ನವದೆಹಲಿ: COVID-19 ಮೇಲೆ ನಿಗಾವಹಿಸಲು ನಿರ್ಧರಿಸಿರುವ ಮೇಘಾಲಯ ಸರ್ಕಾರ ಜುಲೈ 24 ರಿಂದ 31 ರವರೆಗೆ ರಾಜ್ಯಕ್ಕೆ ಎಲ್ಲಾ  ಎಂಟ್ರಿ ಪಾಯಿಂಟ್ ಗಳನ್ನು ಮುಚ್ಚಲು ನಿರ್ಧರಿಸಿದೆ, ಗುರುವಾರ ಕೊರೊನಾ ಸಂಖ್ಯೆ 354 ಕ್ಕೆ ಏರಿದ ಹಿನ್ನಲೆಯಲ್ಲಿ ಸರ್ಕಾರ ಕ್ರಮ ಬಂದಿದೆ.


COMMERCIAL BREAK
SCROLL TO CONTINUE READING

"ಬೈರ್ನಿಹಾಟ್, ರಾಟಾಚೆರಾ, ಬಾಜೆಂಗ್ಡೋಬಾ, ಟಿಕ್ಕ್ರಿಕಿಲ್ಲಾ, ಮಿರ್ಜುಮ್ಲಾ ಮತ್ತು ಹಾಲಿಡಾಯಗಂಜ್ನಲ್ಲಿರುವ ರಾಜ್ಯದ ಎಲ್ಲಾ ಪ್ರಸ್ತುತ ಕಾರ್ಯಾಚರಣೆಯ ಪ್ರವೇಶ ಕೇಂದ್ರವು ಜುಲೈ 23 ರ ಮಧ್ಯರಾತ್ರಿಯಿಂದ 2020 ಜುಲೈ 31 ರ ಮಧ್ಯರಾತ್ರಿಯವರೆಗೆ ಮುಚ್ಚಲ್ಪಡುತ್ತದೆ ಎಂದು ಈ ಮೂಲಕ ತಿಳಿಸಲಾಗಿದೆ" ಎಂದು ಅಧಿಕೃತ ಆದೇಶ ಹೊರಡಿಸಿದೆ.


"ತುರ್ತು, ವೈದ್ಯಕೀಯ ಮತ್ತು ಅಗತ್ಯ ಸೇವೆಗಳು, ಸರಕುಗಳು ಮತ್ತು ಅಂತರರಾಜ್ಯ ಸಾರಿಗೆ ವಾಹನಗಳಿಗೆ ಸಂಬಂಧಿಸಿದ ಚಲನೆಯನ್ನು ಮಾತ್ರ ಈ ಅವಧಿಯಲ್ಲಿ ಅನುಮತಿಸಲಾಗುವುದು" ಎಂದು ಅದು ಹೇಳಿದೆ.


ಈ ಅವಧಿಯಲ್ಲಿ ಮೇಘಾಲಯಕ್ಕೆ ಭೇಟಿ ನೀಡುವ / ಹಿಂದಿರುಗುವ ಜನರು ತಮ್ಮ ಪ್ರಯಾಣದ ಯೋಜನೆಗಳನ್ನು ಮರು ನಿಗದಿಪಡಿಸುವಂತೆ ಸರ್ಕಾರವನ್ನು ಕೋರಿದೆ.