ನವದೆಹಲಿ: COVID-19 ಲಸಿಕೆಯನ್ನು ಮಹಾರಾಷ್ಟ್ರದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ. ಕೋವಿನ್ ಆ್ಯಪ್‌ನ ತಾಂತ್ರಿಕ ಸಮಸ್ಯೆಗಳಿಂದಾಗಿ ಜನವರಿ 18 (ಸೋಮವಾರ) ವರೆಗೆ ಇಡೀ ರಾಜ್ಯದಾದ್ಯಂತ ಈ ಕ್ರಮ ಕೈಗೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಅಪ್ಲಿಕೇಶನ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ, ಅಧಿಕಾರಿಗಳ ಪ್ರಕಾರ ಶನಿವಾರ 4,000 ಗುರಿಯನ್ನು ಪೂರೈಸಲು ಸಾಧ್ಯವಾಗಲಿಲ್ಲ. COVID-19 ವ್ಯಾಕ್ಸಿನೇಷನ್ (Covid 19 Vaccination ) ಅನ್ನು ಆಫ್‌ಲೈನ್ ಮಾಧ್ಯಮದ ಮೂಲಕ ಮಾಡಲಾಗುವುದಿಲ್ಲ.


ಇದನ್ನೂ ಓದಿ: Coronavirus Vaccine Guidelines: ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕೇ? ಮೊದ್ಲು ಈ ಕೆಲ್ಸಾ ಮಾಡಿ ಎಂದ ಕೇಂದ್ರ


ಅಧಿಕೃತ ಹೇಳಿಕೆಯ ಪ್ರಕಾರ, ವ್ಯಾಕ್ಸಿನೇಷನ್ ಅನ್ನು ಜನವರಿ 17-18ರಂದು ಎರಡು ದಿನಗಳವರೆಗೆ ಮುಂದೂಡಲಾಗಿದೆ. "ಇಂದು (ಜನವರಿ 16, 2021) COVID-19 ವ್ಯಾಕ್ಸಿನೇಷನ್ ಅಭಿಯಾನವನ್ನು ಅನುಷ್ಠಾನಗೊಳಿಸುವಾಗ, ಕೋವಿನ್ ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ತೊಂದರೆಗಳು ಕಂಡುಬರುತ್ತಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರದಿಂದ ಪ್ರಯತ್ನಗಳು ನಡೆಯುತ್ತಿವೆ' ಎಂದು ಪ್ರಕಟನೆ ತಿಳಿಸಿದೆ.


ಇದನ್ನೂ ಓದಿ: ಕೊರೊನಾ ಲಸಿಕೆಯಿಂದ ತೊಂದರೆ ಆದಲ್ಲಿ ಪರಿಹಾರ ನೀಡುವುದಾಗಿ ಹೇಳಿದ ಈ ಕಂಪನಿ..!


"ಲಸಿಕೆ ಹಾಕುವಾಗ ಸಂಪೂರ್ಣ ಡಿಜಿಟಲ್ ನೋಂದಣಿ ಕಡ್ಡಾಯವಾಗಿದೆ. ತಾಂತ್ರಿಕ ತೊಂದರೆಯಿಂದಾಗಿ ಸರ್ಕಾರವು ಇಂದು ಆಫ್‌ಲೈನ್ ನೋಂದಣಿಗೆ ಅನುಮತಿ ನೀಡಿತ್ತು. ಆದಾಗ್ಯೂ, ಇನ್ನೂ ಎಲ್ಲಾ ನಮೂದುಗಳನ್ನು ಆ್ಯಪ್ ಮೂಲಕ ಮಾಡಬೇಕೆಂದು ಸರ್ಕಾರ ನಿರ್ದೇಶಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು, COVID-19 ವ್ಯಾಕ್ಸಿನೇಷನ್ ಕಾರ್ಯವನ್ನು ಮುಂಬೈನಲ್ಲಿ ಎರಡು ದಿನಗಳವರೆಗೆ ಮುಂದೂಡಲಾಗಿದೆ.ಕೋವಿನ್ ಅಪ್ಲಿಕೇಶನ್ ಸರಿಯಾದ ನಂತರ ತಕ್ಷಣ ಲಸಿಕೆ ಕಾರ್ಯ ಪುನರಾರಂಭಗೊಳ್ಳುತ್ತದೆ.


ಇದನ್ನೂ ಓದಿ: Controversy On Vaccine: 'ಲಸಿಕೆಯಲ್ಲಿ ಹಸುವಿನ ರಕ್ತ, ಭಾರತದಲ್ಲಿ ಬಳಕೆ ಬೇಡ '


ಈ ಮೊದಲು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದು, ಮೊದಲ ದಿನ ಕೊವಿಡ್ -19 ಲಸಿಕೆ ಸ್ವೀಕರಿಸಲು ನಿರ್ಧರಿಸಿದ್ದ ಆರೋಗ್ಯ ಕಾರ್ಯಕರ್ತರಲ್ಲಿ ಶೇಕಡಾ 65 ರಷ್ಟು ಮಂದಿಗೆ ಮಹಾರಾಷ್ಟ್ರದಲ್ಲಿ ಶನಿವಾರ ಚುಚ್ಚುಮದ್ದನ್ನು ನೀಡಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.