Bharat Bundh Tomorrow :ನಾಳೆ ಭಾರತ ಬಂದ್! ಏನೆಲ್ಲಾ ಬಂದ್ ಆಗಬಹುದು, ಅತ್ಯಗತ್ಯ ಮಾಹಿತಿ ಇಲ್ಲಿದೆ

ಫೆಬ್ರವರಿ 26 ಅಂದರೆ ನಾಳೆ, ಭಾರತದಾದ್ಯಂತ ವರ್ತಕರು  ಮತ್ತು ಸರಕು ಸಾಗಣೆದಾರರು  ಬಂದ್ ನಡೆಸಲಿದ್ದಾರೆ. ಈ ಬಂದ್ ಕಾರಣಕ್ಕೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಜನಜೀವನದ ಮೇಲೆ ಪ್ರಭಾವ ಬೀರಲಿದೆ.

Written by - Ranjitha R K | Last Updated : Feb 25, 2021, 10:54 AM IST
  • ಫೆಬ್ರವರಿ 26 ಅಂದರೆ ನಾಳೆ, ಭಾರತದಾದ್ಯಂತ ವರ್ತಕರು ಮತ್ತು ಸರಕುಸಾಗಣೆದಾರರು ಬಂದ್ ನಡೆಸಲಿದ್ದಾರೆ.
  • ಈ ಬಂದ್ ಕಾರಣಕ್ಕೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಜನಜೀವನದ ಮೇಲೆ ಪ್ರಭಾವ ಬೀರಲಿದೆ.
  • ಬಂದ್ ಹೇಗಿರಬಹುದು.? ಯಾರೆಲ್ಲಾ ಬಂದ್ ಬೆಂಬಲಿಸಬಹುದು.? ನಿಮಗೆ ಅತ್ಯಗತ್ಯ ಮಾಹಿತಿ ಇಲ್ಲಿದೆ.
Bharat Bundh Tomorrow :ನಾಳೆ ಭಾರತ ಬಂದ್! ಏನೆಲ್ಲಾ ಬಂದ್ ಆಗಬಹುದು, ಅತ್ಯಗತ್ಯ ಮಾಹಿತಿ ಇಲ್ಲಿದೆ title=
ಫೆಬ್ರವರಿ 26 ಅಂದರೆ ನಾಳೆ, ಭಾರತದಾದ್ಯಂತ ವರ್ತಕರು ಮತ್ತು ಸರಕುಸಾಗಣೆದಾರರು ಬಂದ್ ನಡೆಸಲಿದ್ದಾರೆ. (file photo)

ಬೆಂಗಳೂರು : ಫೆಬ್ರವರಿ 26 ಅಂದರೆ ನಾಳೆ, ಭಾರತದಾದ್ಯಂತ ವರ್ತಕರು (Traders)  ಮತ್ತು ಸರಕು ಸಾಗಣೆದಾರರು (Transporters) ಬಂದ್ ನಡೆಸಲಿದ್ದಾರೆ. ಈ ಬಂದ್ ಕಾರಣಕ್ಕೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಜನಜೀವನದ ಮೇಲೆ ಪ್ರಭಾವ (paralysed) ಬೀರಲಿದೆ. ಜಿಎಸ್ಟಿ  (GST) ವ್ಯವಸ್ಥೆಯ ಕೆಲವು ಪ್ರಸ್ತಾವಗಳನ್ನು ಮರುಪರಿಶೀಲಿಸುವಂತೆ ಕೋರಿ, ಬಂದ್ ನಡೆಸಲಾಗುತ್ತಿದೆ. ಗೊತ್ತಿರಲಿ, 8 ಕೋಟಿ ವರ್ತಕರನ್ನು ಪ್ರತಿನಿಧಿಸುವ 40 ಸಾವಿರ ವರ್ತಕರ ಸಂಘಟನೆಗಳು ಬಂದ್ ಬೆಂಬಲಿಸಿವೆ. ಬಂದ್ ಹೇಗಿರಬಹುದು.?  ಯಾರೆಲ್ಲಾ ಬಂದ್ ಬೆಂಬಲಿಸಬಹುದು.? ನಿಮಗೆ ಅತ್ಯಗತ್ಯ ಮಾಹಿತಿ ಇಲ್ಲಿದೆ. 

1. ಇದು ರಾಷ್ಟ್ರವ್ಯಾಪಿ ಬಂದ್ (Bundh). ಹಾಗಾಗಿ ದೇಶಾದ್ಯಂತ ಹಲವು ಸೇವೆಗಳು ಬಂದ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಸಾಕಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. 
2. ಬಂದ್ ಗೆ  ಕರೆಕೊಟ್ಟಿದ್ದು ಅಖಿಲ ಭಾರತೀಯ ವರ್ತಕರ ಮಹಾಒಕ್ಕೂಟ (ಸಿಎಐಟಿ) The Confederation of All India Traders (CAIT). 
3. ಗೊತ್ತಿರಲಿ ಈ ಮಹಾ ಒಕ್ಕೂಟದಲ್ಲಿ 40 ಸಾವಿರ ವರ್ತಕರ ಸಂಘಟನೆಗಳಿವೆ. ಈ ಸಂಘಟನೆಗಳು 8 ಕೋಟಿ ವರ್ತಕರನ್ನು (Traders) ಪ್ರತಿನಿಧಿಸುತ್ತವೆ. ಈ 40ಸಾವಿರ ಸಂಘಟನೆಗಳೂ ಈ ಮಹಾಬಂದ್ಗೆೊ ಬೆಂಬಲ ನೀಡಿವೆ. 
4. ವರ್ತಕರಷ್ಟೇ ಅಲ್ಲ, ಸರಕು ಸಾಗಣೆದಾರರೂ ಕೂಡಾ ಬಂದ್ ಗೆ  ಬೆಂಬಲ ನೀಡಿದ್ದಾರೆ. ಇ ಇನ್ವಾಯ್ಸ್ ಗೆ  ಫಾಸ್ಟ್ಯಾಗ್ (fastag)ಕನೆಕ್ಟಿವಿಟಿಯನ್ನು ರದ್ದು ಪಡಿಸಬೇಕು ಎಂಬ ಬೇಡಿಕೆ ಸರಕು ಸಾಗಾಣೆ ಸಂಘಟನೆಯದ್ದು.
5. ಸರಕು ಸಾಗಾಣೆದಾರರ ಮಹಾಒಕ್ಕೂಟವಾಗಿರುವ ಅಖಿಲ ಭಾರತ ಸರಕು ಸಾಗಣೆದರರ ಕಲ್ಯಾಣ ಸಂಘ (The All India Transporters’ Welfare Association (AITWA)) ಬಂದ್ ಗೆ ಬೆಂಬಲ ನೀಡಿದೆ.
5. ಹಾಗಾಗಿ, ದೇಶಾದ್ಯಂತ ವರ್ತಕರಷ್ಟೆ ಅಲ್ಲ, ಸರಕು ಸಾಗಣೆ ಪ್ರಕ್ರಿಯೆ ಕೂಡಾ ವ್ಯತ್ಯಯ ಆಗಲಿದೆ.

ಇದನ್ನೂ ಓದಿ  : ರಾಷ್ಟ್ರ ರಾಜಧಾನಿಯಲ್ಲಿ 8ನೇ ತರಗತಿವರೆಗಿನ Students Exam ಬರೆಯಬೇಕಿಲ್ಲ, ಆದರೂ ಪಾಸ್!

ಯಾರದ್ದೆಲ್ಲಾ ಬೆಂಬಲ ಇದೆ ನೋಡಿ..!
ನಾಳೆ ನಡೆಸಲುದ್ದೇಶಿಸಿರುವ ಭಾರತ್ ಬಂದ್ ಗೆ  ಹಲವಾರು ಸಂಘಟನೆಗಳು ಬೆಂಬಲ ನೀಡಿವೆ. ಅವುಗಳ ವಿವರ ಹೀಗಿವೆ.
1. ಆಲ್ ಇಂಡಿಯಾ ಎಫ್ಎಂ ಸಿಜಿ (FMCG) ವಿತರಕರ ಸಂಘ
2. ಅಲ್ಯೂಮೀನಿಯಂ ಪಾತ್ರೆ ಉತ್ಪಾದಕರ ಸಂಘ
3. ಉತ್ತರ ಭಾರತ ಮಸಾಲೆ ವರ್ತಕರ ಸಂಘ
4. ಅಖಿಲ ಭಾರತೀಯ ಕಾಸ್ಮೆಟಿಕ್ (Cosmetic) ಉತ್ಪಾದಕರ ಸಂಘ
5. ಅಖಿಲ ಭಾರತೀಯ ಮಹಿಳಾ ಉದ್ಯಮಿಗಳ ಸಂಘ
6. ಅಖಿಲ ಭಾರತೀಯ ಕಂಪ್ಯೂಟರ್ ಡೀಲರುಗಳ ಸಂಘ 

ಕರ್ನಾಟಕದಲ್ಲಿ ಏನೆಲ್ಲಾ ಆಗಬಹುದು.?
ವಾಣಿಜ್ಯ ವಿಷಯದಲ್ಲಿ ಕರ್ನಾಟಕ (Karnataka) ಸಾಕಷ್ಟು ಮುಂದುವರಿದಿದೆ. ಹಾಗಾಗಿ, ನಾಳೆ ರಾಜ್ಯದಲ್ಲಿ ಎಲ್ಲಾ ಪ್ರಮುಖ ವರ್ತಕರ ಸಂಘಟನೆಗಳು ಬಂದ್ನಲ್ಲಿ ಪಾಲ್ಗೊಳ್ಳಲಿವೆ. ಹಾಗಾಗಿ, ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ. ಅಗತ್ಯ ವಸ್ತುಗಳನ್ನು ಇವತ್ತೆ ತಂದು ಇಟ್ಟುಕೊಳ್ಳಿ. ಸರಕು ಸಾಗಣೆದಾರರು ಕೂಡಾ ಬಂದ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ, ಹಣ್ಣು, ತರಕಾರಿ, ಧಾನ್ಯ, ಇತ್ಯಾದಿ ಸಾಗಾಣೆ ಇರಲಿಕ್ಕಿಲ್ಲ. ಹಾಗಾಗಿ ಅಗತ್ಯ ಮುಂಜಾಗ್ರತೆ ವಹಿಸಿ. ಸರಕು ಸಾಗಾಣೆದಾರರು ಹೆದ್ದಾರಿ ಬಂದ್ ನಡೆಸುವ ಸಾಧ್ಯತೆಗಳೂ ಇವೆ. ಹಾಗಾಗಿ, ಹೆದ್ದಾರಿ ಪಯಣ ಆದಷ್ಟೂ ಕಡಿಮೆ ಮಾಡಿ. ಹೂವು, ಹಣ್ಣು, ತರಕಾರಿ (Vegetable) , ಹಾಲು (Milk) , ಮೆಡಿಸಿನ್ ಇನ್ನಿತರ ಯಾವುದೇ ಖರೀದಿ ಇದ್ದರೂ ಇಂದೇ ಮುಗಿಸಿಬಿಡಿ. ನಾಳೆ ಆದಷ್ಟೂ ಮನೆಯೊಳಗಿರಿ.

ಇದನ್ನೂ ಓದಿ  : ಎಲ್ಲ ಜನರಿಗೆ ಉಚಿತ ಲಸಿಕೆ ಕೋರಿ ಮಮತಾ ದೀದಿಯಿಂದ ಪ್ರಧಾನಿ ಮೋದಿ ಪತ್ರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News