`ಅಧಿಕಾರದಲ್ಲಿರುವ ಅಜ್ಞಾನಿಗಳು ಲಕ್ಷದ್ವೀಪವನ್ನು ನಾಶ ಮಾಡುತ್ತಿದ್ದಾರೆ`
ಲಕ್ಷದ್ವೀಪದ ಹೊಸ ಕರಡು ನಿಯಮಗಳ ವಿಚಾರವಾಗಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಲಕ್ಷದ್ವೀಪದ ಹೊಸ ಕರಡು ನಿಯಮಗಳ ವಿಚಾರವಾಗಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲಕ್ಷದ್ವೀಪವು ಸಾಗರದಲ್ಲಿನ ಭಾರತದ ಆಭರಣವಾಗಿದೆ, ಅಧಿಕಾರದಲ್ಲಿರುವ ಅಜ್ಞಾನಿಗಳು ಲಕ್ಷದ್ವೀಪವನ್ನು ನಾಶಮಾಡುತ್ತಿದ್ದಾರೆ ಮತ್ತು ತಾವು ಕೇಂದ್ರಾಡಳಿತ ಪ್ರದೇಶದ ಜನರೊಂದಿಗೆ ನಿಲ್ಲುವುದಾಗಿ ರಾಹುಲ್ ಗಾಂಧೀ ಹೇಳಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಯವರ ನೈತಿಕ ಹೊಣೆಗಾರಿಕೆ ಇಂದಿನ ರಾಜಕೀಯದಲ್ಲಿ ಅಪರೂಪ - ಅಧೀರ್ ರಂಜನ್ ಚೌಧರಿ
Rahul Gandhi) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷದ್ವೀಪದ ಆಡಳಿತ ಅಧಿಕಾರಿ ಪ್ರಪುಲ್ ಪಟೇಲ್ ಕೇವಲ ದ್ವೀಪಗಳ ಶಾಂತಿ ಮತ್ತು ಸಂಸ್ಕೃತಿಯನ್ನು ನಾಶಪಡಿಸುವುದಷ್ಟೇ ಅಲ್ಲದೆ ಅನಿಯಂತ್ರಿತ ನಿರ್ಬಂಧಗಳನ್ನು ಹೇರುವ ಮೂಲಕ ಜನರಿಗೆ ಕಿರುಕುಳ ನೀಡಲಾಗುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರನ್ನು ಜೈಲಿಗೆ ಹಾಕಲಾಗುತ್ತದೆ- ರಾಹುಲ್ ಗಾಂಧಿ
ಇನ್ನೊಂದೆಡೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟೀಕಾ ಪ್ರಹಾರ ನಡೆಸಿ "ಬಿಜೆಪಿ ಸರ್ಕಾರ ಮತ್ತು ಅದರ ಆಡಳಿತವು ತನ್ನ ಪರಂಪರೆಯನ್ನು ನಾಶಮಾಡಲು, ಲಕ್ಷದ್ವೀಪದ ಜನರಿಗೆ ಕಿರುಕುಳ ನೀಡಲು ಅಥವಾ ಅವರ ಮೇಲೆ ಅನಿಯಂತ್ರಿತ ನಿರ್ಬಂಧಗಳನ್ನು ಮತ್ತು ನಿಯಮಗಳನ್ನು ಹೇರಲು ಯಾವುದೇ ವ್ಯವಹಾರವನ್ನು ಹೊಂದಿಲ್ಲ" ಎಂದು ಹೇಳಿದರು.
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.