ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಹೇಳಿಕೆ ರಾಜ್ಯಕ್ಕೆ  ಅವಮಾನ ಆದ್ದರಿಂದ ಅವರು ರಾಜಿನಾಮೆ ನೀಡಬೇಕೆಂದು ಸಂಜಯ್ ರಾವತ್ ಶನಿವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ವೀರ್ ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿಯವರ ಹೇಳಿಕೆಯನ್ನು ವಿರೋಧಿಸಿ ಪಕ್ಷವು ಬಿಜೆಪಿಯನ್ನು ಪ್ರತಿಭಟಿಸುತ್ತಿದೆ ಮತ್ತು ಅವರು ಈಗ ರಾಜಭವನದ ವಿರುದ್ಧ ಪ್ರತಿಭಟಿಸಬೇಕಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.


ರಾಜ್ಯಪಾಲರ  ಹೇಳಿಕೆಯು ಮಹಾರಾಷ್ಟ್ರ ಮತ್ತು ಶಿವಾಜಿ ಮಹಾರಾಜ್‌ಗೆ ಅವಮಾನವಾಗಿದೆ. ವೀರ್ ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿಯವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಅವರು ಶೂಗಳಿಂದ ಹೊಡೆಯುತ್ತಿದ್ದಾರೆ. ಈಗ ಶೂಗಳು ರಾಜಭವನಕ್ಕೆ ಹೋಗಬೇಕು, ಏಕೆಂದರೆ ಅವರು ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ್ದಾರೆ, ನೀವು ಅಲ್ಲಿಗೆ ಹೋಗದಿದ್ದರೆ ನೀವು  ಮಹಾರಾಷ್ಟ್ರದ ಮಕ್ಕಳಲ್ಲ ಬದಲಾಗಿ ನೀವು ನಕಲಿ" ಎಂದು ರಾವತ್ ಹೇಳಿದ್ದಾರೆ.ಕಿಚನ್‌ನಲ್ಲಿ ಕಿಚ್ಚ : ಬಿಗ್‌ಬಾಸ್ ಸ್ಪರ್ಧಿಗಳಿಗೆ ರುಚಿ ರುಚಿಯಾದ ಅಡುಗೆ ಮಾಡಿಕೊಟ್ಟ ಸುದೀಪ್


ಮೊನ್ನೆ ಶನಿವಾರ, ಔರಂಗಾಬಾದ್‌ನ ಡಾ ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಮಹಾರಾಷ್ಟ್ರ ರಾಜ್ಯಪಾಲರು, ಶಿವಾಜಿ ಮಹಾರಾಜರು ಹಳೆಯ ವಿಗ್ರಹವಾಗಿದ್ದಾರೆ ಮತ್ತು ಹೊಸದನ್ನು ನೀವು ಬಾಬಾಸಾಹೇಬ್ ಅಂಬೇಡ್ಕರ್‌ ರಿಂದ ಹಿಡಿದು ನಿತಿನ್ ಗಡ್ಕರಿ ಅವರ ವರೆಗೆ ಕಾಣಬಹುದು ಎಂದು ಹೇಳಿದ್ದರು. "ನೀವು ನಿಮ್ಮ ಆದರ್ಶ ವ್ಯಕ್ತಿಗಳನ್ನು ಹುಡುಕಲು ಎಲ್ಲೆಡೆ ನೋಡಬೇಕಾಗಿಲ್ಲ ನೀವು ಅವರನ್ನು ಇಲ್ಲಿಯೇ ಮಹಾರಾಷ್ಟ್ರದಲ್ಲಿ ಕಾಣಬಹುದು. ಛತ್ರಪತಿ ಶಿವಾಜಿ ಮಹಾರಾಜರು ಈಗ ಹಳೆಯ ವಿಗ್ರಹವಾಗಿದ್ದಾರೆ, ನೀವು ಈಗ ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಹಿಡಿದು ನಿತಿನ್ ಗಡ್ಕರಿವರೆಗೆ ಹೊಸಬರನ್ನು ಕಾಣಬಹುದು ಎಂದು ಹೇಳಿದರು.


ಇದನ್ನೂ ಓದಿ: ಹನಿ ಟ್ರಾಪ್ ಹನಿಗಳು ಸಿಎಂ ಕಚೇರಿಯಲ್ಲಿ ಬಿದ್ದಿದ್ದರ ಬಗ್ಗೆ ಸಿಎಂ ಬೊಮ್ಮಾಯಿ ಮಾತಾಡ್ಬೇಕು: ಕಾಂಗ್ರೆಸ್


ಶಿವಸೇನೆಯ ಉದ್ಧವ್ ಠಾಕ್ರೆ ಬಣದ ವಕ್ತಾರರು ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಿದ್ದಾರೆ, ಅವರು ಮಹಾನ್ ನಾಯಕರನ್ನು ಅಗೌರವಗೊಳಿಸುತ್ತಾರೆ ಎಂದು ಹೇಳಿದ್ದಾರೆ." ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ದೇವರು ಮಾತ್ರವಲ್ಲ, ನಮ್ಮ ಸ್ಫೂರ್ತಿಯ ಮೂಲ. ಅವರು ಯಾವಾಗಲೂ ಎಲ್ಲರಿಗೂ ಆರಾಧ್ಯ ದೈವವಾಗಿದ್ದಾರೆ.” ಎಂದು ಉದ್ಧವ್ ಸೇನೆಯ ವಕ್ತಾರ ಆನಂದ್ ದುಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.


"ರಾಜ್ಯಪಾಲರ ಹೇಳಿಕೆಗಳ ಪ್ರಕಾರ, ಶ್ರೀರಾಮ ಮತ್ತು ಶ್ರೀಕೃಷ್ಣ ಕೂಡ ಹಳೆಯ ವಿಗ್ರಹಗಳಾಗಿದ್ದಾರೆ. ನಾವು ಈಗ ಪೂಜಿಸಲು ಹೊಸ ದೇವತೆಗಳನ್ನು ಹುಡುಕಬೇಕೇ?" ರಾಜ್ಯಪಾಲರ ಹೇಳಿಕೆಯನ್ನು ಬಲವಾಗಿ ಖಂಡಿಸಬೇಕು ಎಂದು ದುಬೆ ಕೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.