ನವದೆಹಲಿ: ಭಾರತದಲ್ಲಿ ನಡೆಯುವ ಮದುವೆಗಳು ಆಗಾಗ ಚಿತ್ರವಿಚಿತ್ರ ಪ್ರಸಂಗಗಳಿಗೆ ಸಾಕ್ಷಿಯಾಗುತ್ತವೆ. ಮದುವೆ ಎಂದ ಮೇಲೆ ಅಲ್ಲಿ ಖುಷಿ-ದುಃಖ ಇದ್ದದ್ದೆ. ಆದರೆ ಕೆಲವೊಂದು ಮದುವೆಗಳಲ್ಲಿ ನಡೆಯುವ ಹಾಸ್ಯ ಪ್ರಸಂಗಗಳು ಎಂತವರನ್ನೂ ನಗೆಗಡಲಲ್ಲಿ ತೇಲಿಸುತ್ತವೆ. ಅದಕ್ಕೆ ನಿದರ್ಶನವೆಂಬಂತೆ ಅನೇಕ ಮದುವೆಗಳಲ್ಲಿ ನಡೆದಿರುವ ವಿಚಿತ್ರ ಸನ್ನಿವೇಶಗಳ ವಿಡಿಯೋಗಳನ್ನು ನಾವು ನೋಡಿರುತ್ತೇವೆ.
ತಮಾಷೆ, ಹಾಸ್ಯ, ಕೀಟಲೆ ಇಲ್ಲದೆ ಮದುವೆ ಸಮಾರಂಭ(Wedding Function) ಮುಕ್ತಾಯವಾಗುವುದೇ ಇಲ್ಲ. 11 ಗಂಟೆಗೆ ಊಟ ಬಡಿಸುವುದು, ಲೆಕ್ಕವಿಲ್ಲದಷ್ಟು ಅತಿಥಿಗಳು, ಅಬ್ಬರದ ಸಂಗೀತ, ಎಲ್ಲದಕ್ಕಿಂತ ಮುಖ್ಯವಾಗಿ ಮದುವೆಗೆ ಬಂದಿರುವ ಬಂಧುಗಳ ಬಗ್ಗೆ ವಿಶೇಷ ಕಾಳಜಿ ವಹಿಸದಿರುವುದು, ತಮ್ಮಿಷ್ಟದ ಅಡುಗೆ ಮಾಡದಿರುವುದು ಹೀಗೆ ಅನೇಕ ಕಾರಣಗಳಿಗೆ ಮದುವೆ ಮನೆಯಲ್ಲಿ ಗಲಾಟೆ, ಡ್ರಾಮಾ ನಡೆಯುತ್ತಿರುತ್ತವೆ. ಅದೇ ರೀತಿಯ ಮದುವೆ ವಿಡಿಯೋವೊಂದು ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Reliance Jio: Buy 1 Get 1 ಉಚಿತ ಕೊಡುಗೆ ಪರಿಚಿಯಿಸಿದ ಜಿಯೋ, ಸಿಗುತ್ತೆ ಡಬಲ್ ಲಾಭ
ಈ ವಿಡಿಯೋದಲ್ಲಿ ವಧು-ವರರು ಮದುವೆ ಮಂಟಪದಲ್ಲಿ ಕುಳಿತಿರುತ್ತಾರೆ. ಆಗ ಶುಭಾಶಯ ತಿಳಿಸಲು ವೇದಿಕೆಗೆ ಆಗಮಿಸಿದ ವರನ ಸ್ನೇಹಿತರು ವಧುವಿಗೆ ಪ್ಯಾಕ್ ಮಾಡಿದ್ದ ಗಿಫ್ಟ್ ನೀಡಿದ್ದಾರೆ. ಕೂಡಲೇ ಅದನ್ನು ವಧು ಬಿಚ್ಚಿ ನೋಡಿದ್ದಾಳೆ. ಅದರಲ್ಲಿ ಮಗುವಿನ ಫೀಡಿಂಗ್ ಬಾಟಲ್ ಇರುವುದನ್ನು ಕಂಡು ಮುಖ ಸಿಂಡರಿಸಿಕೊಂಡಿದ್ದಾಳೆ. ಕೋಪದಿಂದ ವರನ ಸ್ನೇಹಿತರನ್ನು ದುರುಗುಟ್ಟು ನೋಡಿದ ವಧು ಅದನ್ನು ಕಳಕ್ಕೆ ಎಸೆದಿದ್ದಾಳೆ. ಮತ್ತೆ ಯಾರೋ ಅದನ್ನು ವಧುವಿನ ಮೇಲೆ ಇಟ್ಟಿದ್ದಾರೆ. ಆದರೆ ವಧು ಅದನ್ನು ಕಣ್ಣೆತ್ತಿಯೂ ನೋಡಲಿಲ್ಲ. ಬಳಿಕ ಯಾರೋ ಅದನ್ನು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Debit or Credit Card ಇಲ್ಲದೆಯೇ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಇಲ್ಲಿದೆ ಸುಲಭ ವಿಧಾನ
ಚೇಷ್ಟೆ ಸ್ವಭಾವದ ವರನ ಸ್ನೇಹಿತರು ವಿಶೇಷ ರೀತಿಯಲ್ಲಿ ಗಿಫ್ಟ್ ನೀಡಿ ತಮಾಷೆ ಮಾಡೋಣವೆಂದು ಹೀಗೆ ಮಾಡಿದ್ದಾರೆ. ಆದರೆ ಗಿಫ್ಟ್ ನೋಡಿದ ವಧುವಿಗೆ ಕಡುಕೋಪ ಬಂದಿದೆ. ಬಂಟಿ ಠಾಕೂರ್ ಎಂಬುವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಅದಕ್ಕೆ ‘ಭಾಬಿ ಕೆ ಸಾಥ್ ಮಸ್ತಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್(Viral Video) ಆಗುತ್ತಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಶೇರ್ ಮಾಡಿಕೊಂಡಿದ್ದು, ಅನೇಕರು ‘ಈ ರೀತಿ ತಮಾಷೆ ಮಾಡಿ ಬೇರೊಬ್ಬರ ಮನಸ್ಸನ್ನು ನೋಯಿಸಬೇಡಿ’ ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ