಗದರ್ಶಿ ಮಾತ್ರ ಅನುಸರಿಸಬೇಕಿದೆ.


COMMERCIAL BREAK
SCROLL TO CONTINUE READING

ಜೂನ್ 2017 ರಲ್ಲಿ PMLA ಕಾನೂನನ್ನು ತಿದ್ದುಪಡಿ 
ಮೂಲಗಳ ಪ್ರಕಾರ, ಸರ್ಕಾರದೊಂದಿಗಿನ ಮಾತುಕತೆಗಳ ಆಧಾರದ ಮೇಲೆ ಎಲ್ಲಾ ಬ್ಯಾಂಕ್ ಖಾತೆಗೈಗೆ ಆಧಾರ್ ಲಿಂಕ್ ಮಾಡುವುದನ್ನು ಕೇಂದ್ರ ಬ್ಯಾಂಕ್ ಕಡ್ಡಾಯ ಮಾಡಿದೆ. ಜೂನ್ 2017 ರಲ್ಲಿ ಕೇಂದ್ರ ಸರ್ಕಾರವು ಪಿಎಂಎಲ್ಎಎ ಕಾಯಿದೆಯನ್ನು ತಿದ್ದುಪಡಿ ಮಾಡಿದೆ ಎಂದು ಆರ್ ಬಿಐ ತಿಳಿಸಿದೆ. ಈ ತಿದ್ದುಪಡಿಯನ್ನು ಆಧರಿಸಿ, ಎಲ್ಲಾ ಖಾತೆಗಳಿಗೆ 'ಆಧಾರ್' ಅಗತ್ಯವಿದೆ. ಸುಪ್ರೀಂಕೋರ್ಟ್ ಎಲ್ಲಾ ಬ್ಯಾಂಕ್ ಖಾತೆಗಳು, ಆದಾಯ ತೆರಿಗೆ ರಿಟರ್ನ್ಸ್ ಮತ್ತು ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ಗಡುವನ್ನು ಮಾರ್ಚ್ 31ರವರೆಗೆ ವಿಸ್ತರಿಸಿತು.


ವಿವಿಧ ಯೋಜನೆಗಳನ್ನು ಆಧಾರ್ ಜೊತೆ ಲಿಂಕ್ ಮಾಡಲು ನೀಡಿದ್ದ ಮಾರ್ಚ್ 31 ರ ಗಡುವನ್ನು ಸಂವಿಧಾನಾತ್ಮಕ ಪೀಠದ ನಿರ್ಧಾರ ಬರುವವರೆಗೂ ಸುಪ್ರೀಂ ಕೋರ್ಟ್ ವಿಸ್ತರಿಸಿತು. ಈ ಮಾರ್ಗದರ್ಶಿ ಎಲ್ಲಾ ಬ್ಯಾಂಕ್ಗಳು ಮತ್ತು ಇತರ ಕಂಪನಿಗಳಿಗೆ ಅನ್ವಯಿಸುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಆದಾಗ್ಯೂ, ಈ ನಿಯಮಗಳು ಜಮ್ಮು, ಕಾಶ್ಮೀರ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಅನ್ವಯಿಸುವುದಿಲ್ಲ.


ಇದಕ್ಕೂ ಮೊದಲು ಸರ್ಕಾರವು ಕಲ್ಯಾಣ ಯೋಜನೆಗಳಿಗೆ ಆಧಾರ್ ಜೋಡಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಕಲ್ಯಾಣ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಜೂನ್ 30ರವರೆಗೆ ಗಡುವು ವಿಸ್ತರಿಸಲಾಗಿದೆ.  ಈ ಮೊದಲು ಆಧಾರ್- PAN ಲಿಂಕ್ ಗೆ ಸಹ ಮಾರ್ಚ್ 31 ರವರೆಗೆ ಗಡುವು ನೀಡಲಾಗಿತ್ತು. ಆದರೆ ಇದೀಗ ಇದರ ಗಡುವನ್ನೂ ವಿಸ್ತರಿಸಲಾಗಿದೆ.