ಪಟಾಕಿ ವ್ಯಾಪಾರಿಗಳ ಬೇಡಿಕೆಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್
ದೆಹಲಿ ಹಾಗೂ ಎನ್ಸಿಆರ್ ಗಳಲ್ಲಿ ಪಟಾಕಿ ಮಾರಾಟ ನಿಷೇಧಿಸಲು ವ್ಯಾಪಾರಿಗಳು ಹಾಕಿದ್ದ ಅರ್ಜಿಯನ್ನು ಎಸ್ಸಿ ತಿರಸ್ಕರಿಸಿದೆ.
ನವ ದೆಹಲಿ: ದೆಹಲಿ ಮತ್ತು ಎನ್ಸಿಆರ್ ಗಳಲ್ಲಿ ಪಟಾಕಿ ಮಾರಾಟ ನಿರ್ಬಂಧವನ್ನು ಕೈಬಿಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದ್ದು, ಪಟಾಕಿ ನಿಷೇಧದ ವಿರುದ್ಧ ಅರ್ಜಿ ಹಾಕಿದ್ದ ಪಟಾಕಿ ಮಾರಾಟಗಾರರಿಗೆ ತೀವ್ರ ಹಿನ್ನೆಡೆಯಾಗಿದೆ.
ಪಟಾಕಿ ನಿಷೇಧಕ್ಕೂ ಮೊದಲು ಖರೀದಿಸಿದ ಪಟಾಕಿಗಳನ್ನು ಉಪಯೋಗಿಸಬಹುದು ಎಂದು ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಹೆಚ್ಚುವರಿಯಾಗಿ ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಇದೇ ಸಂದರ್ಭದಲ್ಲಿ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.
ದೆಹಲಿ ಎನ್ಸಿಆರ್ ಗಳಲ್ಲಿ ಪಟಾಕಿ ನಿಷೇಧಿಸಿ ಸುಪ್ರೀಂಕೋರ್ಟ್ ಇತ್ತೀಚಿಗೆ ಹೊರಡಿಸಿದ್ದ ಆದೇಶದಲ್ಲಿ ತಾತ್ಕಾಲಿಕ ಅನುಮತಿ ಹೊಂದಿರುವ ವ್ಯಾಪಾರಿಗಳು, ಪಟಾಕಿ ಮಾರಟಕ್ಕೆ ನಿಷೇಧ ಹೇರಿರುವುದನ್ನು ಹಿಂಪಡೆಯುವಂತೆ ಕೋರಿ ನಿನ್ನೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.