ಕಮ್ಲೇಶ್ ಕುಮಾರ್ ಎಂಬ ರೈತ ತನ್ನ ಮೊದಲ ಪತ್ನಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಎರಡನೇ ಮದುವೆಯಾಗಲು ಹೊರಟ್ಟಿದ್ದರು.  ಅಂತೆಯ ಎಲ್ಲವೂ ನಿಶ್ಚಯಗೊಂಡು ಮದುವೆಯ ವಿಧಿವಿಧಾನಗಳನ್ನು ಆರಂಭಿಸಿದ್ದರು. ಮದುವೆ ಸಂಬಂಧಕ್ಕಾಗಿ ಮಧ್ಯವರ್ತಿಗೆ ರೂ. 30,000 ನೀಡಿದ್ದರು. ಆದರೆ, ಈಗ ಹಣವೂ ಇಲ್ಲ, ಪತ್ನಿಯೂ ಇಲ್ಲ ಎಂಬ ಸ್ಥಿತಿಯನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದನ್ನು ಓದಿ:10 ಸೆಕೆಂಡಲ್ಲಿ ಹಲ್ಲಿನಲ್ಲಿ ಅಂಟಿರುವ ಹಳದಿ ಕಲೆಗಳನ್ನು ಶಾಶ್ವತವಾಗಿ ತೆಗೆದುಹಾಕುತ್ತದೆ ಈ ವಸ್ತು! ಪ್ರತಿಯೊಬ್ಬರ ಮನೆಯಲ್ಲೂ ಇರುವ ಮಸಾಲೆಯಿದು


COMMERCIAL BREAK
SCROLL TO CONTINUE READING

ಈ ವಿಷಯದಲ್ಲಿ ಯಾವುದೇ ದೂರು ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ ಘಟನೆಯ ವಿವರಗಳನ್ನು ವರ ಹೇಳಿಕೊಂಡಿದ್ದಾನೆ. ಶುಕ್ರವಾರ ವಧು ತನ್ನ ತಾಯಿಯೊಂದಿಗೆ ದೇವಾಲಯಕ್ಕೆ ಬಂದಿದ್ದಳು. ಅಂತೆಯೇ ಕಮ್ಲೇಶ್ ತಮ್ಮ ಕುಟುಂಬದೊಂದಿಗೆ ಮದುವೆಗೆ ಸಿದ್ಧತೆ ಮಾಡಿಕೊಂಡು ಬಂದಿದ್ದರು. ಬಂದವರೇ ವಧುವಿಗೆ ಸೀರೆಗಳು, ಸೌಂದರ್ಯ ಸಾಧನಗಳು ಮತ್ತು ಆಭರಣಗಳನ್ನು ನೀಡಿದ್ದರು. ಮೊದಲೇ ಮಾತುಕತೆ ನಡೆಸಿದಂತೆ ಮದುವೆ ಸಂಪೂರ್ಣ ವೆಚ್ಚವನ್ನು ಕಮ್ಲೇಶ್‌ ವಹಿಸಿಕೊಂಡಿದ್ದರು.


ಮದುವೆ ಶಾಸ್ತ್ರಗಳು ಆರಂಭವಾದಾಗ, ವಧು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದಳು. ಅಲ್ಲಿಂದ ವಾಪಸ್‌ ಬಂದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಆಕೆಯ ತಾಯಿಯೂ ಮದುವೆ ಛತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದು ಆರೋಪಿಸಲಾಗಿದೆ.


"ನಾನು ನನ್ನ ಕುಟುಂಬವನ್ನು ಒಂದುಗೂಡಿಸಲು ಬಯಸಿದ್ದೆ. ಮತ್ತೊಂದು ಮದುವೆಯಾಗಲು ನಿರ್ಧರಿಸಿದ್ದೆ. ಆದರೆ ಈಗ ಇರುವುದನ್ನೂ ಕಳೆದುಕೊಂಡೆ," ಎಂದು ಕಮ್ಲೇಶ್ ಹೇಳಿದ್ದಾರೆ. ದಕ್ಷಿಣದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ದೂರು ಬಂದರೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇದನ್ನು ಓದಿ:ಇಂತಹ ಕೀಳುಮಟ್ಟದ ಸರ್ಕಾರವನ್ನು ಇತಿಹಾಸದಲ್ಲೇ ನೋಡಿಲ್ಲ: ನಿಖಿಲ್ ಕುಮಾರಸ್ವಾಮಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.