ಶ್ರೀನಗರ: ಭಯೋತ್ಪಾದಕರು ಭಾನುವಾರ ಮತ್ತೊಂದು ಪುಲ್ವಾಮಾ-ಮಾದರಿಯ ದಾಳಿಯನ್ನು ಯೋಜಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ. ಈ ದಾಳಿ ನಡೆಸಲು ಅವರು  ಮೋಟಾರು ಬೈಕನ್ನು ಬಳಸಬಹುದೆಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಝೀ ನ್ಯೂಸ್ ಗೆ ದೊರೆತಿರುವ ಮಾಹಿತಿ ಪ್ರಕಾರ ಭಯೋತ್ಪಾದಕರು ರಿಮೋಟ್ ಕಂಟ್ರೋಲ್ ರನ್ನು ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಫೋಟವನ್ನು ಪ್ರಚೋದಿಸಲು ಯೋಜಿಸುತ್ತಿದ್ದಾರೆ ತಿಳಿದುಬಂದಿದೆ. ಗುಪ್ತಚರ ಏಜೆನ್ಸಿಗಳು ಒದಗಿಸಿದ ಮಾಹಿತಿ ಹಿನ್ನಲೆಯಲ್ಲಿ ಈಗ ಹೆದ್ದಾರಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ .ಬೆಳಗ್ಗೆ 9 ಗಂಟೆ ನಂತರ ಭದ್ರತಾ ಪಡೆಗಳು ತಮ್ಮ ಚಲನವಲನಗಳನ್ನು ಆರಂಭಿಸಲು ಅವುಗಳಿಗೆ ಸೂಚನೆ ನೀಡಲಾಗಿದೆ.


ಜಮ್ಮು ಮತ್ತು ಕಾಶ್ಮೀರದ  ಭಯೋತ್ಪಾದನಾ ನಿಯಂತ್ರಣ ಗ್ರಿಡ್ನಲ್ಲಿ ಕೆಲಸ ಮಾಡುವ ತನಿಖಾ ಮತ್ತು ಭದ್ರತಾ ಸಂಸ್ಥೆಗಳು ಸಿದ್ಧಪಡಿಸಿದ ವರದಿ ಮೂಲಕ ತಿಳಿದು ಬಂದಿರುವುದೆನೆಂದರೆ  ಮೋಟರ್ಸೈಕಲ್ ಮತ್ತು ವಾಹನಗಳಲ್ಲಿ ಬಳಸಲಾಗುವ ಕೀಗಳು ಹಾಗೂ ಆಲಾರಂ ಗಳು ಈಗ ಭಯೋತ್ಪಾದಕರ ನೆಚ್ಚಿನ ಸಾಧನವಾಗಿದ್ದು ಇವುಗಳ ಮೂಲಕ ಐಇಡಿ ಗಳನ್ನು ಸ್ಪೋಟ ಗೊಳಿಸುತ್ತಾರೆ ಎನ್ನಲಾಗಿದೆ.


ಇತ್ತೀಚಿಗೆ ಭಯೋತ್ಪಾದಕರು ಶೆಫಿಯಾನ್ ಜಿಲ್ಲೆಯ ಸೈನ್ಯದ 44 ರಾಷ್ಟ್ರೀಯ ರೈಫಲ್ಸ್ (ಆರ್ಆರ್) ಘಟಕದ ಸಿಬ್ಬಂದಿಗಳನ್ನು ಗುರಿಯಾಗಿಸಲು ಐಇಡಿ ದಾಳಿಯನ್ನು ಮಾಡಿದ್ದರು. ಈ ವೇಳೆ ದ್ವಿಚಕ್ರ ವಾಹನವನ್ನು ಲಾಕ್ ಮತ್ತು ಅನ್ಲಾಕ್ ಮಾಡಲು ಭಯೋತ್ಪಾದಕರು ರಿಮೋಟ್ ಕೀಲಿಯನ್ನು ಬಳಸಿದ್ದಾರೆ ಎಂದು ತನಿಖೆಯ ನಂತರ ಪತ್ತೆಯಾಗಿದೆ.