sun never sets in these 6 countries: ಸೂರ್ಯ ಮುಳುಗದ ಸ್ಥಳಗಳ ಬಗ್ಗೆ ನಿಮಗೆ ತಿಳಿದಿದೆಯೇ? ಜಗತ್ತಿನಲ್ಲಿ 70 ದಿನಗಳಿಗಿಂತ ಹೆಚ್ಚು ಕಾಲ ಸೂರ್ಯ ಮುಳುಗದ ಕೆಲವು ಸ್ಥಳಗಳಿವೆ. ಇದು ಆಶ್ಚರ್ಯವಾದ್ರೂ ಸತ್ಯ. ಸೂರ್ಯ ಎಂದಿಗೂ ಅಸ್ತಮಿಸದ ದೇಶಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಆರ್ಕ್ಟಿಕ್ ವೃತ್ತದಲ್ಲಿರುವ ನಾರ್ವೆಯನ್ನು ಮಿಡ್ನೈಟ್ ಸನ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಅಂದರೆ ಮೇ ನಿಂದ ಜುಲೈ ಅಂತ್ಯದವರೆಗೆ ಸೂರ್ಯನು ಅಸ್ತಮಿಸದ ದೇಶ. ಇಲ್ಲಿ ಸೂರ್ಯನು 76 ದಿನಗಳವರೆಗೆ ಬೆಳಗುತ್ತಾನೆ. ನಾರ್ವೆಯ ಸ್ವಾಲ್ಬಾರ್ಡ್‌’ನಲ್ಲಿಯೂ ಸಹ ಏಪ್ರಿಲ್ 10 ರಿಂದ ಆಗಸ್ಟ್ 23 ರವರೆಗೆ ಸೂರ್ಯ ಮುಳುಗುವುದಿಲ್ಲ.


ಇದನ್ನೂ ಓದಿ: ಬಿಗ್ ಬಾಸ್’ನಿಂದ ಹೊರಬರುತ್ತಿದ್ದಂತೆ ಕಾರ್ತಿಕ್-ಸಂಗೀತಾ ಲವ್ ಸ್ಟೋರಿ ಬಗ್ಗೆ ಸತ್ಯ ರಿವೀಲ್ ಮಾಡಿದ ನೀತು!


ಕೆನಡಾದ ವಾಯುವ್ಯ ಪ್ರಾಂತ್ಯಗಳಲ್ಲಿ ಆರ್ಕ್ಟಿಕ್ ವೃತ್ತದಿಂದ ಎರಡು ಡಿಗ್ರಿಗಳಷ್ಟು ಎತ್ತರದಲ್ಲಿರುವ ನುನಾವುತ್ ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸುಂದರವಾದ ನಗರವಾಗಿದೆ. ಈ ನಗರದಲ್ಲಿ ವರ್ಷದ ಎರಡು ತಿಂಗಳು ಸೂರ್ಯ ಮುಳುಗೋದೇ ಇಲ್ಲ.


ಗ್ರೇಟ್ ಬ್ರಿಟನ್ ನಂತರ ಐಲ್ಯಾಂಡ್ ಯುರೋಪಿನ ಅತಿದೊಡ್ಡ ದ್ವೀಪವಾಗಿದೆ. ಈ ದೇಶದಲ್ಲಿ ನೀವು ಒಂದೇ ಒಂದು ಸೊಳ್ಳೆಯನ್ನೂ ನೋಡಲು ಸಾಧ್ಯವಿಲ್ಲ. ದೇಶವಾಗಿದೆ. ಇನ್ನು ಐಲ್ಯಾಂಡಲ್ಲಿ ಜೂನ್ ತಿಂಗಳಲ್ಲಿ ಸೂರ್ಯ ಎಂದಿಗೂ ಅಸ್ತಮಿಸುವುದಿಲ್ಲ. ಮತ್ತು ರಾತ್ರಿಯಲ್ಲಿ ಸಹ ಹಗಲಿನಂತೆ ತೋರುತ್ತದೆ.


ಈ ನಗರವು ಅಲಾಸ್ಕಾದಲ್ಲಿದೆ. ಮೇ ಅಂತ್ಯದಿಂದ ಜುಲೈ ಅಂತ್ಯದವರೆಗೆ ಸೂರ್ಯನು ಬಾರೋದಲ್ಲಿ ಅಸ್ತಮಿಸುವುದಿಲ್ಲ. ಆದರೆ ನವೆಂಬರ್ ಆರಂಭದಲ್ಲಿ 30 ದಿನಗಳವರೆಗೆ ಕತ್ತಲೆಯಾಗಿ ಉಳಿಯುತ್ತದೆ. ಇದನ್ನು ಧ್ರುವ ರಾತ್ರಿಗಳು ಎಂದೂ ಕರೆಯುತ್ತಾರೆ.


ಸಾವಿರಾರು ಸರೋವರಗಳು ಮತ್ತು ದ್ವೀಪಗಳ ಭೂಮಿ, ಫಿನ್ಲೆಂಡ್’ನ ಹೆಚ್ಚಿನ ಭಾಗವು ಬೇಸಿಗೆಯಲ್ಲಿ ಕೇವಲ 73 ದಿನಗಳವರೆಗೆ ಸೂರ್ಯನನ್ನು ನೋಡುತ್ತದೆ. ಆದರೆ, ಚಳಿಗಾಲದ ಸಮಯದಲ್ಲಿ ಕತ್ತಲೆ ಇರುತ್ತದೆ. ಡಿಸೆಂಬರ್ ಮತ್ತು ಜನವರಿ ವರೆಗೆ ಈ ಪರಿಸ್ಥಿತಿಯನ್ನು ಕಾಣಬಹುದು.


ಇದನ್ನೂ ಓದಿ:  ತುಟಿಗೆ ತುಟಿ ತಾಗುವಂತೆ ಈ ನಟನ ಜೊತೆ ಮಾವಿನ ಕಾಯಿ ತಿಂದ ಮೇಘಾ ಶೆಟ್ಟಿ


ಮೇ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ, ಸ್ವೀಡನ್‌’ನಲ್ಲಿ ಮಧ್ಯರಾತ್ರಿಯ ಸುಮಾರಿಗೆ ಸೂರ್ಯ ಮುಳುಗುತ್ತಾನೆ. ಮತ್ತು ಬೆಳಿಗ್ಗೆ 4 ಗಂಟೆಗೆ ಹಗಲಾಗುತ್ತದೆ. ವರ್ಷದ ಆರು ತಿಂಗಳ ಕಾಲ ಇಲ್ಲಿ ಬೆಳಕಾಗೇ ಇರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ