ನವದೆಹಲಿ: ಸಿಬಿಎಸ್ಇ 11 ಮತ್ತು 12 ನೇ ತರಗತಿಗಳ ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಪಠ್ಯಕ್ರಮದಿಂದ ಅಲಿಪ್ತ ಚಳುವಳಿ, ಶೀತಲ ಸಮರದ ಯುಗ, ಆಫ್ರೋ-ಏಷ್ಯನ್ ಪ್ರಾಂತ್ಯಗಳಲ್ಲಿ ಇಸ್ಲಾಮಿಕ್ ಸಾಮ್ರಾಜ್ಯಗಳ ಉದಯ, ಮೊಘಲ್ ನ್ಯಾಯಾಲಯಗಳ ವೃತ್ತಾಂತ ಮತ್ತು ಕೈಗಾರಿಕಾ ಕ್ರಾಂತಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಕೈಬಿಟ್ಟಿದೆ.


COMMERCIAL BREAK
SCROLL TO CONTINUE READING

ಅದೇ ರೀತಿಯಾಗಿ 10ನೇ ತರಗತಿಯ ಪಠ್ಯಕ್ರಮದಲ್ಲಿ, ಆಹಾರ ಭದ್ರತೆ ಎಂಬ ಅಧ್ಯಾಯದಿಂದ ಕೃಷಿಯ ಮೇಲೆ ಜಾಗತೀಕರಣದ ಪರಿಣಾಮ ಮತ್ತು ಫೈಜ್ ಅಹ್ಮದ್ ಫೈಜ್ ಉರ್ದು ಕವನಗಳ ಅನುವಾದಿತ ಆಯ್ದ ಭಾಗಗಳನ್ನು ಸಹ ಕೈ ಬಿಡಲಾಗಿದೆ.ಇದರ ಜೊತೆಗೆ 'ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ' ಅಧ್ಯಾಯಗಳನ್ನು ಕೂಡ ತೆಗೆದುಹಾಕಲಾಗಿದೆ.ಈಗ ಏಕಾಏಕಿ ಸಿಬಿಎಸ್ಇ ಈ ಅಧ್ಯಾಯಗಳನ್ನು ಕೈಬಿಟ್ಟಿರುವುದಕ್ಕೆ ಬಹುತೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: PM Narendra Modi : ಪ್ರಧಾನಿ ಮೋದಿಗೆ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ'


ಈ ವಿಚಾರವಾಗಿ ಅಧಿಕಾರಿಗಳನ್ನು ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಅವರು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಶಿಫಾರಸುಗಳಿಗೆ ಅನುಗುಣವಾಗಿ ಈ ಅಧ್ಯಾಯಗಳನ್ನು ಕೈಬಿಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. "ಕಂಡಿಡಿ ನೋಡನ"ದಲ್ಲಿದೆಯಂತೆ ವಿಭಿನ್ನ ಕ್ಲೈಮ್ಯಾಕ್ಸ್...ಏನದು..!?


ಇದಕ್ಕೂ ಮೊದಲು ಸಿಬಿಎಸ್ಇ 2020 ರಲ್ಲಿ 11ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಲ್ಲಿ ಒಕ್ಕೂಟ ವ್ಯವ್ಯಸ್ಥೆ , ಪೌರತ್ವ, ರಾಷ್ಟ್ರೀಯತೆ ಮತ್ತು ಜಾತ್ಯತೀತತೆಯ ಅಧ್ಯಾಯಗಳನ್ನು ತೆಗೆದುಹಾಕಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.