ನವದೆಹಲಿ: ಕಾವೇರಿ ನೀರು ನಿರ್ವಹಣಾ ಮಂಡಳಿಯ ವಿಚಾರದಲ್ಲಿ ಮತ್ತೆ ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ಸುಪ್ರಿಂ ಕೋರ್ಟ್, ಕೇಂದ್ರ ಸರ್ಕಾರವು ಕೋರ್ಟ್ ನ ಆದೇಶವನ್ನು ಜಾರಿಗೊಳಿಸಬೇಕೆಂದು ಪುನರುಚ್ಚರಿಸಿದೆ.  


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರಿಂಕೋರ್ಟ್  ಮಂಡಳಿಯನ್ನು ರಚಿಸುವ ಪೂರ್ಣ ಜವಾಬ್ದಾರಿಯ ಸರ್ಕಾರದ್ದಾಗಿರುತ್ತದೆ ಪ್ರತಿ ಬಾರಿಯೂ ನ್ಯಾಯಾಲಯವೇ ವಿವಾದವನ್ನು ಬಗೆ ಹರಿಸಲು ಸಾದ್ಯವಿಲ್ಲ ಎಂದು ಕಿಡಿಕಾರಿದೆ
 
ಕೇಂದ್ರ ಸರ್ಕಾರವು ಸ್ಕೀಂ ನ ವಿಚಾರವಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತೆ ಈ ಹಿಂದೆ ಹೇಳಿರುವುದನ್ನೇ ಪುನರುಚ್ಚಿಸಿ ಕೇಂದ್ರ ಸರ್ಕಾರವು ಮೇ 3 ರೊಳಗೆ ಸ್ಕೀಂ ನ ಕರಡು ಪ್ರತಿ ಸಲ್ಲಿಸಬೇಕೆಂದು ಗಡುವು ನೀಡಿದ್ದಾರೆ. 


ಆ ಮೂಲಕ ಸುಪ್ರಿಂ ಕೋರ್ಟ್ ಪರೋಕ್ಷವಾಗಿ ಮಂಡಳಿ ಸ್ಥಾಪನೆಯ ಸಾಧ್ಯತೆಯನ್ನು ತಳ್ಳಿಹಾಕಿದೆ. ಕೇಂದ್ರ ಸರ್ಕಾರವು ರಚಿಸುವ ಸ್ಕೀಂ ನ ಅನ್ವಯ ಕಾವೇರಿ ನೀರನ್ನು ಹಂಚಿಕೆ ಮಾಡಲು ಸುಪ್ರಿಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.