Corona Vaccine: ದೇಶದ 40 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಭೆ
ಇಂದಿಗೂ ದೇಶದ ಅನೇಕ ಭಾಗಗಳಲ್ಲಿ ವ್ಯಾಕ್ಸಿನೇಷನ್ ವೇಗವು ಬಹಳ ನಿಧಾನವಾಗಿ ಸಾಗುತ್ತಿದೆ. ದೇಶದಲ್ಲಿರುವ 40 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇನ್ನೂ 50 ಪ್ರತಿಶತ ಜನರು ಕರೋನಾ ಲಸಿಕೆಯ ಮೊದಲ ಡೋಸ್ ಕೂಡಾ ಹಾಕಿಸಿಕೊಂಡಿಲ್ಲ.
ನವದೆಹಲಿ : ವಿದೇಶ ಪ್ರವಾಸದಿಂದ ವಾಪಸಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ದೇಶದ 40ಕ್ಕೂ ಹೆಚ್ಚು ಜಿಲ್ಲೆಗಳ ಡಿಎಂಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜಾರ್ಖಂಡ್, ಮಣಿಪುರ, ಮಹಾರಾಷ್ಟ್ರ ಸಿಎಂಗಳ ಜೊತೆ ಕೂಡಾ, ಪ್ರಧಾನಿ ಮಾತುಕತೆ ನಡೆಸಲಿದ್ದಾರೆ. ಯಾವ ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ನಿಧಾನವಾಗಿ ಸಾಗುತ್ತಿದೆ ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಇದಲ್ಲದೆ, ಲಸಿಕೆ ಗಮನಾರ್ಹವಾಗಿ ಕಡಿಮೆಯಾದ ಸಭೆಯಲ್ಲಿ, ಆ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.
40ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ ಲಸಿಕೆ ಅಭಿಯಾನ :
ಇಂದಿಗೂ ದೇಶದ ಅನೇಕ ಭಾಗಗಳಲ್ಲಿ ವ್ಯಾಕ್ಸಿನೇಷನ್ (Vaccination) ವೇಗವು ಬಹಳ ನಿಧಾನವಾಗಿ ಸಾಗುತ್ತಿದೆ. ದೇಶದಲ್ಲಿರುವ 40 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇನ್ನೂ 50 ಪ್ರತಿಶತ ಜನರು ಕರೋನಾ ಲಸಿಕೆಯ (Corona Vaccine) ಮೊದಲ ಡೋಸ್ ಕೂಡಾ ಹಾಕಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಈ ಜಿಲ್ಲೆಗಳ ಡಿಎಂಗಳೊಂದಿಗೆ ವರ್ಚುವಲ್ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳೂ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ : Amarinder Singh Resignation: ಔಪಚಾರಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷ ಘೋಷಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್
ಯಾವ ರಾಜ್ಯದ ಎಷ್ಟು ಜಿಲ್ಲೆಗಳಲ್ಲಿ ಕಡಿಮೆ ಲಸಿಕೆ ?
50 ಪ್ರತಿಶತಕ್ಕಿಂತ ಕಡಿಮೆ ವ್ಯಾಕ್ಸಿನೇಷನ್ ಹೊಂದಿರುವ ರಾಜ್ಯಗಳೆಂದರೆ ಜಾರ್ಖಂಡ್‌ನ ಒಂಬತ್ತು ಜಿಲ್ಲೆಗಳು, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ತಲಾ ಎಂಟು ಜಿಲ್ಲೆಗಳು, ಮೇಘಾಲಯದ ನಾಲ್ಕು ಜಿಲ್ಲೆಗಳು, ಅರುಣಾಚಲ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತಲಾ ಆರು ಜಿಲ್ಲೆಗಳು, ತಮಿಳುನಾಡು, ಮಿಜೋರಾಂ ಮತ್ತು ಅಸ್ಸಾಂನಲ್ಲಿ ತಲಾ ಒಂದು.
ಕಡಿಮೆ ವ್ಯಾಕ್ಸಿನೇಷನ್ ಕಳವಳಕಾರಿ ವಿಷಯ :
100 ಕೋಟಿ ಲಸಿಕೆ (Corona Vaccine) ಹಾಕಿ ದಾಖಲೆ ನಿರ್ಮಿಸಿ ವಿಶ್ವವೇ ಹೊಗಳಿದ ದೇಶದಲ್ಲಿ ಕಡಿಮೆ ಲಸಿಕೆ ಹಾಕುವುದು ಸರಕಾರಕ್ಕೆ ಆತಂಕ ತಂದಿದೆ. ಏಕೆಂದರೆ ದೇಶದಲ್ಲಿ ಇನ್ನೂ 11 ಕೋಟಿ ಜನರು ಎರಡನೇ ಡೋಸ್ ಲಸಿಕೆ ತೆಗೆದುಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈವರೆಗೆ 6 ಬಾರಿ ಲಸಿಕೆ ಬಗ್ಗೆಯೇ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಇದನ್ನೂ ಓದಿ : Anil Deshmukh In ED Custody: ನವೆಂಬರ್ 6ರವರೆಗೆ ED ವಶಕ್ಕೆ Anil Deshmukh
ಒಂದೆಡೆ ಹಬ್ಬ ಹರಿದಿನಗಳು, ಮಾರುಕಟ್ಟೆಗಳಿಂದ ಬೀದಿಗಿಳಿಯುವ ನೂಕುನುಗ್ಗಲು ಮತ್ತೊಂದೆಡೆ ನಿಧಾನಗತಿಯಲ್ಲಿ ಸಾಗುತ್ತಿರುವ ಲಸಿಕಾ ಅಭಿಯಾನ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಅವರೇ ಸಭೆ ನಡೆಸಲು ನಿರ್ಧರಿಸಿದ್ದಾರೆ. ಲಸಿಕೆ ಲಭ್ಯವಿದ್ದರೂ ಜನರಲ್ಲಿ ಜಾಗೃತಿ ಮೂಡಿಸುವುದು ಹೇಗೆ ಎಂಬುದು ಸವಾಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.