Viral Video : ಮದುವೆ ಮಂಟಪದಲ್ಲಿ ತೂಕಡಿಸುತ್ತಿದ್ದ ವಧು ; ಹಿಂದೆ ಕುಳಿತಿದ್ದ ವ್ಯಕ್ತಿ ಮಾಡಿದ ಕೆಲಸ ನೋಡಿ
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ, ವಧುವರರು ಮದುವೆಯ ಶಾಸ್ತ್ರಕ್ಕಾಗಿ ಮಂಟಪದಲ್ಲಿ ಕುಳಿತಿದ್ದಾರೆ. ಹೀಗೆ ಶಾಸ್ತ್ರಕ್ಕೆ ಕುಳಿತ ವಧು ಅಲ್ಲೇ ನಿದ್ದೆಗೆ ಜಾರಿದ್ದಾಳೆ.
ನವದೆಹಲಿ : ಭಾರತೀಯ ವಿವಾಹ ವಿಧಿವಿಧಾನಗಳು ಹಲವು ದಿನಗಳವರೆಗೆ ನಡೆಯುತ್ತವೆ. ಪ್ರತಿಯೊಂದು ಶಾಸ್ತ್ರದಲ್ಲಿ ಭಾಗಿಯಾಗುವ ವಧುವರರು ಸುಸ್ತಾಗುವುದು ಸಹಜ. ಕೆಲವೊಮ್ಮೆ ಆಯಾಸ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ, ಶಾಸ್ತ್ರಗಳು ನಡೆಯುತ್ತಿರುವಾಗಲೇ ವಧು, ವರರು ತೂಕಡಿಸಲು ಆರಂಭಿಸುತ್ತಾರೆ. ಈ ರೀತಿ ಆದಾಗ ಈಗಂತೂ ವಿಡಿಯೋಗಳು ವೈರಲ್ (Viral video) ಆಗಲು ಶುರುವಾಗುತ್ತದೆ. ಇತ್ತೀಚೆಗೆ ಇಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ. ಸುಸ್ತಾಗಿದ್ದ ವಧು ಮದುವೆ ಮಂಟಪದಲ್ಲೇ ನಿದ್ದೆಗೆ ಜಾರಿದ್ದಾಳೆ. ಈ ಸಮಯವನ್ನು ಅಲ್ಲೇ ಹಿಂದೆ ಕುಳಿತಿದ್ದ ಹುಡುಗನೊಬ್ಬ ಹೇಗೆ ಬಳಸಿಕೊಂಡಿದ್ದಾನೆ ನೋಡಿ.
ಮಂಟಪದಲ್ಲೇ ತೂಕಡಿಸಲು ಆರಂಭಿಸಿದ ವಧು :
ಸಾಮಾಜಿಕ ಜಾಲತಾಣ (Socal media) ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ, ವಧುವರರು ಮದುವೆಯ (Marriage) ಶಾಸ್ತ್ರಕ್ಕಾಗಿ ಮಂಟಪದಲ್ಲಿ ಕುಳಿತಿದ್ದಾರೆ. ಹೀಗೆ ಶಾಸ್ತ್ರಕ್ಕೆ ಕುಳಿತ ವಧು ಅಲ್ಲೇ ನಿದ್ದೆಗೆ ಜಾರಿದ್ದಾಳೆ. ಅಲ್ಲೇ ಇದ್ದ ಮಹಿಳೆ ಎಚ್ಚರಗೊಳ್ಳುವಂತೆ ಕೈ ಸನ್ನೆ ಮಾಡಿ ಹೇಳುವುದನ್ನು ಕೂಡಾ ವಿಡಿಯೋದಲ್ಲಿ ಕಾಣಬಹುದು. ಆದರೆ ಗಾಢ ನಿದ್ದೆಯಲ್ಲಿರುವ ವಧುವಿಗೆ ಇದು ಗೊತ್ತಾಗುವುದಿಲ್ಲ. ಆದರೆ ಅಲ್ಲೇ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಮಾಡಿರುವ ಕೆಲಸ ಕೂಡ ವಿಡಿಯೋದಲ್ಲಿ (Video) ಸೆರೆಯಾಗಿದೆ.
ಇದನ್ನೂ ಓದಿ : Viral Video: ಆಟೋ ಗುದ್ದಿಸಿ ನ್ಯಾಯಾಧೀಶರ ಹತ್ಯೆ, ಉನ್ನತಮಟ್ಟದ ತನಿಖೆ ಆದೇಶ
ವಧುವಿಗೆ ಚುಂಬಿಸಿದ ಹುಡುಗ :
ಶಾಸ್ತ್ರಗಳು ನಡೆಯುತ್ತಿರುವ ಮಧ್ಯೆಯೇ ನಿದ್ದೆ ಹೋಗಿರುವ ವಧುವಿನ ಕೆನ್ನೆಗೆ ಆ ಹುಡುಗ ಕಿಸ್ ಕೊಟ್ಟಿದ್ದಾನೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ (Video viral) ಆಗುತ್ತಿದೆ. ಆದರೆ, ವಧುವಿನ ಅಷ್ಟು ಹತ್ತಿರ ಕುಳಿತಿರುವ ಆ ಹುಡುಗ ವಧುವಿನ ಸಹೋದರ ಇರಬಹುದೆಂದು ಊಹಿಸಲಾಗಿದೆ.
ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ನಿರಂಜನ್ ಮೊಹಾಪಾತ್ರ ಎಂಬ ವ್ಯಕ್ತಿ ಶೇರ್ ಮಾಡಿದ್ದಾರೆ. ಇಲ್ಲಿಯವರೆಗೆ 19 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಇದನ್ನೂ ಓದಿ : Viral Video: ಭೋಜಪುರಿ ಹಾಡಿಗೆ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿ ಧೂಳೆಬ್ಬಿಸಿದ ಪುಟ್ಟಪೋರಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ