Kerala  : ಏಪ್ರಿಲ್ 26ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಶೇ.71.27ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿರುವ ನವೀಕರಿಸಿದ ಅಂಕಿಅಂಶಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಮತದಾನದ ದಿನದಂದು ಶೇ.71.27ರಷ್ಟು ಮತದಾನವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ತಿಳಿಸಿದ್ದಾರೆ.


ಇದನ್ನು ಓದಿ : ಪ್ರಜ್ವಲ್ ಪ್ರಕರಣವನ್ನು 'ಸಾವಿರಾರು ನಿರ್ಭಯಾ’ ಗಳಿಗೆ ಹೋಲಿಸಿ, ಅದಕ್ಕೆ ಮೋದಿ, ಬಿಜೆಪಿ ಹೊಣೆ ಮಾಡುವುದು ಹಾಸ್ಯಾಸ್ಪದ: ನಟ ಚೇತನ್ 


ಏಪ್ರಿಲ್ 26 ರಂದು ರಾಜ್ಯದ ಒಟ್ಟು 27,749,158 ಮತದಾರರಲ್ಲಿ 19,777,478 ಮಂದಿ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತ ಚಲಾಯಿಸಿದ್ದಾರೆ. ಈ ಪೈಕಿ 9,475,090 ಪುರುಷ ಮತದಾರರು, 10, 302, 238 ಮಹಿಳಾ ಮತದಾರರು, 150 ತೃತೀಯಲಿಂಗಿ ಮತದಾರರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಡಕರ ಕ್ಷೇತ್ರದಲ್ಲಿ ಶೇ.78.41ರಷ್ಟು ಮತದಾನವಾಗಿದ್ದು, 1,114,950 ಮತದಾರರು ಮತದಾನ ಮಾಡಿದ್ದಾರೆ. ಇತರ ಕ್ಷೇತ್ರಗಳಲ್ಲಿ ನವೀಕರಿಸಿದ ಮತದಾನದ ಶೇಕಡಾವಾರು: ತಿರುವನಂತಪುರಂ (66.47), ಅಟ್ಟಿಂಗಲ್ (69.48), ಕೊಲ್ಲಂ (68.15), ಮಾವೆಲಿಕ್ಕಾರ (65.95), ಆಲಪ್ಪುಳ (75.05), ಕೊಟ್ಟಾಯಂ (65.61), ಇಡುಕ್ಕಿ (66.55), ಎರನಾಕುಲಂ (68.29), ಚಾಲಕುಡಿ (71.94), ತ್ರಿಶೂರ್ (72.90), ಪಾಲಕ್ಕಾಡ್ (73.57), ಅಲತ್ತೂರ್ (73.42), ಪೊನ್ನಾನಿ (69.34), ಮಲಪ್ಪುರಂ (72.95), ಕೋಝಿಕ್ಕೋಡ್ (75.52), ವಯನಾಡ್ (73.57), ವಡಕರ (78.41), ಕಣ್ಣೂರು (77.21) ಮತ್ತು ಕಾಸರಗೋಡು (76.04) ಮತ್ತು  ಪತ್ತನಂತಿಟ್ಟ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇಕಡಾ 63.37 ರಷ್ಟಿದ್ದು, 1,429,700 ಮತದಾರರಲ್ಲಿ 906,051 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಕೌಲ್ ಹೇಳಿದರು.


ಇದನ್ನು ಓದಿ : 7 ವರ್ಷದ  ಸಂಭ್ರಮದಲ್ಲಿ ಬಾಹುಬಲಿ 2, ಈ ಸಿನಿಮಾ ನಿರ್ಮಿಸಿದ ದಾಖಲೆಯ ಮೈಲಿಗಲ್ಲಿನ ಚುಟುಕು ಹೀಗಿದೆ 


ಸೇವಾ ಮತದಾರರ ವಿಭಾಗದಲ್ಲಿ 57,849 ಸೇನಾ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದು, ಏಪ್ರಿಲ್ 27ರ ವೇಳೆಗೆ 8,277 ಮತಗಳನ್ನು ಕಳುಹಿಸಲಾಗಿದೆ. ಮತ ಎಣಿಕೆ ಆರಂಭವಾಗುವವರೆಗೆ ಸೇವಾ ಮತಗಳನ್ನು ಸ್ವೀಕರಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.