Mocha Cyclone Update: ಬಂಗಾಳ ಕೊಲ್ಲಿಯಲ್ಲಿ  ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿ ಭಾಗದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಹೀಗಾಗಿ ಭೀಕರ ಚಂಡಮಾರುತದ ಸಾಧ್ಯತೆಯ ಹಿನ್ನೆಲೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಏತನ್ಮಧ್ಯೆ, ಒತ್ತಡದ ಪ್ರದೇಶವು ಸೈಕ್ಲೋನಿಕ್ ಚಂಡಮಾರುತದ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ವಾಸ್ತವದಲ್ಲಿ, ಬಂಗಾಳ ಕೊಲ್ಲಿಯಲ್ಲಿನ ಒತ್ತಡದ ಪ್ರದೇಶವು ಆಳವಾದ ಒತ್ತಡದ ಪ್ರದೇಶವಾಗಿ ಮಾರ್ಪಟ್ಟಿದೆ. ಆದರೆ, ಬುಧವಾರ ಅದು ತನ್ನ ಸ್ಥಳದಲ್ಲಿಯೇ ಉಳಿದುಕೊಂಡಿತ್ತು. ಈ ಒತ್ತಡದ ಪ್ರದೇಶವು ಗಂಟೆಗೆ 5 ಕಿಲೋಮೀಟರ್ ವೇಗದಲ್ಲಿ ಪಶ್ಚಿಮ-ವಾಯುವ್ಯಕ್ಕೆ ಚಲುಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.


COMMERCIAL BREAK
SCROLL TO CONTINUE READING

ಒತ್ತಡದ ಪ್ರದೇಶವು ಪೋರ್ಟ್ ಬ್ಲೇರ್‌ನ ಪಶ್ಚಿಮ-ನೈಋತ್ಯಕ್ಕೆ ಸುಮಾರು 540 ಕಿಮೀ ಕೇಂದ್ರೀಕೃತವಾಗಿದೆ ಎಂದು ಇಲಾಖೆ ಹೇಳಿದೆ. ಇದು ಸ್ವಲ್ಪ ಸಮಯದವರೆಗೆ ವಾಯುವ್ಯ ದಿಕ್ಕಿಗೆ ಚಲಿಸಿ ನಂತರ ಉತ್ತರ-ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಅದರ ನಂತರ ಅದು ಕ್ರಮೇಣ ಅದೇ ಪ್ರದೇಶದಲ್ಲಿ ಇಂದು ಸಂಜೆಯ ವೇಳೆಗೆ ಸೈಕ್ಲೋನಿಕ್ ಚಂಡಮಾರುತದ ರೂಪವನ್ನು ಪಡೆಯುವ ಸಾಧ್ಯತೆ ಇದೆ.


ಹವಾಮಾನ ಇಲಾಖೆ ಹೊರಡಿಸಿದ ಬುಲೆಟಿನ್ ಪ್ರಕಾರ, ಈ ಪರಿಚಲನೆ ವ್ಯವಸ್ಥೆಯು ಉತ್ತರ-ವಾಯುವ್ಯಕ್ಕೆ ಚಲಿಸುತ್ತಿದೆ ಮತ್ತು ಮೇ 11 ರಂದು ದೊಡ್ಡ ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗಬಹುದು. ಇದರ ನಂತರ, ಮೇ 12 ರಂದು, ಅದು ಆಗ್ನೇಯ ಮತ್ತು ಮಧ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತವಾಗಿ ಬದಲಾಗಬಹುದು ಮತ್ತು ಹಾನಿ ಉಂಟುಮಾಡಬಹುದು. ಇದಾದ ನಂತರ ಮೇ 13ರ ವರೆಗೆ ಕ್ಷೀಣಿಸಲು ಆರಂಭಿಸಿ ಕ್ರಮೇಣ ಶಾಂತವಾಗಲಿದೆ ಎನ್ನಲಾಗಿದೆ.


ಇದನ್ನೂ ಓದಿ-Oil Price : ಈ ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ, ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ!


ಮೀನುಗಾರರು ಮತ್ತು ಸಣ್ಣ ಹಡಗು, ದೋಣಿ ಮತ್ತು ಮೀನುಗಾರಿಕಾ ದೋಣಿ ನಿರ್ವಾಹಕರಿಗೆ ಇಲಾಖೆ ವತಿಯಿಂದ ಎಚ್ಚರಿಕೆ ನೀಡಲಾಗಿದೆ. ಇದರೊಂದಿಗೆ, ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಅದರ ಪಕ್ಕದಲ್ಲಿರುವ ಮಧ್ಯ ಬಂಗಾಳ ಕೊಲ್ಲಿಯಿಂದ ದೂರವಿರಲು ಅವರಿಗೆ ಸೂಚಿಸಲಾಗಿದೆ. ಪೂರ್ವ-ಸೆಂಟ್ರಲ್ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದಲ್ಲಿರುವ ಜನರಿಗೆ ಹಗಲಿನಲ್ಲಿಯೇ ಸಮುದ್ರದಿಂದ ಹಿಂತಿರುಗುವಂತೆ ಹವಾಮಾನ ಇಲಾಖೆ ಸೂಚನೆಗಳನ್ನು ನೀಡಿದೆ.


ಇದನ್ನೂ ಓದಿ-Savings Tips: ಏಪ್ರಿಲ್ ತಿಂಗಳಿನಲ್ಲಿ ಆಪ್ರೇಸಲ್ ಸಿಕ್ಕಿದೆಯಾ? ಈ ರೀತಿ ಉಳಿತಾಯ ಮಾಡಿ!

ಇದಕ್ಕೆ ಸಂಬಂಧಿಸಿದಂತೆ ಹವಾಮಾನ ಇಲಾಖೆ ಬುಲೆಟಿನ್ ಬಿಡುಗಡೆ ಮಾಡಿದೆ, 'ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಪಕ್ಕದಲ್ಲಿರುವ ಕಡಿಮೆ ಒತ್ತಡದ ಪ್ರದೇಶವು ಇಂದು ಸಂಜೆಯ ವೇಳೆಗೆ ಮತ್ತು ನಂತರ ಮೇ 10 ರಂದು ದಕ್ಷಿಣದ ಮೇಲೆ ವಾಯುಭಾರ ಕುಸಿತಕ್ಕೆ ತಿರುಗುವ ಸಾಧ್ಯತೆಯಿದೆ- ಇದು ರೂಪವನ್ನು ಬದಲಾಯಿಸಬಹುದು. ಪೂರ್ವ ಬಂಗಾಳ ಕೊಲ್ಲಿ ಮತ್ತು ಪೂರ್ವ-ಮಧ್ಯ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಅಕ್ಕಪಕ್ಕದಲ್ಲಿರುವ ಪ್ರದೇಶಗಳಲ್ಲಿ ಇದು ಚಂದಮಾರುತದ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.