ನ್ಯಾಯ ದೇಗುಲ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಿದೆ- ಪ್ರಧಾನಿ ಮೋದಿ
ಸುಪ್ರೀಂಕೋರ್ಟ್ ನೀಡಿರುವ ಅಯೋಧ್ಯೆಯ ತೀರ್ಪುನ್ನು ಪ್ರಧಾನಿ ಮೋದಿ ಸ್ವಾಗತಿಸಿ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜನರ ನಂಬಿಕೆಯನ್ನು ಪುನರುಚ್ಚರಿಸುತ್ತದೆ` ಎಂದು ಹೇಳಿದ್ದಾರೆ. ಇದೆ ವೇಳೆ ಅವರು ಜನರಲ್ಲಿ ಶಾಂತಿ ಮತ್ತು ಐಕ್ಯತೆಗಾಗಿ ಮನವಿ ಮಾಡಿದ್ದಾರೆ.
ನವದೆಹಲಿ: ಸುಪ್ರೀಂಕೋರ್ಟ್ ನೀಡಿರುವ ಅಯೋಧ್ಯೆಯ ತೀರ್ಪುನ್ನು ಪ್ರಧಾನಿ ಮೋದಿ ಸ್ವಾಗತಿಸಿ 'ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜನರ ನಂಬಿಕೆಯನ್ನು ಪುನರುಚ್ಚರಿಸುತ್ತದೆ' ಎಂದು ಹೇಳಿದ್ದಾರೆ. ಇದೆ ವೇಳೆ ಅವರು ಜನರಲ್ಲಿ ಶಾಂತಿ ಮತ್ತು ಐಕ್ಯತೆಗಾಗಿ ಮನವಿ ಮಾಡಿದ್ದಾರೆ.
ಅಯೋಧ್ಯೆಯಲ್ಲಿನ ತೀರ್ಪನ್ನು ಯಾರ ಗೆಲುವು ಅಥವಾ ಸೋಲು ಎಂದು ನೋಡಬಾರದು ಎಂದು ತಮ್ಮ ಹೇಳಿಕೆಯನ್ನು ಮೋದಿ ಪುನರುಚ್ಚರಿಸಿದರು. 'ನ್ಯಾಯ ದೇವಾಲಯವು ದಶಕಗಳಷ್ಟು ಹಳೆಯದಾದ ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿದೆ' ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
'ಗೌರವಾನ್ವಿತ ಸುಪ್ರೀಂ ಕೋರ್ಟ್ ಅಯೋಧ್ಯೆ ವಿಷಯದ ಬಗ್ಗೆ ತನ್ನ ತೀರ್ಪನ್ನು ನೀಡಿದೆ. ಈ ತೀರ್ಪನ್ನು ಯಾರಿಗೂ ಗೆಲುವು ಅಥವಾ ನಷ್ಟವೆಂದು ನೋಡಬಾರದು. ಅದು ರಾಮ್ ಭಕ್ತಿ ಅಥವಾ ರಹೀಮ್ ಭಕ್ತಿ ಆಗಿರಲಿ, ನಾವು ರಾಷ್ಟ್ರಭಕ್ತಿಯ ಮನೋಭಾವವನ್ನು ಬಲಪಡಿಸುವುದು ಕಡ್ಡಾಯವಾಗಿದೆ. ಶಾಂತಿ ಮತ್ತು ಸಾಮರಸ್ಯ ಮೇಲುಗೈ ಸಾಧಿಸುತ್ತದೆ' ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
ಅಯೋಧ್ಯೆಯಲ್ಲಿನ ವಿವಾದಿತ ಭೂಮಿಯನ್ನು ದೇವಾಲಯಕ್ಕಾಗಿ ಸರ್ಕಾರ ನಡೆಸುವ ಟ್ರಸ್ಟ್‌ಗೆ ನೀಡಲಾಗುವುದು ಮತ್ತು ಉತ್ತರ ಪ್ರದೇಶದ ಪವಿತ್ರ ಪಟ್ಟಣದಲ್ಲಿ ಪ್ರಮುಖ ತಾಣ ವನ್ನು ಮಸೀದಿಗೆ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗ ಈ ಪ್ರಕರಣದ ದಾವೆ ಹೂಡಿದವರಲ್ಲಿ ಒಬ್ಬರಾಗಿರುವ ರಾಮ್ ಲಲ್ಲಾ ಅಥವಾ ಶಿಶು ರಾಮ್ ಅವರಿಗೆ 2.77 ಎಕರೆ ವಿವಾದಿತ ಭೂಮಿಯ ಮಾಲೀಕತ್ವವನ್ನು ನೀಡಲಾಗುವುದು ಎಂದು ಸುಪ್ರೀಂ ತಿಳಿಸಿದೆ.
ಇನ್ನೊಂದೆಡೆಗೆ ನೂತನ ಮಸೀದಿಯನ್ನು ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಸೂಕ್ತ ಜಮೀನನ್ನು ನೀಡುವುದರ ಮೂಲಕ ಸಹಿಷ್ಣುತೆ ಮತ್ತು ಪರಸ್ಪರ ಸಹಬಾಳ್ವೆ ನಮ್ಮ ರಾಷ್ಟ್ರ ಮತ್ತು ಅದರ ಜನರ ಜಾತ್ಯತೀತ ಬದ್ಧತೆಯನ್ನು ಪೋಷಿಸುತ್ತದೆ' ಎಂದು ಸುಪ್ರೀಂ ಹೇಳಿದೆ.