ನವದೆಹಲಿ: ಕರೋನವೈರಸ್ ಹಿನ್ನಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲು ಸರ್ಕಾರ ಶುಕ್ರವಾರ ನಿರ್ಧರಿಸಿದೆ. ಮೇ 3 ಕ್ಕೆ ಲಾಕ್ ಡೌನ್ 2.0 ಮುಕ್ತಾಯಗೊಳ್ಳುವ ಹಿನ್ನಲೆಯಲ್ಲಿ ಈಗ ಲಾಕ್ ಡೌನ್ ನ್ನು ಎರಡು ವಾರಗಳ ಕಾಲ ವಿಸ್ತರಿಸಲಾಗಿದೆ.


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ದಿನದಿಂದ ತಮ್ಮ ಮಂತ್ರಿಗಳೊಂದಿಗೆ ನಡೆಸಿದ ಹಲವಾರು ಸಭೆಗಳ ಹಿನ್ನಲೆಯಲ್ಲಿ ಈ ನಿರ್ಧಾರವು ಬಂದಿದೆ.ಲಾಕ್ ಡೌನ್ ಯೋಜನೆಯನ್ನು ರೂಪಿಸಲು ಪ್ರಧಾನಿ ಇಂದು ಗೃಹ ಸಚಿವ ಅಮಿತ್ ಶಾ, ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ವಿಮಾನಯಾನ ಸಚಿವ ಹರ್ದೀಪ್ ಪುರಿ ಅವರೊಂದಿಗೆ ಸಭೆ ನಡೆಸಿದರು.


ಈ ಭಾನುವಾರ ರಾಷ್ಟ್ರವ್ಯಾಪಿ ಸ್ಥಗಿತಗೊಳಿಸುವಿಕೆಯು ಮುಕ್ತಾಯಗೊಳ್ಳಲಿರುವ ಕಾರಣ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ತಮ್ಮ ಮಂತ್ರಿಗಳನ್ನು ಭೇಟಿಯಾಗಿ ಲಾಕ್ ಡೌನ್ ವಿಸ್ತರಣೆ ತಂತ್ರವನ್ನು ದೃಪಡಿದ್ದರು ಎನ್ನಲಾಗಿದೆ.