ಕಾಶ್ಮೀರ: ಕರೋನವೈರಸ್ ಕಾಲದಲ್ಲೂ ಭಯೋತ್ಪಾದಕರು ತಮ್ಮ ವರ್ತನೆ ಬದಲಾಯಿಸಿಕೊಳ್ಳುತ್ತಿಲ್ಲ. ಅದೇ ಸಮಯದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರಿಗೆ ಸೂಕ್ತ ಉತ್ತರವನ್ನು ನೀಡುತ್ತಿವೆ.


COMMERCIAL BREAK
SCROLL TO CONTINUE READING

ಪ್ಯಾಂಪೋರ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 3 ಭಯೋತ್ಪಾದಕರನ್ನು ಕೊಂದವು. ಅದೇ ಸಮಯದಲ್ಲಿ ಶೋಪಿಯಾನ್ (Shopian) ಕಾರ್ಯಾಚರಣೆಯಲ್ಲಿ ಸೇನೆಯು 5 ಭಯೋತ್ಪಾದಕರನ್ನು ಕೊಂದಿತು. ಈ ರೀತಿಯಾಗಿ ಸೇನೆಯು ಒಟ್ಟು 8 ಭಯೋತ್ಪಾದಕರನ್ನು ಕೊಂದಿದೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.


ಚೀನಾಕ್ಕೆ ಪಾಠ ಕಲಿಸಲು ವಿಚಕ್ಷಣ ವಿಮಾನಗಳ ನಿಯೋಜನೆ ಹೆಚ್ಚಿಸಿದ ಭಾರತ


ಹತ್ಯೆಗೀಡಾದ ಒಟ್ಟು ಭಯೋತ್ಪಾದಕರಲ್ಲಿ 2 ಭಯೋತ್ಪಾದಕರು ಮಸೀದಿಯಲ್ಲಿ ಅಡಗಿದ್ದರು ಎನ್ನಲಾಗಿದೆ. ಪ್ಯಾಂಪೋರ್‌ನಲ್ಲಿ ಕಾರ್ಯಾಚರಣೆ ನಡೆಸಿದ ತಂಡವನ್ನು ಪೊಲೀಸರು ಶ್ಲಾಘಿಸಿದ್ದಾರೆ.


ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಮಾತನಾಡಿ, 'ಮಸೀದಿಯಲ್ಲಿ ಅಡಗಿರುವ 2 ಭಯೋತ್ಪಾದಕರು ಹತರಾಗಿದ್ದಾರೆ. ಒಟ್ಟು 3 ಭಯೋತ್ಪಾದಕರು ಹತರಾಗಿದ್ದಾರೆ. ಹುಡುಕಾಟ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.


ಇದೇ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುವಾಗ ಮಸೀದಿಯ ಘನತೆಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ. ಕಾರ್ಯಾಚರಣೆಯನ್ನು ಸಂಯಮದಿಂದ ಸಹಕರಿಸಿದ ಸ್ಥಳೀಯ ಜನರು ಮತ್ತು ಮಸೀದಿ ಸಮಿತಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ತಾಹಿರ್‌ಗೆ ಧನ್ಯವಾದ ಅರ್ಪಿಸಿದರು. ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಸೇನೆ ಮತ್ತು ಸಿಆರ್‌ಪಿಎಫ್‌ನನ್ನೂ ಅವರು ಶ್ಲಾಘಿಸಿದರು.


ಲಡಾಖ್ ವಿವಾದ: ಚೀನಾವನ್ನು ಆರ್ಥಿಕವಾಗಿ ಸದೆಬಡೆಯಲು ಭಾರತದ ನಿರ್ಧಾರ


ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಗುಂಡಿನ ದಾಳಿ ಅಥವಾ ಐಇಡಿ ಬಳಸಲಾಗಿಲ್ಲ ಎಂದು ಕಾಶ್ಮೀರ ವಲಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.


ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಆಯಾ ಪ್ರದೇಶಗಳಲ್ಲಿ ಮೊಬೈಲ್, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.