ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದ ದತ್ತು ಬೋಕನಾಲ್ ಹೆಸರು ನಿಮಗೆ ಗೊತ್ತಿರಬಹುದು ಅಥವಾ ಕೆಲವರಿಗೆ ತಿಳಿಯದೆ ಇರಬಹುದು. ಆದರೆ ಈಗ ಈ ವ್ಯಕ್ತಿಯ ಸಂಘರ್ಷ ಮಾತ್ರ ಎಲ್ಲರನ್ನು ಅಚ್ಚರಿಗೊಳಿಸುತ್ತದೆ. ದತ್ತು ಬೋಕನಾಲ್ ಅವರು ಇತ್ತೀಚಿಗೆ ನಡೆದ ಜಕಾರ್ತಾದಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ ಬೋಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು. 


COMMERCIAL BREAK
SCROLL TO CONTINUE READING

ದತ್ತು ಬೋಕನಾಲ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಪೆಟ್ರೋಲ್ ಪಂಪಗಳಲ್ಲಿಯೂ ಸಹಿತ ಕಾರ್ಯನಿರ್ವಹಿಸಿದ್ದಾರೆ.ಮೂಲತಃ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಚಂದ್ವಾಡ್ ಗ್ರಾಮದಾಗಿರುವ ದತ್ತು ಬಾಲ್ಯದಲ್ಲಿ ತಮ್ಮ ತಂದೆಯ ಜೊತೆ ಕೂಲಿಯ ಕೆಲಸಕ್ಕೆ ಹೋಗುತ್ತಿದ್ದರು.ಅಲ್ಲದೆ ತಾವು ರಿಯೋ ಒಲಂಪಿಕ್ಸ್ ನಲ್ಲಿ ಪಾಲ್ಗೊಂಡಾಗ ಅವರ ತಾಯಿ ಕೊಮಾ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. 


ಈ ಕುರಿತಾಗಿ ಪ್ರತಿಕ್ರಿಯಿಸಿರುವ ದತ್ತು ಅವರು "ನನ್ನ ಕುಟುಂಬವು ನಾನು 2004-05ರಲ್ಲಿ ಬೇರೆಯಾದಾಗ ಐದನೇ ತರಗತಿಯಲ್ಲಿದ್ದೆ. ಇದರ ನಂತರ ನಾವು ಎರಡು ರೋಟಿಯು ಸಹ ಕಷ್ಟವಾಗಿತ್ತು .ನಂತರ ನಾನು ನನ್ನ ತಂದೆಯೊಂದಿಗೆ ಕೆಲಸ ಮಾಡಲು ನಿರ್ಧರಿಸಿದೆನು. ಇದರ ಜೊತೆಗೆ ನಾನು ಅಧ್ಯಯನದ ಜೊತೆಗೆ ಮದುವೆಗಳಲ್ಲಿ  ಕೆಲಸಮಾಡುವುದು. ಕೃಷಿಸಾಗುವಳಿ, ಟ್ರಾಕ್ಟರ್ ಓಡಿಸುವುದು ಇತ್ಯಾದಿ. ಕೆಲಸಗಳನ್ನು ಮಾಡಿದೆ" ಎನ್ನುತ್ತಾರೆ. ಈಗ ಇಂತಹ ಖ್ಯಾತ ಕ್ರೀಡಾಪಟುವೋಬ್ಬನಿಗೆ ಯಾವುದೇ ಸ್ವಂತ ಮನೆ ಇಲ್ಲವೆನ್ನುವುದು ನಿಜಕ್ಕೂ ದುಃಖದ ವಿಷಯ.