ಲಕ್ನೋ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮದುವೆ ಸಮಾರಂಭದ ವೇಳೆ ವರನಿಗೆ ಮೋಟಾರ್ ಸೈಕಲ್ ನೀಡಿಲ್ಲ ಎಂದು ಎಂದು ಮದುವೆಮಂಟಪದಿಂದಲೇ ವರನು ಕಾಲ್ಕಿತ್ತ ಘಟನೆ ನಡೆದಿದೆ. ಇದಾದ ನಂತರ ವಧು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.ಇದರಿಂದ ವಿಚಲಿತರಾದ ವಧುವಿನ ಮನೆಯವರು ಪೋಲಿಸ್ ಠಾಣೆಗೆ ತೆರಳಿ ದೂರನ್ನು ದಾಖಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಜಹಾಂಗೀರಾಬಾದ್ ಪೊಲೀಸ್ ಠಾಣೆಯ ವಧು ಮತ್ತು ಅಯೋಧ್ಯೆಯ ಮಾವಾಯಿಯ ವರನ ನಡುವೆ ವಿವಾಹವನ್ನು ಏರ್ಪಡಿಸಲಾಗಿತ್ತು. ಡಿಸೆಂಬರ್ 2 ರಂದು ವರನ ಕುಟುಂಬ ಬಾರಾತ್ ನೊಂದಿಗೆ ಆಗಮಿಸಿದಾಗ ಈ ಘಟನೆ ನಡೆದಿದೆ. ವಧುವಿನ ತಂದೆಯ ಪ್ರಕಾರ, ಶಾಸ್ತ್ರೋಕ್ತ ವಿವಾಹಗಳಿಗೆ ಚಿನ್ನದ ಉಂಗುರ ಮತ್ತು 5,000 ರೂಪಾಯಿಗಳ ವಿನಿಮಯ ನಡೆದಿದೆ.ತಿಲಕ ಮತ್ತು ಭೋಜನದ ನಂತರ, ವರನಿಗೆ ವರದಕ್ಷಿಣೆಯಲ್ಲಿ ಮೋಟಾರ್ ಸೈಕಲ್ ಬೇಕೆಂದು ಎರಡು ಕಡೆಯವರ ನಡುವೆ ವಾಗ್ವಾದ ನಡೆಯಿತು.


ಇದನ್ನೂ ಓದಿ: Vasishta Simha - Haripriya : ಕ್ಯೂಟ್‌ ಆಗಿ ಲವ್‌ ಮ್ಯಾಟರ್‌ ರಿವೀಲ್‌ ಮಾಡಿದ ವಸಿಷ್ಠ ಸಿಂಹ


ವಧುವಿನ ತಂದೆ ಆರ್ಥಿಕ ಪರಿಸ್ಥಿತಿಯಿಂದ  ಇದು ಅಸಾಧ್ಯವೆಂದು ಹೇಳಿದ್ದಾರೆ.ವರದಕ್ಷಿಣೆ ಬೇಡಿಕೆ ಈಡೇರದಿದ್ದಾಗ ವರನ ತಂದೆ ಶ್ಯಾಮ್ ಲಾಲ್ ಯಾವುದೇ ಹಿಂಜರಿಕೆಯಿಲ್ಲದೆ ವರನೊಂದಿಗೆ ಮದುವೆ ಸ್ಥಳದಿಂದ ನಿರ್ಗಮಿಸಿದ್ದಾರೆ.


ಮನೆಯವರ ಪ್ರಕಾರ ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆದರೆ ಅವರು ಏನೂ ಮಾಡಲಿಲ್ಲ, ಆಗ ಕಾನ್‌ಸ್ಟೆಬಲ್, ವರ ಶೀಘ್ರದಲ್ಲೇ ಬರುತ್ತಾನೆ ಮತ್ತು ಮದುವೆ ನಡೆಯುತ್ತದೆ ಎಂದು ಹೇಳಿ ನಮ್ಮನ್ನು ವಾಪಸ್ ಕಳುಹಿಸಿದರು, ಆದರೆ ಅವರು ಒಪ್ಪಲಿಲ್ಲ. ವಧು, "ನನ್ನ ತಂದೆ-ತಾಯಿ ಬಡವರು. ನನಗೆ ಮದುವೆಯಾಗುವಂತೆ ನಾನು ಪೊಲೀಸರನ್ನು ವಿನಂತಿಸುತ್ತೇನೆ. ಅವರು ಮದುವೆಯಾಗದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಧು ಹೇಳಿರುವುದನ್ನು ಆಜ್ ತಕ್ ವರದಿ ಮಾಡಿದೆ.


ಇದನ್ನೂ ಓದಿ :  ಸಿಂಹ ನಿನ್ನ ತೋಳಿನಲ್ಲಿ ಕಂದ ನಾನು...!!


ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುನೇಡು ಸಿಂಗ್ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.