ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಮಾರ್ಚ್ 26 ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಭಾರತ್ ಬಂದ್ (Bharat Bandh) ಯೋಜನೆಗಾಗಿ ಕಾರ್ಮಿಕ ಸಂಘಗಳು ಮತ್ತು ಇತರ ಸಾಮೂಹಿಕ ಸಂಘಟನೆಗಳೊಂದಿಗೆ ಜಂಟಿ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ರೈತ ಸಂಘಗಳ ಒಕ್ಕೂಟವಾದ ಸಂಯುಕ್ತಾ ಕಿಸಾನ್ ಮೋರ್ಚಾ ಹೇಳಿದೆ.


ಮಾರ್ಚ್ 26 ರಂದು ದೆಹಲಿ ಗಡಿಯಲ್ಲಿ ನಾಲ್ಕು ತಿಂಗಳ ಪ್ರತಿಭಟನೆ ಪೂರ್ಣಗೊಂಡಿದೆ, ಇದು ಜನವರಿ 26 ರಂದು ಪ್ರಾರಂಭವಾಯಿತು. ಜನವರಿ 26 ರಂದು, ಪ್ರತಿಭಟನೆ ಎರಡು ತಿಂಗಳು ಪೂರ್ಣಗೊಳ್ಳುತ್ತಿದ್ದಂತೆ, ರೈತರು ಟ್ರಾಕ್ಟರ್ ರ್ಯಾಲಿಯನ್ನು ನಡೆಸಿದ್ದರು.


ಇದನ್ನೂ ಓದಿ  : ಎಲ್ಲ ಜನರಿಗೆ ಉಚಿತ ಲಸಿಕೆ ಕೋರಿ ಮಮತಾ ದೀದಿಯಿಂದ ಪ್ರಧಾನಿ ಮೋದಿ ಪತ್ರ


ಈಗ ಕಾರ್ಮಿಕ ಸಂಘಗಳು ಮತ್ತು ಇತರ ಸಾಮೂಹಿಕ ಸಂಘಟನೆಗಳು ಕೇಂದ್ರ ಸರ್ಕಾರದ ಕೃಷಿ ನೀತಿಗಲ್ ವಿರುದ್ಧದ ಈ ಹೋರಾಟವನ್ನು ವಿಸ್ತರಿಸುವ ಸಲುವಾಗಿ ರೈತರು ಮಾರ್ಚ್ ೧೫ ರಂದು ಕಾರ್ಪೊರೇಟ್ ವಿರೋಧಿ ದಿನ ಮತ್ತು ಸರ್ಕಾರ ವಿರೋಧಿ ದಿನವನ್ನು ಒಳಗೊಂಡಿರುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.


ಇದನ್ನೂ ಓದಿ  : ರಾಷ್ಟ್ರ ರಾಜಧಾನಿಯಲ್ಲಿ 8ನೇ ತರಗತಿವರೆಗಿನ Students Exam ಬರೆಯಬೇಕಿಲ್ಲ, ಆದರೂ ಪಾಸ್!


ಮಾರ್ಚ್ 23 ರಂದು ಶಹೀದ್ ಭಗತ್ ಸಿಂಗ್ ಅವರ ಹುತಾತ್ಮ ದಿನವಾದ ದೇಶಾದ್ಯಂತದ ಯುವಕರು ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 28 ರಂದು ದೇಶಾದ್ಯಂತ ಹೋಳಿ ದಹನ್ ಅಂಗವಾಗಿ ರೈತ ವಿರೋಧಿ ಕಾನೂನುಗಳನ್ನು ಸುಡಲಾಗುವುದು ಎಂದು ರೈತ ಸಂಘಗಳು ತಿಳಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.