ದೆಹಲಿ/ಬೆಂಗಳೂರು : ಕರೋನಾ ವಿರುದ್ಧದ ಮಹಾಸಮರ ಆರಂಭವಾಗಿದೆ. ದೇಶದಾದ್ಯಂತ ಲಸಿಕೆ ಅಭಿಯಾನ  (Vaccine roll-out) ನಡೆಯುತ್ತಿದೆ. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಕರೋನಾ ಯೋಧರನ್ನು ತಲುಪಿವೆ. ಲಕ್ಷಾಂತರ ಲಸಿಕೆಗಳು ಯೋಜನಾಬದ್ದವಾಗಿ ಲಸಿಕೆ ಕೇಂದ್ರಗಳನ್ನು ತಲುಪಿವೆ.  ಪ್ರಧಾನಿ ಮೋದಿ  (Narendra Modi ) ಲಸಿಕೆ ಅಭಿಯಾನಕ್ಕೆ ಚಾಲನೆ ಕೊಡುತ್ತಿದ್ದಂತೆ, ಪರದೆಯ ಮೇಲೆ ಮೂಡಿ ಬಂತು ಒಂದು ಸುಂದರ ಸಂದೇಶ.  ಅದು ‘ಸರ್ವೆ ಭವಂತು ಸುಖಿನಃ ಸರ್ವೆ ಸಂತು ನಿರಾಮಯಃ’. (sarve bhavantu sukhinah, sarve santu niramaya) ಈ ಸಂಸ್ಕೃತ ಶ್ಲೋಕ  ಮತ್ತು ಸಂದೇಶ ಸಾಕಷ್ಟು ವೈರಲ್ ಆಗುತ್ತಿವೆ. 


COMMERCIAL BREAK
SCROLL TO CONTINUE READING

ಯಾಕೆ ಬಂತು ಈ ಸಂದೇಶ..?
ಲಸಿಕೆ ಅಭಿಯಾನ ಆರಂಭಕ್ಕೆ ಮುನ್ನ ಅಷ್ಟೇ ಅಲ್ಲ.  ಲಸಿಕೆಗಳ (Vaccine) ಬಾಕ್ಸ್ ಮೇಲೂ ಒಂದು ಸಂದೇಶ ರವಾನಿಸಲಾಗಿದೆ. ಲಸಿಕೆ ರವಾನೆಯಾದ ಎಲ್ಲಾ ಬಾಕ್ಸ್ ಗಳ ಮೇಲೆ ‘ಸರ್ವೆ ಸಂತು ನಿರಾಮಯಃ’ ಎಂದು ಬರೆಯಲಾಗಿದೆ.  ಮೋದಿ (Modi) ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ‘ಸರ್ವೆ ಭವಂತು ಸುಖಿನಃ ಸರ್ವೆ ಸಂತು ನಿರಾಮಯಃ’ ಎಂದು ಹೇಳಲಾಗಿದೆ.   ಲಸಿಕೆ ಅಭಿಯಾನ (Vaccination) ಮತ್ತು  ಲಸಿಕೆ ಬಾಕ್ಸ್ ಮೇಲೆ ಯಾಕೆ ಈ ಸಂದೇಶ ಬರೆಯಲಾಗಿದೆ..? ಬರೆದ  ಉದ್ದೇಶ ಏನು..? ಅದರಅರ್ಥ ಏನು..?


ಕೊರೊನಾ ಲಸಿಕೆಯಿಂದ ತೊಂದರೆ ಆದಲ್ಲಿ ಪರಿಹಾರ ನೀಡುವುದಾಗಿ ಹೇಳಿದ ಈ ಕಂಪನಿ..!


ಕರೋನಾ ಲಸಿಕೆಯೊಂದಿಗೆ ಸಂದೇಶ:
ಕರೋನಾ ಲಸಿಕಾ ತಯಾರಿಸುವಾಗ ಯಾವ  ಮುನ್ನೆಚ್ಚರಿಕೆ, ಆಶಾವಾದ  ಇಟ್ಟುಕೊಳ್ಳಲಾಗಿತ್ತೋ, ಅದೇ ಆಶಾವಾದ, ಹಾರೈಕೆಯನ್ನೇ ಲಸಿಕೆ ಅಭಿಯಾನದ ವೇಳೆಯೂ ರವಾನಿಸಲಾಗಿದೆ. ಅದೊಂದು ಸುಂದರ ಹಾರೈಕೆ.  ಆ ಹಾರೈಕೆಯೇ ‘ಸರ್ವೆ ಭವಂತು ಸುಖಿನಃ ಸರ್ವೆ ಸಂತು ನಿರಾಮಯಃ’ ಎಂಬುದು.  ಸಂಸ್ಕೃತದ ಈ ಅರ್ಥಪೂರ್ಣ ಶ್ಲೋಕದ ಅರ್ಥ ‘’ ಎಲ್ಲರಿಗೂ ಸಂತೋಷ ಸಿಗಲಿ, ಎಲ್ಲರೂ ರೋಗಮುಕ್ತರಾಗಲಿ’’ (All be happy, All be free of illness)ಎಂಬುದು. ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್  ಕರೋನಾ (Coronavirus) ನಿರ್ಮೂಲನೆ ಮಾಡಲಿ ಎಂಬ ಸುಂದರ ಆಶಯದೊಂದಿಗೆ ಅರ್ಥಪೂರ್ಣ ಸಂದೇಶವಿರುವ ಶ್ಲೋಕವನ್ನು ಲಸಿಕೆ ಬಾಕ್ಸ್  ಮತ್ತು ಘೋಷವಾಕ್ಯಗಳಲ್ಲಿ ಬರೆಯಲಾಗಿದೆ. 


ಮೂಲ ಶ್ಲೋಕದಲ್ಲಿ ಏನಿದೆ..?
‘ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್ ಓಂ ಶಾಂತಿಃ ಶಾಂತಿಃ ಶಾಂತಿಃ’ ಇದು ಮೂಲ ಶ್ಲೋಕ. ಇದರ ಒಂದು ಅರ್ಥಪೂರ್ಣ ಸಾಲು ಕರೋನಾ ಲಸಿಕೆ ಬಾಕ್ಸ್ ಮತ್ತು ವಿಡಿಯೋ ಪ್ರೋಮೋದಲ್ಲಿದೆ.  ಎಲ್ಲರಿಗೂ ಸುಖಭಾಗ್ಯ ಸಿಗಲಿ. ಎಲ್ಲರಿಗೂ ಒಳ್ಳೆಯದಾಗಲಿ, ಎಲ್ಲರೂ ದುಃಖದಿಂದ ಮುಕ್ತರಾಗಲಿ. ಎಲ್ಲರೂ ರೋಗ ರಹಿತರಾಗಲಿ ಎಂಬುದೇ ಈ ಶ್ಲೋಕದ ಅರ್ಥ ಮತ್ತು ಆಶಯ. 


ಇದನ್ನೂ ಓದಿ Corona Vaccine: ಗರ್ಭವತಿ ಹಾಗೂ ಹಾಲುಣಿಸುವ ತಾಯಂದಿರರಿಗೆ ಲಸಿಕೆ ಬೇಡ: ಸರ್ಕಾರ


ಕರೋನಾ ಲಸಿಕೆ (COVID Vaccine) ತಯಾರಿಸಿದ ನಮ್ಮ ಮೆಡಿಕಲ್ ವಿಜ್ಞಾನಿಗಳ ಹೃದಯ ಎಷ್ಟೊಂದು ವಿಶಾಲವಾಗಿದೆಯಲ್ವಾ..? ಪ್ರಯೋಗಶಾಲೆಗಳಲ್ಲೇ ಕರೋನಾಕಾಲವನ್ನು ಕಳೆದ ಲಸಿಕಾ ತಜ್ಞರು ಲಸಿಕೆ ಜೊತೆ ಒಂದೊಳ್ಳೇ ಸಂದೇಶವನ್ನೂ ಮನುಕುಲಕ್ಕೆ ರವಾನಿಸಿದ್ದಾರೆ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.